ವೈಭವದ ಸಂಕ್ರಾಂತಿ ಹಬ್ಬ: 295 ಬಗೆಯ ಖಾದ್ಯಗಳ ಸವಿಯನ್ನು ಸವಿದ ಸಾರ್ವಜನಿಕರು

Sankranti festival: The public relished the taste of 295 varieties of delicacies

ರನ್ನ ಬೆಳಗಲಿ ಜ.15: ಪಟ್ಟಣದ ಶ್ರೀ ಬಂದ ಲಕ್ಷ್ಮೀ ದೇವಸ್ಥಾನ ಆವರಣದಲ್ಲಿ ಇಂದು ಪ್ರತಿಷ್ಠಿತ ಶ್ರೀ ಗುರು ಮಹಾಲಿಂಗೇಶ್ವರ ಪದವಿ ಪೂರ್ವ ಹಾಗೂ ಪದವಿ  ಮಹಾವಿದ್ಯಾಲಯವು ಸತತ 6 ವರ್ಷಗಳಿಂದ ಭಾರತೀಯರ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ  ವೈಭವದ ಆಚರಣೆ "ಸಂಕ್ರಾಂತಿ ಸಂಭ್ರಮ" ಕಾರ್ಯಕ್ರಮವನ್ನು ಮಕ್ಕಳಿಂದ ದೇಸಿ ಶೈಲಿಯ  ಉಡುಪುಗಳನ್ನು ತೊಟ್ಟು ಆಗಮಿಸಿದ ವಿದ್ಯಾರ್ಥಿಗಳೇ ತಮ್ಮ ಮಹಾವಿದ್ಯಾಲಯದ ಆವರಣ ದಿಂದ ಶ್ರೀ ಬಂದ ಲಕ್ಷ್ಮಿ ದೇವಸ್ಥಾನದವರೆಗೂ ಹಲಗೆವಾದನ, ಕೋಲಾಟ ಕುಣಿತ, ಡೊಳ್ಳು ಕುಣಿತ, ಜಾಂಜ ಪತಕ್, ರೇಜಿಮ್ ಕುಣಿತ, ಗೊಂಬೆ ಕುಣಿತ, ಸಿಂಗರಿಸಿದ ಎತ್ತಿನಗಾಡಿಯಲ್ಲಿ ಮಹಾಲಿಂಗೇಶ್ವರ ಪ್ರಭುಜಿ ಅವರ ಭವ್ಯ ಭಾವಚಿತ್ರದೊಂದಿಗೆ ರಸ್ತೆ ಉದ್ದಕ್ಕೂ ರಂಗೋಲಿ ಅಲಂಕಾರ ಚಿತ್ತಾರಗಳಲ್ಲಿ ನಿತ್ತು ಜನಪದದ ಜೈಂಕಾರ ನೋಡುತ್ತಿರುವ ಸಾರ್ವ ಜನರಿಗೆ ಪ್ರಕೃತಿದತ್ತವಾಗಿ ಇರುವ ಎಳ್ಳು ಮತ್ತು ಬೆಲ್ಲದ ಮಿಶ್ರಣವನ್ನು ವಿದ್ಯಾರ್ಥಿನಿಯರು ಹಂಚುತ್ತ ವೈಭವದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. 

ಅದರೊಂದಿಗೆ 250ಕೂ ಅಧಿಕ ದೇಶಿ ಆಹಾರಗಳಾದ ರಾಗಿ, ಜೋಳ, ಮೆಕ್ಕೆಜೋಳ, ಸಜ್ಜೆ, ಅಕ್ಕಿ, ರಾಗಿ ಮುದ್ದೆ, ಚಪಾತಿ, ರೊಟ್ಟಿ ಮುಟಗಿ, ಕಾರದ ಚಪಾತಿ, ಚಪಾತಿ, ಸಜ್ಜಕದ ಹೋಳಿಗೆ, ಹೂರಣ ಹೋಳಿಗೆ, ಶೇಂಗಾ, ಕಡಬು, ಖಾಜು, ಕರ್ಚಿಕಾಯಿ, ಚುನುಮುರಿ ಉಂಡಿ, ಬುಂದಿ, ಮಾದುಲಿ, ರವೆ ಉಂಡಿ, ಬೇಷನ್, ಜಾಮೂನ್, ಚಕ್ಕುಲಿ, ಶಂಕರ ಪಾಳಿ, ಚಾರುಟ್, ಬಾದಾಮ್ ಪುರಿ, ರಾಗಿ ಉಂಡಿ, ಬಟಾಣಿ, ಕಡಲೆ, ಅವರೆ, ಹೆಸರು, ಉಸಲಿ, ಅಲಸಂದಿ, ತೊಗರಿಬೇಳೆ, ಕೊಬಿಜ್, ಬದನೇಕಾಯಿ, ಜುನಕ್, ಗಜ್ಜರಿ, ಮೆಣಸಿನಕಾಯಿ, ಬಿಟಾರೂಟ್, ಚಾಲೆಕಾಯಿ ಒಬ್ಬಟ್ಟು, ತುಪ್ಪ, ಹಾಲು, ಬೆನ್ನಿ, ಮೊಸರು, ಮಜ್ಜಿಗೆ, ಮೂಲಂಗಿ,ಘಜ್ಜೆರೆ, ಸೌತೆಕಾಯಿ, ಬೆಟ್ರೂಟ್, ಪಾಚಿ ಉಳ್ಳಾಗಡ್ಡಿ, ಬಾಳೆಹಣ್ಣು ಲೆಕ್ಕವಿಲ್ಲದೆ ಅನೇಕ ಬಗೆ ಬಗೆಯ ಭಕ್ಷ ಭೋಜನಗಳನ್ನು ರುಚಿಯನ್ನು ಉಂಡ ಸಾರ್ವಜನಿಕರು ನಿಬ್ಬರಗಾದರೂ. ಶ್ರೀ ಗುರು ಮಹಾಲಿಂಗೇಶ್ವರ ಪದವಿ ಮತ್ತು ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ, ಆಡಳಿತ ಮಂಡಳಿ, ಶಿಕ್ಷಕ ವರ್ಗದವರು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿ ಯಶಸ್ವಿಗೊಳಿಸಿದರು.  

ಈ ಕಾರ್ಯಕ್ರಮಕ್ಕೆ ಬೆನ್ನೆಲುಬಾಗಿ ನಿಂತಿರುವ ಪಾಲಕ, ಪೋಷಕ, ವಿದ್ಯಾರ್ಥಿ ವೃಂದಕ್ಕೆ ಸಂಸ್ಥೆ ಮತ್ತು ಶಿಕ್ಷಕ ವರ್ಗ ಅಭಿನಂದನೆ ಸಲ್ಲಿಸಿತು.