ಕೆ.ಡಿ.ಜಂಬಗಿ ಗ್ರಾಮದಲ್ಲಿ ಬೋನಿನಲ್ಲಿ ಚಿರತೆ ಸೆರೆ

ಕೆ.ಡಿ.ಜಂಬಗಿ ಗ್ರಾಮದಲ್ಲಿ ಬೋನಿನಲ್ಲಿ ಚಿರತೆ ಸೆರೆ Leopard caught in a cage in K.D.Jambagi village

ಜಮಖಂಡಿ  09 : ತಾಲ್ಲೂಕಿನ ಕೆಡಿ ಜಂಬಗಿ ಗ್ರಾಮದಲ್ಲಿ ಚಿರತೆ ತಡರಾತ್ರಿಯಲ್ಲಿ ಬೊನಿನೊಳ್ಳಗೆ ಬಿದ್ದು. ತನ್ನ ಘರ್ಜನೆಯ ಘರ್ಜಿಸುತ್ತಿದೆ. ಕಳೆದ ಎರಡು ಮೂರು ತಿಂಗಳ ಕೆ.ಡಿ.ಜಂಬಗಿ ಗ್ರಾಮದಲ್ಲಿ ಚಿರತೆಯು ಕಾಟಕ್ಕೆ ಬೇಸತ್ತ ಗ್ರಾಮಸ್ಥರು. ಸಾಕಷ್ಟು ಬಾರಿ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಸಹ. ಚಿರತೆ ಹಿಡೆಯಲು ಪ್ರಯತ್ನಿಸಿದರು ಸಹ ಚಿರತೆ ಸಿಗದ ಕಾರಣ ಅರಣ್ಯ ಇಲಾಖೆಯವರು ಬೇಸತ್ತು ಹೋಗಿದರು. ಆದರೆ ಚಿರತೆ ಸಿಗದೆ ತನ್ನ ಓಡಾಟವನ್ನು ನಡೆಸಿತ್ತು. ಚಿರತೆಯ ದಾಳಿಯಿಂದ ದನ ಕರುಗಳಿಗೆ ಹಾನಿಯುಂಟು ಮಾಡುತ್ತದೆ ಎಂಬ ಭಯದ ವಾತಾವರಣದಲ್ಲಿ ತಿರುಗಾಡಿತ್ತಿದ್ದ ಗ್ರಾಮಸ್ಥರು.

ತಮ್ಮ ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ಕಳಿಸುವದು ಕಷ್ಟಕರವಾಗಿತ್ತು. ಆದರೆ ಅರಣ್ಯ ಇಲಾಖೆಯವರು ಚಿರತೆ ಹಿಡಿಯಲು ಸಾಕಷ್ಟು ಪ್ತಯತ್ನಿಸಿದರು ಸಹ ಚಿರತೆ ತಪ್ಪಿಸಿಕೊಂಡು ತಿರುಗಾಡುತ್ತಿತ್ತು. ಇದರಿಂದ ಬೇಸತ್ತ ಅರಣ್ಯ ಇಲಾಖೆಯವರು ಬೋನಿನ ವ್ಯವಸ್ಥೆಯನ್ನು ಮಾಡಿ. ಗ್ರಾಮಸ್ಥರಿಗೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಿದರು. ಆಹಾರ ಅರಸಿಕೊಂಡು ತಡರಾತ್ರಿಯಲ್ಲಿ ಚಿರತೆ ಬೋನಿನೊಳ್ಳಗೆ ಬಿದ್ದಿದೆ. ಹೊಲದಲ್ಲಿ ಇಟ್ಟಿರುವ ಬೋನಿನಲ್ಲಿ ಚಿರತೆ ಸೆರೆಯಾಗಿದೆ. ಚಿರತೆಯನ್ನು ನೋಡಲು ಮುಗಿಬಿದ್ದ ಗ್ರಾಮಸ್ಥರು. ಚಿರತೆಯನ್ನು ಹೇಗಾದರು ಮಾಡಿ ಸೆರೆ ಹಿಡಿಯಬೇಕೆಂದು ಹೊಲ ಗದ್ದೆಗಳ ರೈತರು ತಾವಾಗಿಯೇ ಬೋನಿನ ವ್ಯವಸ್ಥೆ ಮಾಡಿ.

ಅದರಲ್ಲಿ ಅರ್ಧ ತಿಂದುಬಿಟ್ಡಿರುವ ನಾಯಿಯನ್ನು ಬೋನಿನಲ್ಲಿ ಹಾಕಿ. ಬೋನಿನ ವ್ಯವಸ್ಥೆ ಮಾಡಿದರು.ಸ್ಥಳಕ್ಕೆ ಜಮಖಂಡಿ ಅರಣ್ಯ ಇಲಾಖೆಯ ಅಧಿಕಾರಿಗಳು ಬಂದು ಚಿರತೆಯು ಬೋನಿನಲ್ಲಿ ಬಿದ್ದಿದನ್ನು ಕಂಡುಸುರಕ್ಷಿತವಾಗಿ ಬೋನಿನ ಸುತ್ತ  ಪ್ಲಾಸ್ಟಿಕ್ ಹಾಳೆಯನ್ನು ಹೊದಿಸಿ ಸಂಪೂರ್ಣವಾಗಿ ಬಂದ ಮಾಡಲಾಗಿದ್ದು. ಅದನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಬೇರೆ ಅರಣ್ಯಕ್ಕೆ ಬಿಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅರಣ್ಯಾಧಿಕಾರಿ ತಿಳಿಸಿದ್ದಾರೆ. ಕೆ.ಡಿ.ಜಂಬಗಿ ಗ್ರಾಮಸ್ಥರು ಚಿರತೆ ಬೋನಿನಲ್ಲಿ ಬಿದ್ದಿರುವುದನ್ನು ಕಂಡು ನಿಟ್ಟುಸಿರು ಬಿಟ್ಟಿದ್ದಾರೆ.ಪೋಟೋ : ಜಮಖಂಡಿ ತಾಲ್ಲೂಕಿನ ಕೆ.ಡಿ.ಜಂಬಗಿ ಗ್ರಾಮದಲ್ಲಿ ಚಿರತೆ ಬೋನಿನಲ್ಲಿ ಸೆರೆಯಾಗಿದೆ. ನಸುಕಿನಲ್ಲಿ ತನ್ನ ಘರ್ಷಣೆ ಘರ್ಜಿಸುತ್ತಿದೆ.