ಸತೀಶ ಶುಗರ್ಸ್ ರಜತ ಮಹೋತ್ಸವದ ವಿಶೇಷ ಅಂಚೆ ಲಕೋಟೆ ಬಿಡುಗಡೆ

Satish Sugars Silver Jubilee special envelope release

ಮೂಡಲಗಿ 12: ಸತೀಶ ಶುಗರ್ಸ್ ಕಾರ್ಖಾನೆಯು ಕಾರ್ಖಾನೆಯ  ಸಂಸ್ಥಾಪಕ ಅಧ್ಯಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿಯವರ ಮಾರ್ಗದರ್ಶನ ಮತ್ತು  ಆಡಳಿತ ಮಂಡಳಿಯ ನಿರ್ಣಯ, ರೈತ ಭಾಂದವರ ಸಹಾಯ ಸಹಕಾರ, ಅಧಿಕಾರಿಗಳ ಮತ್ತು ಕಾರ್ಮಿಕವ ಸಿಬ್ಬಂದಿ ವರ್ಗದವರ ಪರಿಶ್ರಮದಿಂದ ಕಾರ್ಖಾನೆಯು ಏಳ್ಗೆಯನ್ನು ಸಾಧಿಸುತ್ತಿದ್ದು, ಪ್ರಸಕ್ತ 2025ನೇ ಸಾಲಿನಲ್ಲಿ 25 ವರ್ಷಗಳನ್ನು ಪೊರೈಸುವುದರೊಂದಿಗೆ ರಜತ ಮಹೋತ್ಸವವನ್ನು ಆಚರಿಸುತ್ತಿದೆ ಎಂದು ಕಾರ್ಖಾನೆಯ ಚೇರಮನ್ ಮತ್ತು ಸಿ.ಎಫ್‌.ಓ ಪ್ರದೀಪಕುಮಾರ ಇಂಡಿ ಹೇಳಿದರು. 

ಅವರು ಬೆಳಗಾಯಲ್ಲಿ ಜರುಗಿದ ಅಂಚೆ ಇಲಾಖೆಯ ಏರಿ​‍್ಡಸಿದ ಅಂಚೆ ಚೀಟಿ ಪ್ರದರ್ಶನದಲ್ಲಿ ತಾಲೂಕಿನ ಹುಣಶ್ಯಾಳ ಪಿಜಿ ಬಳಿಯ ಸತೀಶ ಶುಗರ​‍್ಸ‌ ಕಾರ್ಖಾನೆಯ ರಜತ ಮಹೋತ್ಸವದ ಸತೀಶ ಶುಗರ‌್ಸ ಕಾರ್ಖಾನೆಯ  ಮಾಹಿತಿಯನ್ನೊಳಗೊಂಡ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಭಾರತೀಯ ಅಂಚೆ ಇಲಾಖೆಯು 150 ವರ್ಷಗಳ ಇತಿಹಾಸವನ್ನು ಹೊಂದಿದ್ದು, ಸ್ವತಂತ್ರ ಪೂರ್ವದಿಂದಲೂತನ್ನ ಸೇವೆಗಳನ್ನು ನೀಡುತ್ತಿದೆ. ಇದರಲ್ಲಿ ಮುಖ್ಯವಾಗಿ ಮೇಲ್ ಸೇವೆಗಳು, ಹಣಕಾಸು ಸೇವೆಗಳು, ವಿಮಾ ಸೇವೆ ಮತ್ತು ಅಂಚೆ ಚೀಟಿಗಳ ಸಂಗ್ರಹ ದಂತಹ ಹಲವಾರು ಸೇವೆಗಳನ್ನು ನೀಡುತ್ತಿದೆ. ಅಂಚೆ ಇಲಾಖೆಯು ಜಿಲ್ಲಾಮಟ್ಟದಲ್ಲಿ ಹಮ್ಮಿಕೊಂಡಿರುವ ಇಂತಹ ವಿಶೇಷ ಕಾರ್ಯಕ್ರಮದಲ್ಲಿ ಸತೀಶ್ ಶುಗರ​‍್ಸ‌ ಕಾರ್ಖಾನೆಯ ರಜತ ಮಹೋತ್ಸವದ “ವಿಶೇಷ ಅಂಚೆ ಲಕೋಟೆ” ಯನ್ನು ಅನಾವರಣಗೊಳಿಸಿರುವುದು ಸಂತೋಷದ ಸಂಗತಿಯಾಗಿದೆ ಎಂದರು. 

ಸಮಾರಂಭದಲ್ಲಿ ಉಪಸ್ಥಿತರಿದ ಬೆಳಗಾವಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ, ಅಂಚೆ ಇಲಾಖೆಯ ಅಧಿಕಾರಿಗಳಾದ ಎಸ್‌.ರಾಜೇಂದ್ರಕುಮಾರ್,  ಸುಶೀಲ್ ಕುಮಾರ,.ವಿ.ತಾರಾ, ವಿಜಯ ವಾದೋನಿ ಮತ್ತು ಪ್ರಖ್ಯಾತ ಅಂಚೆ ಚೀಟಿ ಸಂಗ್ರಹಕಾರ್ತಿ ಎನ್ ಶ್ರೀದೇವಿ ಅವರು ಸತೀಶ ಶುಗರ್ಸ್ ಕಾರ್ಖಾನೆಯ ರಜತ ಮಹೋತ್ಸವದ ಕಾರ್ಖಾನೆಯ  ಮಾಹಿತಿಯನ್ನೊಳಗೊಂಡ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸಿದರು.  

ಈ ಸಂದರ್ಭದಲ್ಲಿ ಕಾರ್ಖಾನೆಯ ಉಪಾಧ್ಯಕ್ಷರುಗಳಾದ ಎಲ್‌.ಆರ್‌.ಕಾರಗಿ, ಪಿ.ಡಿ.ಹೀರೆಮಠ, ಡಿ.ಆರ್‌.ಪವಾರ, ಎ.ಎಸ್‌.ರಾಣಾ ಮತ್ತು ಕಾರ್ಖಾನೆಯ ಅಧಿಕಾರಿಗಳು ಉಪಸ್ಥಿತರಿದ್ದರು.