ತಾಲೂಕಾಧ್ಯಕ್ಷರಾಗಿ ಶರಣಬಸವಗೌಡ ಆಯ್ಕೆ

ಲೋಕದರ್ಶನ ವರದಿ

ಶಿರಹಟ್ಟಿ 28: ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕಾಗಿ ನವೀನ ಅಳವಂಡಿ ಹಾಗೂ ಶರಣಬಸವಗೌಡ ಪಾಟೀಲ ಅವರು ಸ್ಪಧರ್ೆ ನಡೆಸಿದ್ದರು. ಒಟ್ಟು ಚಲಾವಣೆಯಾದ 20 ಮತಗಳಲ್ಲಿ ಶರಣಬಸವಗೌಡ ಪಾಟೀಲ ಅವರು 15 ಮತಗಳನ್ನು ಪಡೆದು ಜಯ ಸಾಧಿಸಿದರು. ಪ್ರತಿಸ್ಪಧರ್ಿ ನವೀನ ಅಳವಂಡಿ ಅವರು 5 ಮತಗಳನ್ನು ಪಡೆದು ಪರಾಭವಗೊಂಡರು.

ಈ ಸಂದರ್ಭದಲ್ಲಿ ರಾಜ್ಯ ಸರಕಾರಿ ನೌಕರರ ಸಂಘದ ನೂತನ ತಾಲೂಕಾಧ್ಯಕ್ಷ ಶರಣಬಸವಗೌಡ ಪಾಟೀಲ್ ಮಾತನಾಡಿ, ತಾಲೂಕಾ ಕೇಂದ್ರದಲ್ಲಿ ಅರ್ಧಕ್ಕೆ ಸ್ಥಗಿತವಾಗಿರುವ ನೌಕರರ ಭವನವನ್ನು ಪೂರ್ಣಗೊಳಿಸುವುದು. ಮತ್ತು ನೌಕರರ ಸಂಘ ಬಲಿಷ್ಠಗೊಳಿಸುವುದು. ನೌಕರರ ಬೇಡಿಕೆಗಳನ್ನು ಈಡೇರಿಸುವುದಕ್ಕಾಗಿ ಸಂಘಟನಾತ್ಮಕವಾಗಿ ಹೋರಾಟಕ್ಕೆ ಮುಂದಾಗುವುದು. ತಾಲೂಕಿನ  ಸರಕಾರಿ ನೌಕರರ ಸಂಘವನ್ನು ಭದ್ರಪಡಿಸುವುದು.ರಾಜ್ಯ ನೌಕರರ ಚೈತನ್ಯವನ್ನು ಕಾಪಾಡುವದಕ್ಕಾಗಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ನೌಕರರ ಆರೋಗ್ಯ ಕಾಪಾಡುವದಕ್ಕಾಗಿ ಆರೋಗ್ಯ ಶಿಬಿರಗಳನ್ನು ಏರ್ಪಡಿಸುವುದು. ಹೀಗೆ ಮುಂತಾದ ಉದ್ದೇಶಗಳನ್ನು ಇಟ್ಟುಕೊಂಡು ನೌಕರರ ಸೇವೆಯನ್ನು ಮಾಡಲಾಗುವುದು ಎಂದು ಹೇಳಿದರು.

         ಜಿ. ಆರ್. ಸರ್ಜಾಪೂರ, ಎಸ್.ಬಿ. ಸಜರ್ಾಪೂರ, ಎಂ.ಎ.ಬುಕ್ಕೀಟಿಗಾರ, ಆರ್.ಎಚ್.ಪರಬತ್,  ಬಿ.ಬಿ.ಕಳಸಾಪೂರ, ಜಿ.ಎ.ಬೇವಿನಗಿಡದ, ಎನ್.ವೈ. ಮಕಾನದಾರ, ಎಂ.ಜಿ. ಮಾಂಡ್ರೆ. ಎಂ.ಎನ್.ಗುತ್ತೆಮ್ಮನವರ, ಜಿ.ಬಿ.ಚಿಂಚಲಿ,ಆರ್,ಎಂ. ಕಮ್ಮಾರ ಸುರೇಶ ಗುರುವಿನ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.