ಲೋಕದರ್ಶನವರದಿ
ಗುಳೇದಗುಡ್ಡ29: ವಿಜ್ಞಾನ ಕೇವಲ ಒಂದು ವಿಷಯವಾಗಿರದೇ ಅದು ನಮ್ಮ ಜೀವನದ ಒಂದು ಭಾಗ. ಒಂದು ದೇಶದ ಸಮಗ್ರ ಬೆಳವಣಿಗೆ ಆ ದೇಶದ ಬುದ್ದಿವಂತ ಮಾನವ ಸಂಪನ್ಮೂಲವನ್ನು ಅವಲಂಬಿಸಿದೆ. ನಮ್ಮ ದೇಶದ ಅಭಿವೃದ್ಧಿಯಲ್ಲಿ ವಿಜ್ಞಾನದ ಪಾತ್ರ ಅಪಾರವಾಗಿದ್ದು ವಿಜ್ಞಾನದಿಂದ ಮಾತ್ರ ಬಲಿಷ್ಠ ಭಾರತ ನಿರ್ಮಾಣ ಸಾಧ್ಯ ಎಂದು ಇಲ್ಲಿನ ಶ್ರೀ ಗುರುಸಿದ್ಧೇಶ್ವರ ಬೃಹನ್ಮಠದ ಬಸವರಾಜ ಶ್ರೀಗಳು ಹೇಳಿದರು.
ಅವರು ಶನಿವಾರ ಪಟ್ಟಣದ ಜಗದ್ಗುರು ಗುರುಸಿದ್ಧೇಶ್ವರ ಅಂತರ್ರಾಷ್ಟ್ರೀಯ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಕಾರ್ಯಕ್ರ ಉದ್ಟಾಟಿಸಿ ಮಾತನಾಡಿದರು.
ಅಂಜನಾ ಪರ್ವತಿಕರ ಮುಖ್ಯ ಅತಿಥಿಗಳಾಗಿ ಮಾತನಾಡಿ, ಸರ್ ಸಿ. ವಿ ರಾಮನ್ ಅವರು ಭಾರತದ ಶ್ರೇಷ್ಠ ವಿಜ್ಞಾನಿ. ಅವರು ಭೌತಶಾಸ್ತ್ರ ವಿಷಯದಲ್ಲಿ ನೋಬೆಲ್ ಪಾರಿತೋಷಕ ಪಡೆದಿದ್ದು, ಅವರು ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವೆಂದರು.
ಶಾಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ವಿ. ಚಿಂದಿ ಮಾತನಾಡಿ, ಸರ್ ಸಿ. ವಿ. ರಾಮನ್ ಅವರು ಪ್ರತಿಪಾದಿಸಿದ ಬೆಳಕಿನ ಪ್ರತಿಫಲನ ಸಿದ್ದಾಂತದ ಸವಿ ನೆನಪಿಗಾಗಿ ಫೆಬ್ರುವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸುತ್ತಿರುವುದು ಅವರಿಗೆ ಸಲ್ಲಿಸಿದ ಗೌರವ ಎಂದು ಹೇಳಿದರು. ಶಿಕ್ಷಕ ಪ್ರವೀಣ ಪಾಟೀಲ ಮಾತನಾಡಿ, ವಿಜ್ಞಾನ ಎಂಬುದು ನೂತನ ಹದಭರಿತ ಜ್ಞಾನದ ಭಂಡಾರವಾಗಿದ್ದು ವಿದ್ಯಾರ್ಥಿ ಗಳು ಈ ಭಂಡಾರದ ಒಡೆಯರಾಗಬೇಕು.
ವಿದ್ಯಾಥರ್ಿಗಳು ಹಲವಾರು ವಿಜ್ಞಾನಿಗಳು ಪ್ರತಿಪಾಸಿದ ಸಿದ್ದಾಂತಗಳನ್ನು, ಸಂಶೋದನೆಗಳನ್ನು ಅಧ್ಯಯನ ಮಾಡಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಸತತವಾಗಿ ಅಧ್ಯಯನದಿಂದ ವೈಜ್ಞಾನಿಕ ಜ್ಞಾನವನ್ನು ಪಡೆದುಕೊಂಡು ದೇಶದ ಅಭಿವೃದ್ದಿಗೆ ತಮ್ಮದೇ ಆದ ಕೊಡುಗೆ ನೀಡಬೇಕೆಂದು ಹೇಳಿದರು.
ಶಾಲೆಯ ಪ್ರಾಚಾರ್ಯ ಎ. ಜಿ. ತುಪ್ಪದ ಅಧ್ಯಕ್ಷತೆವಹಿಸಿ ಮಾತನಾಡಿ, ಪ್ರತಿಯೊಂದು ಮಗು ಒಬ್ಬ ವಿಶಿಷ್ಠ ವಿಜ್ಞಾನಿಯಾಗಿದ್ದು ಅವರ ಪ್ರತಿಭೆಗೆ ತಕ್ಕ ಪ್ರೋತ್ಸಾಹ ನೀಡಬೇಕು. ಸೃಷ್ಠಿಯ ಪ್ರತಿಯೊಂದು ಆಗು ಹೋಗುಗಳಲ್ಲಿ ವಿಜ್ಞಾನ ಅಡಿಗಿದ್ದು ವಿದ್ಯಾರ್ಥಿ ಗಳು ಅದನ್ನು ಅರಿತುಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾಥರ್ಿಯು ತನ್ನ ಅಧ್ಯಯನದ ಪ್ರತಿ ವಿಷಯದಲ್ಲಿಯೂ ತನ್ನ ಗುರುಗಳಿಗೆ ಪ್ರಶ್ನಿಸುವ ಪ್ರವೃತ್ತಿ ಬೆಳೆಸಿಕೊಂಡರೆ ಎಲ್ಲ ಮಕ್ಕಳು ವೈಜ್ಞಾನಿಕ ಜ್ಞಾನವನ್ನು ಪಡೆಯಬಹುದು ಎಂದು ಹೇಳಿದರು.