ಹುಬ್ಬಳ್ಳಿ 23: ಶಿವಮೊಗ್ಗ ಬಸವಕೇಂದ್ರದ ಬಸವ ಮರುಳಸಿದ್ಧ ಸ್ವಾಮಿಗಳು ಕೊಡಮಾಡುವ ಶರಣಶ್ರೀ ಯುವ ಪ್ರಶಸ್ತಿಯನ್ನು ಈ ವರ್ಷ ಹುಕ್ಕೇರಿ ತಾಲೂಕು ಬಸವಬೆಳವಿ, ಚರಮೂತರ್ಿ ಚರಂತೇಶ್ವರ ವಿರಕ್ತಮಠದ ಶರಣಬಸವದೇವರು ಅವರಿಗೆ ನೀಡಿ ಗೌರವಿಸಲಾಗಿದೆ.
ಬಸವ ಕೇಂದ್ರದಲ್ಲಿ ತಿಂಗಳ ಕಾಲ ಶರಣ ತತ್ವಚಿಂತನ ಮತ್ತು ವ್ಯಕ್ತಿತ್ವ ವಿಕಸನ ಪ್ರವಚನ ನೀಡುತ್ತಿರುವ, ಶರಣಶ್ರೀ ಯುವ ಪ್ರಶಸ್ತಿ ಪುರಸ್ಕೃತ ಹುಕ್ಕೇರಿ ತಾಲೂಕು ಬಸವಬೆಳವಿ, ಚರಮೂತರ್ಿ ಚರಂತೇಶ್ವರ ವಿರಕ್ತಮಠದ ಶರಣಬಸವದೇವರು ಅವರನ್ನು ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಶಾಲು, ಮಾಲೆ, ಗ್ರಂಥ ನೀಡಿ ಭಕ್ತಿ ಗೌರವದಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಬಿಡಿಕೆ ವೇರ್ನ ಆರೋಗ್ಯ ಅಧಿಕಾರಿ ಡಾ.ವಿ.ಬಿ.ನಿಟಾಲಿ, ಬಸವ ಕೇಂದ್ರದ ಡಾ. ಬಿ.ವ್ಹಿ. ಶಿರೂರ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದಶರ್ಿ, ಸುರೇಶ ಡಿ. ಹೊರಕೇರಿ, ಕನರ್ಾಟಕ ಜ್ಞಾನ ವಿಜ್ಞಾನ ಸಮಿತಿ, ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ ಎಸ್. ಎಂ. ಸಾತ್ಮಾರ, ಪ್ರೊ ಜಿ.ಬಿ.ಹಳ್ಳಾಳ, ಶಿವರುದ್ರ ಟ್ರಸ್ಟನ ನಿದರ್ೇಶಕ ಡಾ. ಬಸವಕುಮಾರ ತಲವಾಯಿ, ಬಸವ ಕೇಂದ್ರದ ರಾಜು ಅಣೆಪ್ಪನವರ, ಬಿ.ಎಲ್.ಲಿಂಗಶೆಟ್ಟರ, ಪ್ರೊ ಬಸವರಾಜ ಕೇಂಧೂಳಿ, ಪ್ರೊ ಎಸ್.ಸಿ.ಇಂಡಿ, ಬಸವರಾಜ ಯಕಲಾಸಪೂರ, ಎಂ.ಬಿ.ಕಟ್ಟಿ, ಬಸವರಾಜ ಮೆಣಸಿನಕಾಯಿ ದಂಪತಿ, ಶಿವಯೋಗಿ ಮುರ್ಖಂಡೆ, ನಾಗೇಶ ಅಂಗಡಿ, ಮುಂತಾದವರು ಇದ್ದರು.