ಶಾಲಾ ಸಂಸತ್ತು ಚುನಾವಣೆಗೆ ಚಾಲನೆ

ಲೋಕದರ್ಶನ ವರದಿ

ವಿಜಯಪುರ 20:  ನ್ಯಾಯಯುತ, ಅಕ್ರಮರಹಿತ ಚುನಾವಣೆಗಳು ಪ್ರಜಾಪ್ರಭುತ್ವ ಅಡಿಪಾಯವನ್ನು ಭದ್ರಪಡಿಸುತ್ತವೆ, ಎಂದು ದರಬಾರ ಪ.ಪೂ ಕಾಲೇಜಿನ ಪ್ರಾಧ್ಯಾಪಕಿ ಅಂಬುಜಾ ಕುಲಕಣರ್ಿ ಅಭಿಪ್ರಾಯ ಪಟ್ಟರು. ನಗರದ ವಿ.ವ. ಸಂಘದ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಪ್ರಾಥಮಿಕ ಶಾಲೆಗಳ ಶಾಲಾ ಸಂಸತ್ತು ಚುನಾವಣೆಗೆ ಚಾಲನೆ ನೀಡಿ ಮಾತನಾಡಿದ ಅವರು ' ಪ್ರಜಾಪ್ರಭುತ್ವದ ಅಳಿವು ಉಳಿವು ಚುನಾವಣೆಗಳ ನೈತಿಕತೆಯ ಮೇಲೆ ಅವಲಂಭಿಸಿದೆ ' ಎಂದರು. ಇಂದಿನ ಮಕ್ಕಳು ಭಾವಿ ಪ್ರಜೆಗಳಾಗುವುದರಿಂದ ಅವರಿಗೆ ಚುನಾವಣೆಯ ವ್ಯವಸ್ಥೆಯ ಅರಿವು ಮೂಡಿಸುವ ಉದ್ದೇಶದಿಂದ ಭಾರತ ಸಕರ್ಾರದ ಸಂಸದೀಯ ವ್ಯವಹಾರಗಳ ಸಚಿವಾಲಯ ಅನಕು ಸಂಸತ್ತು ಸ್ಪಧರ್ೆಯನ್ನು ಶಾಲಾ ಕಾಲೇಜು ಮಟ್ಟದಲ್ಲಿ ನಡೆಸುತ್ತಿದೆ ಎಂದು ತಿಳಿಸಿದ ಅವರು ಮಕ್ಕಳಿಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ತಿಳಿಸಿಕೊಡುವಲ್ಲಿ ಶಾಲಾ ಸಂಸತ್ತು ಚುನಾವಣೆಗಳು ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

 ಮುಖ್ಯ ಅತಿಥಿಗಳಾಗಿದ್ದ ವಿ.ಕೆ. ಗುಜರಿ ಅವರು ಚುನಾವಣೆಯಲ್ಲಿ ಸ್ಪಧರ್ಿಸುವುದು ಮತ್ತು ಗೆಲ್ಲುವುದು ಒಂದು ಹಂತವಾದರೆ ಚುನಾವಣೆ ನಂತರ ಮತದಾರರ ಸಮಸ್ಯೆಗಳನ್ನು ಪರಿಹರಿಸುವುದು ದೇಶದ ಒಳಿತನ್ನು ಬಯಸುವುದು ಚುನಾಯಿತ ಪ್ರತಿನಿಧಿಗಳ ಧರ್ಮವಾಗುವುದು ಎಂದು ಕರ್ತವ್ಯದ ಮಹತ್ವವನ್ನು ತಿಳಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯೋಪಾಧ್ಯ ರಮೇಶ ಕೋಟ್ಯಾಳ ಅವರು, ಚುನಾವಣೆಯನ್ನು ದ್ವಿಪಕ್ಷೀಯ ಮಾದರಿಯಲ್ಲಿ ನಡೆಸುವ ಮೂಲಕ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲಾಗಿದೆ ಎಂದರು. 

ಸ್ಪಧರ್ಾಳುಗಳು 'ವಿದ್ಯೆ ಮತ್ತು ಶ್ರದ್ಧೆ ' ಎಂಬ ಎರಡು ಪಕ್ಷಗಳ ಮೂಲಕ ಚುನಾವಣಾ ಕಣಕ್ಕಿಳಿದು ತಮ್ಮ ಪ್ರಚಾರ ಸಂದರ್ಭದಲ್ಲಿ ವಿಧ್ಯೆಯೇ ಮೇಲು ಎಂದು ಶ್ರದ್ಧೆಯೇ ಮೇಲು ಎಂದು ಮತದಾರರನ್ನು ಓಲೈಸಲು ಪ್ರಯತ್ನಿಸಿದರು. ಶಾಲಾ ಚುನಾವಣೆ ಸಮಿತಿ ವಿಧಿಸಿದ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಇಡೀ ಚುನಾವಣ ಪ್ರಕ್ರಿಯೆ ಯಾವುದೇ ಖಚರ್ು ವೆಚ್ಚಗಳಿಲ್ಲದೆ ನಡೆದದ್ದು ಮಾದರಿಯಾಗಿತ್ತು. ಅತ್ಯಂತ ತುರುಸಿನಿಂದ ನಡೆದ ಮತದಾನದಲ್ಲಿ ಆಂಗ್ಲ ಮಾಧ್ಯಮದ ದೀಪ್ತಿ ದೇಶಪಾಂಡೆ, ಹಾಗೂ ಖುಷಿ ಚೌಧರಿ ಮತ್ತು ಕನ್ನಡ ಮಾಧ್ಯಮದ ಅಮೀತ ತಾಂಬೆ, ಸೃಷ್ಠಿ ಮಿಜರ್ಿ, ಪ್ರಧಾನ ಕಾರ್ಯದಶರ್ಿಗಳಾಗಿ ಚುನಾಯಿತರಾದರು. ದಬರ್ಾರ ಪದವಿ ಪೂರ್ವ ಕಾಲೇಜಿನ ಬಿ.ಬಿ. ಬಿರಾದಾರ, ಹಾಗೂ ಶಿಕ್ಷಕ ಎ.ಜೆ. ಥೊಬ್ಬಿ ಅವರು ವೀಕ್ಷಕರಾಗಿ ಪಾಲ್ಗೊಂಡಿದ್ದುರ. ಮುಖ್ಯೋಪಾಧ್ಯ  ರೂಪಾ ತೋಳ  ಉಪಸ್ಥಿತರಿದ್ದರು.