ಲೋಕದರ್ಶನವರದಿ
ಮಹಾಲಿಂಗಪುರ31: ಸ್ಥಳೀಯ ಕೆಎಲ್ಇ ಡಿಪ್ಲೋಮಾ ಕಾಲೇಜಿನ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾಥರ್ಿಗಳು, ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರು ನಂದಗಾವ ನೆರೆ ಸಂತ್ರಸ್ತ ಶಾಲೆಗಳಿಗೆ ಭೇಟಿ ನೀಡಿ ಕಿರುಸಹಾಯ ಮಾಡುವ ಮೂಲಕ ಸ್ಪಂದಿಸಿದರು.
ನಂದಗಾವ ಗ್ರಾಮದ ಬಹುತೇಕ ಮನೆಗಳು ಪ್ರವಾಹದ ನೀರಿನಲ್ಲಿ ಮುಳುಗಿದ ಪರಿಣಾಮ ವಿದ್ಯಾರ್ಥಿಗಳು ಸ್ಕೂಲ್ ಬ್ಯಾಗ್ ನೀರುಪಾಲಾಗಿದ್ದವು. ಇದನ್ನು ಮನಗಂಡ ಕೆಎಲ್ಇ ಪಾಲಿಟೆಕ್ನಿಕ್ನ ಮೆಕ್ಯಾನಿಕಲ್ ವಿಭಾಗದ ವಿದ್ಯಾಥರ್ಿಗಳು ಹಾಗೂ ಸಿಬ್ಬಂದಿ ಅಂಥ 45 ಕಡು ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಎಲ್ಲರಿಗೂ ಶಾಲಾ ಬ್ಯಾಗ್ ವಿತರಿಸಿದರು.
ಕಾಲೇಜಿನ ಪ್ರಾಚಾರ್ಯ ಎಸ್.ಐ ಕುಂದಗೋಳ, ಮೆಕಾನಿಕಲ್ ವಿಭಾಗದ ಮುಖ್ಯಸ್ಥ ಉಮೇಶ ಹಾದಿಮನಿ, ವಿಭಾಗದ ಸಿಬ್ಬಂದಿ ರಾಚಣ್ಣ ಕಾಳಗಿ, ವಿಶಾಲ ಮೆಟಗುಡ್ಡ, ಪ್ರಕಾಶ ಬಡಿಗೇರ, ಪ್ರವೀಣ ಅವರಾದಿ, ವಿನಯ ಕಮ್ಮಾರ, ಚನ್ನಪ್ಪ ಬಡಿಗೇರ, ಶಂಕರ ಮಾಳಿ, ಮಹಾಲಿಂಗ ಬೆಳ್ಳಿ ಹಾಗೂ ಮೆಕಾನಿಕಲ್ ವಿಭಾಗದ 71 ವಿದ್ಯಾರ್ಥಿಗಳು ಇದ್ದರು