ಸಂಬರಗಿ 28: 1962 ರ ಕಲ್ಲೂತಿ ಗ್ರಾಮದಲ್ಲಿ ನಿರ್ಮಿಸಿರುವ ಬಾಂದಾರ ಇಲ್ಲಿಯವರೆಗೆ ದುರಸ್ಥಿಗೊಂಡಿಲ್ಲ ಆ ಬಾಂದಾರನ್ನು ಶಾಸಕ ಶ್ರೀಮಂತ ಪಾಟೀಲ ಭೇಟಿ ನೀಡಿ ಪರಿಶೀಲನೆ ಮಾಡಿ ಶಾಸಕರ ವಿಶೇಷ ಅನುದಾನದಿಂಧ ದುರಸ್ತಿಗೊಳಿಸಿ ಈ ಭಾಗದ ಕೊಳವೆ ಭಾವಿ ಹಾಗೂ ತೆರೆದ ಭಾವಿಗೆ ನೀರಿನ ಪ್ರಮಾಣ ಹೆಚ್ಚಾಗಲು ಅನುಕೂಲವಾಗುತ್ತದೆ.
1962 ರಲ್ಲಿ ಡಿ.ಬಿ. ಪವಾರ ದೇಸಾಯಿ ಕರ್ನಾಟಕ ರಾಜ್ಯದ ಸಚೀವರಿದ್ದಾಗ ಈ ಭಾಗದ ಬರಗಾಲ ನೋಡಿ ಕಲ್ಲೂತಿ ಗ್ರಮದಲ್ಲಿ ಬಾಂದಾರನ್ನು ಮಂಜೂರಾತಿ ಮಾಡಿ ಸುತ್ತಮುತ್ತ ಇರುವ ಗ್ರಾಮ ಕಲ್ಲೂತಿ, ತಾವಂಶಿ, ಕಿರಣಗಿ, ಈ ಗ್ರಾಮದ ಅಗ್ರಾಣಿ ತೀರದ ಜಮೀನುಗಳ ರೈತರಿಗೆ ಅನುಕೂಲವಾಗಿದ್ದು ಬಂದಾರದಲ್ಲಿ ನೀರು ಸಂಗ್ರಹ ಆದನಂತರ ಸುಮಾರ 4 ಕೀ.ಮಿ ಅಂತರವರೆಗೆ ನೀರನ್ನು ತಡೆಗಟ್ಟಿ ಸುತ್ತಮುತ್ತ ಜಮೀನಿನ ರೈತರಿಗೆ ಅನುಕೂಲವಾಗುತ್ತದೆ ಬಾಂದಾರ ನಿರ್ಮಾಣ ಆದ ನಂತರ ಇಲ್ಲಿಯವರೆಗೆ ಬಾಂದಾರ ದುರಸ್ತಿಗೊಂಡಿಲ್ಲ ಬಾಂದಾರದಲ್ಲಿ ಹೂಳ ಸಂಗ್ರಹ ಆಗಿ ಬಾಂದಾರ ಮುಚ್ಚುವ ಸ್ಥಿತಿಯಲ್ಲಿದೆ. ಶಾಸಕ ಶ್ರೀಮಂತ ಪಾಟೀಲ ಆಯ್ಕೆಯಾದ ನಂತರ ಈ ಗ್ರಾಮದ ಗಣ್ಯರು ರವಿಕಾಂತ ಪಾಟೀಲ, ಶ್ರೀಮಂತ ಏಳಾವಕರ, ನೇತಾಜಿ ಜಾಧವ, ವಿಜಯ ವಾಘಮೊರೆ, ಉಮೇಶ ಪಾಟೀಲ ಇವರು ಸೇರಿಕೊಂಡು ಈ ವಿಷಯವನ್ನು ಶಾಸಕರ ಗಮನಕ್ಕೆ ತಂದರು. ಆನಂತರ ಶಾಸಕ ಶ್ರೀಮಂತ ಪಾಟೀಲ ಇವರು ಖುದ್ದಾಗಿ ಬಾಂದರಕ್ಕೆ ಬೇಟಿ ನೀಡಿ ಬಾಂದಾರ ಸ್ಥಳವನ್ನು ಪರಿಶೀಲನೆ ಮಾಡಿ ವಿಶೇಷ ಅನುದಾನ ನೀಡಿ ಬಾಂದಾರನ್ನು ಪುನರುಜ್ಜಿವನ ಮಾಡುತ್ತೇನೆ ಎಂದು ಹೇಳಿದರು. ಈ ವೇಳೆ ಆರ್.ಎಮ್ ಪಾಟೀಲ, ಮಹಾದೇವ ಕೋರೆ, ಅರ್ಜುನ ವಾಘಮೊರೆ, ಸುರೇಶ ಪಾಟೀಲ ಸೇರಿದಂತ ಅನೇಕ ಗಣ್ಯರು ಹಾಜರಿದ್ದರು.