ಗ್ಯಾರಂಟಿ ಯೋಜನೆಗಳ ಪ್ರಗತಿ ಪರೀಶೀಲನೆ ಸಭೆ

Guarantee Scheme Progress Review Meeting

ಇಂಡಿ 05: ತಾಲೂಕು ಪಂಚಾಯತಿ ಸಭಾಭವನದಲ್ಲಿ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಐದು ಯೋಜನೆಗಳ ಯಶಸ್ವಿ ಅನುಷ್ಠಾನ ಕುರಿತು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ತಾಲೂಕು ಸಮಿತಿಯ ಅಧ್ಯಕ್ಷರಾದ ಪ್ರಶಾಂತ್ ಕಾಳೆ ಅವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರೀಶೀಲನಾ ಸಭೆ ನಡಿಯಿತು. 

ಇಂಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನಂದೀಪ ರಾಠೋಡ ಅವರು ಮಾತನಾಡಿ ಗ್ಯಾರಂಟಿ ಯೋಜನೆಯ ಶಕ್ತಿ ಯೋಜನೆಯಡಿ ಹೋಳಿಗೆ ತಯಾರಿಸಿ ಸ್ವಾವಲಂಬಿಗಳಾಗಿರುವ  ತಾಲೂಕಿನ ಬಬಲಾದ ಗ್ರಾಮದ ಒಡಳ ಧ್ವನಿ ಮಹಿಳಾ ಸಂಘದ ಕಾರ್ಯವನ್ನು ಶ್ಲಾಘಿಸಿದರು ಹಾಗೂ ಚಡಚಣ ನಗರದಲ್ಲಿ ಸೋಮವಾರ ಸಂಗಮೇಶ್ವರ ಕಾಲೇಜಿನ ಆವರಣದಲ್ಲಿ ಉದ್ಯೋಗ ಮೇಳ ಇದ್ದು ಸದರಿ ಮೇಳದ ಕುರಿತು ಚರ್ಚಿಸಿ ಉದ್ಯೋಗ ಮೇಳನಲ್ಲಿ  ಸಾರ್ವಜನಿಕರಿಗೆ ಪಾಲ್ಗೊಳ್ಳಲು ತಿಳಿಸಿದರು.  

ಗೃಹಲಕ್ಷ್ಮೀ, ಗೃಹ ಜ್ಯೋತಿ, ಶಕ್ತಿ ಯೋಜನೆ, ಯುವ ನಿಧಿ ಹಾಗೂ ಅನ್ನ ಭಾಗ್ಯ ಯೋಜನೆಗಳ ಕುರಿತು ಆಯಾ ಇಲಾಖೆಯ ಅಧಿಕಾರಿಗಳು ಯೋಜನೆಗಳ ಕುರಿತು ಸಭೆಗೆ ಮಾಹಿತಿ ನೀಡಿದರು.ಈ ವೇಳೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ತಾಲೂಕು ಸಮಿತಿಯ ಸದಸ್ಯರುಗಳಾದ ಮಹೇಶ ಶಿ ಹೊನ್ನಬಿಂದಗಿ, ಸಂಜಕುಮಾರ್  ನಾಯ್ಕೊಡಿ, ಸತೀಶ ಹತ್ತಿ, ನಿರ್ಮಲ ತಳಕೇರಿ,  ಸೈಲಜಾ ಜಾಧವ, ಶಶಿಕುಮಾರ ಮಠ, ಸಿದ್ದು ಕಟ್ಟಿಮನಿ, ಪ್ರಭು ಕುಂಬಾರ, ಸಂಕೇತ  ಜೋಶಿ, ಮಲೇಶಿ  ಬೋಸಗಿ, ರುದ್ರಗೌಡ  ಆಳಗೊಂಡ, ಭೀಮರಾಯ  ಮೇತ್ರಿ, ಸೋಮಣ್ಣ  ಪ್ರಚಂಡಿ, ಅಜಿತ  ಜೀರಗಿ ಹಾಗೂ ತಾಲೂಕಿನ ಎಲ್ಲ  ಇಲಾಖೆಗಳ ಅಧಿಕಾರಿಗಳು, ತಾ.ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.