ಕಸ್ತೂರಿ ಅಪ್ಪಣ್ಣಾ ಧುಮಾಳೆಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರದಾನ

Savitribai Phule award to Kasturi Appanna Dhumale

ಕಸ್ತೂರಿ ಅಪ್ಪಣ್ಣಾ ಧುಮಾಳೆಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರದಾನ  

ಬೆಳಗಾವಿ 17: ಬೆಳಗಾವಿ ಸದಾಶಿವನಗರ ಸಾಯಿ ಜ್ಯೋತಿ ಜನ ಸೇವಾ ಸಂಸ್ಥೆಯ ಅಧ್ಯಕ್ಷೆ ಕಸ್ತೂರಿ ಅಪ್ಪಣ್ಣಾ ಧುಮಾಳೆ ಇವರಿಗೆ ರಾಜ್ಯ ಮಟ್ಟದ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ 2025ನ್ನು ದಿ.16 ರಂದು ಧಾರವಾಡದ ಆಲೂರ ವೆಂಕಟರಾವ ಸಭಾ ಭವನದಲ್ಲಿ ನಡೆದ ಸಾವಿತ್ರಿಬಾಯಿ ಫುಲೆ ಇವರ 194ನೇ ಜಯಂತೋತ್ಸವ ಸಮಾರಂಭದಲ್ಲಿ ಬುಡುರಕಟ್ಟಿ ಮಠದ ಶಿವ ಪಂಚಾಕ್ಷರಿ ಸ್ವಾಮಿಜಿಯವರು ಪ್ರದಾನ ಮಾಡಿದರು. ಸಾಯಿ ಜ್ಯೋತಿ ಜನ ಸೇವಾ ಸಂಘ ಕಳೆದ 25 ವರ್ಷಗಳಿಂದ ಬಡ ಶಾಲಾ ಮಕ್ಕಳಿಗೆ ಹಾಗೂ ಬಡ ವಿಧವೆಯರಿಗೆ ಮಾಡಿದ ಜನಪರ ಕಾರ್ಯಗಳನ್ನು ಪರಿಗಣಿಸಿ ಸದರಿ ಪ್ರಶಸ್ತಿ ನೀಡಲಾಗಿದ್ದು, ಈ ಹಿಂದೆ 2004ರ ಮೇ 1ರಂದು ಅಂದಿನ ಸಮಾಜ ಕಲ್ಯಾಣ ಸಚಿವರಾಗಿದ್ದ ಕೃಷ್ಣಪ್ಪ ಅವರು ಬೆಂಗಳೂರಿನಲ್ಲಿ ಕಸ್ತೂರಿ ಧುಮಾಳೆ ಅವರಿಗೆ ಮದರ ತೆರೆಸ್ಸಾ ಪ್ರಶಸ್ತಿ 2004 ನೀಡಿ ಗೌರವಿಸಿದ್ದರು.  ಸಾವಿತ್ರಿಬಾಯಿ ಫುಲೆ ಇವರ ಜಯಂತೋತ್ಸವ ಸಮಾರಂಭವನ್ನು ಕರ್ನಾಟಕ ರಾಜ್ಯ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಇವರು ಏರಿ​‍್ಡಸಿದ್ದು,  ಸಂಘದ ಅಧ್ಯಕ್ಷ ಡಾ. ವಿಶ್ವನಾಥ ಡಿ, ಪ್ರಧಾನ ಕಾರ್ಯದರ್ಶಿ ರಾಠೋಡ ಹಾಗೂ ಹುಬ್ಬಳ್ಳಿ    ಡೆಕ್ಕನ ಹೇರಲ್ಡ್‌ ಪತ್ರಿಕೆಯ ಹಿರಿಯ ಪತ್ರಕರ್ತ ರಾಜು ವಿಜಾಪುರ ಹಾಗೂ ಇತರೆ ಗಣ್ಯರು ಹಾಜರಿದ್ದರು.  ಉತ್ತಮ ಶಿಕ್ಷಕರು ಹಾಗೂ ಇನ್ನೀತರ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ ಗಣ್ಯರಿಗೆ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು. ಕಸ್ತೂರಿ ಅಪ್ಪಣ್ಣ ಧುಮಾಳೆ ಇವರು ಕೆ.ಎ.ಎಸ್‌. ಅಧಿಕಾರಿ ಹಾಗೂ ನಿವೃತ್ತ ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಎ. ಜೆ. ಧುಮಾಳೆ ಇವರ ಧರ್ಮಪತ್ನಿಯಾಗಿದ್ದು, ಸಮಾರಂಭದ ಸಂಘಟಕರ ಅವ್ಹಾನದ ಮೇರೆಗೆ ಅವರೂ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿಜೇತರಿಗೆ ಶುಭ ಕೋರಿದರು.