ವಕ್ಫ್‌ ತಿದ್ದುಪಡಿ ಮಸೂದೆ ಅಂಗೀಕಾರ ನವ ಯುಗಕ್ಕೆ ನಾಂದಿ: ಬೆಲ್ಲದ

Passage of Waqf Amendment Bill marks the beginning of a new era: Bellada

ಧಾರವಾಡ 05: ವಕ್ಫ್‌ ತಿದ್ದುಪಡಿ ಮಸೂದೆ ಅಂಗೀಕಾರವು ನವಭಾರತದ ನವ ಯುಗಕ್ಕೆ ನಾಂದಿ ಎಂದು ವಿಧಾನಸಭೆಯ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಅಭಿಪ್ರಾಯಪಟ್ಟಿದ್ದಾರೆ. 

ವಕ್ಪ್‌ ಆಸ್ತಿಗಳ ಏಕೀಕೃತ ನಿರ್ವಹಣೆಗಾಗಿ ಪ್ರಧಾನಿ  ನರೇಂದ್ರ ಮೋದಿ ಅವರ ನೇತೃತ್ವದ ಎನ್ ಡಿ ಎ ಸರ್ಕಾರವು ಮಂಡಿಸಿದ್ದ ವಕ್ಫ್‌ ತಿದ್ದುಪಡಿ ಮಸೂದೆಯು ರಾಜ್ಯಸಭೆಯಲ್ಲಿ 128 ಮತಗಳನ್ನು ಪಡೆಯುವ ಮೂಲಕ ಅಂಗೀಕಾರಗೊಂಡಿರುವುದು ಸಂತಸದ ಸಂಗತಿ. ಇದರಿಂದ, ದಶಕಗಳಿಂದ ನಡೆಯುತ್ತಿದ್ದ ಅಕ್ರಮ ಭೂಮಿ ಒತ್ತುವರಿ ಹಾಗೂ ಭೂ ಅವ್ಯವಹಾರಗಳಿಗೆ ತೆರೆ ಬೀಳಲಿದೆ.  

ಈ ಮಸೂದೆಯು ಪಾರದರ್ಶಕತೆ, ಹೊಣೆಗಾರಿಕೆ ಮತ್ತು ನ್ಯಾಯಯುತ ಮೌಲ್ಯಗಳನ್ನು ಒಳಗೊಂಡಿದ್ದು, ಉತ್ತಮ ಆಡಳಿತ ಹಾಗೂ ನವಭಾರತದ ನಿರ್ಮಾಣ ದತ್ತ ಮತ್ತೊಂದು ಬಲಿಷ್ಠ ಹೆಜ್ಜೆಯಾಗಿದೆ. ನಿಜಕ್ಕೂ, ಇದು ಜನಸಾಮಾನ್ಯರ ಹಕ್ಕುಗಳ ರಕ್ಷಣೆಗೆ ದಾರೀದೀಪ ಎಂದು ಅವರು ಹೇಳಿದ್ದಾರೆ.