ಕೆ ಎಲ್ ಇ ಶತಮಾನೋತ್ಸವ ವತಿಯಿಂದ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರ

ಕೆ ಎಲ್ ಇ ಶತಮಾನೋತ್ಸವ ವತಿಯಿಂದ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರ Blood donation camp and free health check-up camp organized by KLE Centenary

ಬೆಳಗಾವಿ 09 : “ದಾನಗಳಲ್ಲಿಯೇ ರಕ್ತದಾನವು ಮಹಾ ಶ್ರೇಷ್ಠವಾಗಿದೆ”  ಎಂದು ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಯಳ್ಳೂರ ರಸ್ತೆ, ಬೆಳಗಾವಿವತಿಯಿದ ರೋಗಶಾಸ್ತ್ರಜ್ಞೆ ಡಾ. ಸ್ವಪ್ನಾ ಮಹಾಜನ್ ಅವರು ಮಾತನಾಡುತ್ತಿದ್ದರು. ಅವರು ಇಂದು ನಗರದ ಯಳ್ಳೂರ ರಸ್ತೆಯಲ್ಲಿನ ಕೆ.ಎಲ್‌.ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ, ಹನುಮಾನ್ ನಗರದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಖಖಖ) ಹಾಗೂ ಟಿ.ಜೆ.ಎಸ್‌.ಬಿ (ಖಿಎಖಃ) ಸಹಕಾರಿ ಬ್ಯಾಂಕ್ ಅಧಿಕಾರಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ಬೆಳಗಾವಿಯ ಗಣೇಶಪುರದ ವಿನಾಯಕ ನಗರದಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡುತ್ತಾ  ರಕ್ತದಾನದಿಂದ ರಕ್ತದ ಅವಶ್ಯಕತೆಯಿರುವ ವ್ಯಕ್ತಿಗಳಿಗೆ ಜೀವದಾನನೀಡಿದಂತಾಗುತ್ತದೆ ಆದ್ದರಿಂದ ಪ್ರತಿಯೊಬ್ಬರು ರಕ್ತದಾನ ಮಾಡಬೇಕು ಅದಲ್ಲದೆ ತಮ್ಮ ಆರೋಗ್ಯದ ಕಾಳಜಿ ವಹಿಸಿರಿ ಎಂದು ಕರೆ ನಿಡಿದರು. 

ಸಾರ್ವಜನಿಕರಿಂದ ಅತ್ಯುತ್ತಮ ಸ್ಪಂದನೆ ವ್ಯಕ್ತವಾದ ಈ ಶಿಬಿರದಲ್ಲಿ ಒಟ್ಟು 65ಕ್ಕೂ ಅಧಿಕ ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ಇದರ ಜೊತೆಗೆ, 92ಕ್ಕೂ ಹೆಚ್ಚು ಜನರು ಉಚಿತ ಆರೋಗ್ಯ ತಪಾಸಣೆಯ ಸದುಪಯೋಗ ಪಡೆದುಕೊಂಡರು. ಆಸ್ಪತ್ರೆಯ ಪ್ರಯೋಗಾಲಯ ಮತ್ತು ರಕ್ತ ಕೇಂದ್ರದ ಮುಖ್ಯಸ್ಥ ಡಾ. ಅಶೋಕ್ ಅಲತಗಿ, ರೋಗಶಾಸ್ತ್ರಜ್ಞೆ ಡಾ. ಸ್ವಪ್ನಾ ಮಹಾಜನ್, ವೈದ್ಯಾಧಿಕಾರಿ ಡಾ. ಜೀವನ್ ಜೋಶಿ ಅವರ ನೇತೃತ್ವದಲ್ಲಿ ರಕ್ತ ಸಂಗ್ರಹಣಾ ಕಾರ್ಯವು ಅತ್ಯಂತ ಸುರಕ್ಷಿತವಾಗಿ ಜರುಗಿತು. ಹಾಗೂ ಫ್ಯಾಮಿಲಿ ಮೆಡಿಸಿನ್ ವಿಭಾಗದ ವೈದ್ಯರಾದ ಡಾ. ಟ್ವಿಂಕಲ್ ಬೆಹ್ಲ್‌ ಮತ್ತು ಡಾ. ಕಮಲಾ ಅವರು ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ವೈದ್ಯಕೀಯ ಸಲಹೆಗಳನ್ನು ನೀಡಿದರು.  

ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ವಿಜಯಕುಮಾರ ಮುನವಳ್ಳಿ, ರಕ್ತಭಂಡಾರದ ಮುಖ್ಯ ಸಿಬ್ಬಂದಿಯಾದ ಶ್ರೀ ಮಹಾದೇವ ವಾಲಿಶೆಟ್ಟಿ ಮತ್ತು  ಆಸ್ಪತ್ರೆಯ ಶುಶ್ರೂಷಕ ಸಿಬ್ಬಂದಿ ವರ್ಗ ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ವಿ ನಿರ್ವಹಣೆಯಲ್ಲಿ ಶ್ರಮಿಸಿದರು. ಈ ಸಮಾಜಮುಖಿ ಕಾರ್ಯಕ್ರಮದಲ್ಲಿ ಆರ್‌.ಎಸ್‌.ಎಸ್ ಸದಸ್ಯರಾದ ದಿನೇಶ್ ಪಾಟೀಲ್ ಹಾಗೂ ಟಿ.ಜೆ.ಎಸ್‌.ಬಿ ಸಹಕಾರಿ ಬ್ಯಾಂಕಿನ ಮ್ಯಾನೇಜರ್ ಶ್ರೀ ಪ್ರಮೋದ್ ದೇಶಪಾಂಡೆ ಹಾಗೂ ಸಿಬ್ಬಂದಿ ವರ್ಗ ದವರು ಉಪಸ್ಥಿತರಿದ್ದು, ಶಿಬಿರದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡಿದರು. ಈ ಮಹತ್ಕಾರ್ಯದಲ್ಲಿ ಪಾಲ್ಗೊಂಡ ಎಲ್ಲಾ ರಕ್ತದಾನಿಗಳಿಗೆ, ವೈದ್ಯಕೀಯ ತಂಡಕ್ಕೆ, ಸಿಬ್ಬಂದಿ ವರ್ಗದವರಿಗೆ ಹಾಗೂ ಸಹಯೋಗ ನೀಡಿದ ಎಲ್ಲಾ ಸಂಘಟನೆಗಳಿಗೆ ಯು.ಎಸ್‌. ಎಮ್ ಕೆ. ಎಲ್‌. ಇ ನಿರ್ದೇಶಕರಾದ ಡಾ. ಎಚ್ ಬಿ ರಾಜಶೇಖರ,  ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಎನ್‌. ಹಾಗೂ ವೈದ್ಯಕೀಯ ಅಧೀಕ್ಷಕರಾದ ಡಾ. ಸಂಜಯ ಕಂಬಾರ ಅವರು ವಿಶೇಷ ಮೆಚ್ಚುಗೆ ಹಾಗೂ ಅಭಿನಂದನೆಗಳನ್ನು ವ್ಯಕ್ತಪಡಿಸಿದರು.