ನಂದಿನಿ ಹಾಲು ಬಳಸಿ ರೈತರ ಜೀವ ಉಳಿಸಿ: ಮುಗಳಿ

ಯರಗಟ್ಟಿ : ಇತ್ತೀಚಿನ ದಿನಮಾನಗಳಲ್ಲಿ ಸರಿಯಾಗಿ ಮಳೆಯಾಗದೇ ಅಂತರ್ಜಲ ಕುಸಿಯುತ್ತಿದೆ ರೈತರು ಅಲ್ಪಸ್ವಲ್ಪ ನೀರಿನಲ್ಲಿ ಕಷ್ಟಪಟ್ಟು ಬೇಸಾಯ ಮಾಡಿ ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ದೊರೆಯದೆ ಸಂಕಷ್ಟದಲ್ಲಿದ್ದಾಗ ಹೆಚ್ಚಿನ ರೈತರು ಹೈನುಗಾರಿಕೆಯತ್ತ ಮುಖಮಾಡಿ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ. ನಂದಿನಿ ಹಾಲನ್ನು ಬಳಸುವುದರಿಂದ ರೈತರ ಜೀವನವನ್ನು ಉಳಿಸಿದಂತಾಗುತ್ತದೆ ಎಂದು ಕೆಎಮ್ಎಫ್ ಜಿಲ್ಲಾ ಮಾಜಿ ಅಧ್ಯಕ್ಷ ಮಗೆಪ್ಪ ಮುಗಳಿ ಹೇಳಿದರು.

ಸ್ಥಳೀಯ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕ್ಷೀರ ಕ್ರಾಂತಿಯ ಹರಿಕಾರ ಡಾ.ವಗರ್ಿಸ್ ಕುರಿಯನ್ ಅವರ ಜನ್ಮದಿನದ ಅಂಗವಾಗಿ ರೋಗಿಗಳಿಗೆ ಹಾಲು ವಿತರಿಸಿ ಅವರು ಮಾತನಾಡುತ್ತಿದ್ದರು.

 ಕನರ್ಾಟಕ ಹಾಲು ಉತ್ಪಾದನಾ ಒಕ್ಕೂಟ ಸರಕಾರದ ಅಂಗ ಸಂಸ್ಥೆಯಾಗಿದ್ದು, ಕಲಬೆರಿಕೆ ರಹಿತ ಮತ್ತು ಉತ್ತಮ ಗುಣಮಟ್ಟದ ಹಾಲು ಮತ್ತು ಇತರ ಸಿಹಿ ತಿನಿಸುಗಳನ್ನು ಉತ್ಪಾದಿಸುತ್ತಿದೆ ಎಂದು ಹೇಳಿದರು.

ಕೆಎಮ್ಎಫ್ ಜಿಲ್ಲಾ ವ್ಯವಸ್ಥಾಪಕ ಜೆ.ಆರ್.ಮಂಡೇರಿ ಮಾತನಾಡುತ್ತಾ ಬೆಳಗಾವಿಯಲ್ಲಿ ಪ್ಲಾಕ್ಷಿಪ್ಯಾಕ್ ಘಟಕ ಸ್ಥಾಪನೆಯಾಗಿದ್ದು, ಇದರಿಂದ ಹಾಲು ಸಂಗ್ರಹಿಸಿ ಪ್ಯಾಕ್ ಮಾಡಿದ ಹಾಲು ಸುಮಾರು ಮೂರು ತಿಂಗಳ ವರೆಗೂ ಶುದ್ಧವಾಗಿರುತ್ತದೆ ಮತ್ತು ನಮ್ಮ ಸಂಸ್ಥೆಯಿಂದ ಪಶು ವೈದ್ಯಕೀಯ, ಪಶುಗಳಿಗೆ ಶುದ್ಧ ಆಹಾರ ಪೂರೈಕೆ, ಹೈನು ರಾಸುಗಳ ಸಾಕಾಣಿಕೆಯ ತರಬೇತಿ, ವಿವಿಧ ತಳೀಯ ಹೈನು ರಾಸುಗಳಿಗೆ ಕೃತಕ ಗರ್ಭಧಾರಣೆ ಹೀಗೆ ಹಲವಾರು ಸೌಲಭ್ಯಗಳು ಇರುತ್ತವೆ ಎಂದರು.

ಕೆಎಮ್ಎಫ್ ಜಿಲ್ಲಾ ಉಪ ವ್ಯವಸ್ಥಾಪಕ ಡಾ.ವ್ಹಿ.ಕೆ.ಜೋಶಿ, ತಾಲೂಕಾ ಅಧಿಕಾರಿ ಎಮ್.ಬಿ.ಗಾಣಗಿ, ಡಾ.ಭುವನೇಶ್ವರಿ ಬಳ್ಳೂರ, ಡಾ.ಪರಶುರಾಮ ರಾಯಬಾಗ, ಅಜರ್ುನ ಸವದತ್ತಿ, ಲಕ್ಷ್ಮಣ ಪಾಟೀಲ, ಲಕ್ಕಪ್ಪ ತಳವಾರ, ಅಜರ್ುನ ಕೌಜಲಗಿ, ಹೇಮಂತ ಹೊಂಗಲ, ಬಾಬು ನಧಾಪ ಮುಂತಾದವರಿದ್ದರು.