ಇಂಡಿ 14: ಭಾರತ ಭವ್ಯವಾದ ಸಂಸ್ಕೃತಿಯನ್ನು ಹೊಂದಿರುವ ರಾಷ್ಟ್ರವಾಗಿದೆ ಇಲ್ಲಿ ಅನೇಕ ಮಠ ಮಂದಿರಗಳು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿರುವುದರ ಮೂಲಕ ಮಕ್ಕಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಅದರಲ್ಲಿ ಕೂಡಾ ತಡವಲಗಾದ ಶ್ರೀ ಗುರು ರಾಚೋಟೇಶ್ವರ ವಿದ್ಯಾ ವಿಕಾಸ ಸಂಸ್ಥೆಯು ಒಂದಾಗಿದೆ ಎಂದರೆ ತಪ್ಪಾಗಲಾರದು ಎಂದು ಮಂಜುನಾಥ ಕಾಮಗೊಂಡ ಅವರು ಹೇಳಿದರು.
ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ಶ್ರೀ ಗುರು ರಾಚೋಟೇಶ್ವರ ವಿದ್ಯಾ ವಿಕಾಸ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶಿರ್ವಚನ ನೀಡಿ ಮಾತನಾಡಿದ ಅಥರ್ಗಾದ ಶ್ರೀ ಮುರುಘೇಂದರ ಪೂಜ್ಯರು ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಒಂದು ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸುವುದು ಸುಲಭದ ಮಾತವಲ್ಲ, ಬಡವರ ಹಿಂದುಳಿದ ಮಕ್ಕಳ ಅನುಕೂಲಕ್ಕಾಗಿ ಹಿಂತಾ ಸಂಸ್ಥೆಯನ್ನು ಕಟ್ಟಿ ಬೆಳೆಸುತ್ತಿರುವ ತಡವಲಗಾ ಪೂಜ್ಯರ ಕಾರ್ಯ ತುಂಬಾ ದೊಡ್ಡದು ಎಂದು ಹೇಳಿದರು. ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಮಕ್ಕಳ ಬೆಳವಣಿಗೆಯಲ್ಲಿ ತಾಯಿ ಪಾತ್ರ ಬಹುಮುಖ್ಯವಾದದ್ದು. ಪಾಲಕರು ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮ ನಿತ್ಯ ಬದುಕಿನ ಕೆಲ ಸಮಯ ಮೀಸಲಿಡುವುದು ಅವಶ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಶೈಕ್ಷಣಿಕ, ಕ್ರೀಡೆ ಹಾಗೂ ಸಹಪಠ್ಯ ವಿಭಾಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.ಹಾಗೂ ಶಾಲೆಯ ಆಧಾರ ಸ್ಥಂಭಗಳಾದ ಶಿಕ್ಷಕ ಹಾಗೂ ಶಿಕ್ಷಕಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷರಾದ ಬಾಬುಸಾಹುಕಾರ ಮೇತ್ರಿ, ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುನಂದಾ ವಾಲಿಕಾರ,ಶೀಲವಂತ ಉಮರಾಣಿ, ಚಂದ್ರಶೇಖರ ರೂಗಿ,ಅಪ್ಪು ಕಲ್ಲೂರ, ತಮ್ಮಣ್ಣ ಪೂಜಾರಿ, ಅಶೋಕ ಮಿರ್ಜಿ, ನಾಗೇಶ್ ಹೇಗಡ್ಯಾಳ, ಸಿದ್ದು ಕಪ್ಪೆನವರ, ಆನಂದಕುಮಾರ ಬಿರಾದಾರ, ಜೇಟ್ಟಪ್ಪ ಕೊಟಗೊಂಡ, ಅಪ್ಪುಗೌಡ ಬಿರಾದಾರ, ಹಣಮಂತ ಮಿರ್ಜಿ,ರಾಮನಗೌಡ ಪಾಟೀಲ, ರಾಜು ಧಡೇದ, ಸಂತೋಷ ಸಾರವಾಡ, ಶ್ರೀಮಂತ ವಾಲಿಕಾರ,ಸೇರಿದಂತೆ ವಿದ್ಯಾರ್ಥಿಗಳು,ಪೋಷಕರು ಉಪಸ್ಥಿತರಿದ್ದರು.