ಸಂಗೊಳ್ಳಿ ರಾಯಣ್ಣ ಭವ್ಯ ಉತ್ಸವ: ಕಣ್ಮನ ಸೆಳೆದ ಜಾನಪದ ಕಲಾಮೇಳ

ಬೈಲಹೊಂಗಲ 11: ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶನಿವಾರ ನಡೆದ ಸಂಗೊಳ್ಳಿ ರಾಯಣ್ಣ ಉತ್ಸವದ ಜಾನಪದ ಕಲಾಮೇಳ ನೋಡುಗರ ಕಣ್ಮನ ಸೆಳೆಯಿತು. 

        ರಾಯಣ್ಣ ಉತ್ಸವಕ್ಕೆ ಆಗಮಿಸಿದ್ದ ವಿವಿಧ ಕಲಾ ತಂಡಗಳ ನೃತ್ಯದೃಶ್ಯ ಮನೋಹರವಾಗಿ ಕಂಡು ಬಂದಿತು. ವಿಧವಿಧವಾದ ಉಡುಪು ತೊಟ್ಟಿದ್ದ ಕಲಾವಿದರುಗಳು ಕುಣಿದು ಕುಪ್ಪಳಿಸಿದರು. ಉತ್ಸವದ ಮೆರವಣಿಗೆಯಲ್ಲಿ ಸುಮಂಗಲೆಯರು, ಮಹಿಳಾ ಸ್ತ್ರೀ ಶಕ್ತಿ ಸಂಘದವರು ಕುಂಭ ಹೊತ್ತು ಸಾಗಿದರು. ಹುಲಿಯು ಹುಟ್ಟಿತ್ತು ಕಿತ್ತೂರು ನಾಡಾಗಾ...ಬಂಟ ರಾಯಣ್ಣ ಸಂಗೊಳ್ಳಿ ಊರಾಗ...!! ಎಂಬ ದೇಶಭಕ್ತಿ ನೀನಾದ ಎಲ್ಲೆಡೆ ಪಸರಿಸಿತ್ತು. ಕಿತ್ತೂರ ಗತ ವೈಭವ ನೆನಪಿಸಿದ ಸಂಗೊಳ್ಳಿ ರಾಯಣ್ಣನ ಉತ್ಸವ ಸಂಗೊಳ್ಳಿ ರಾಯಣ್ಣನಿಗೆ ಭಕ್ತಿಯ ಬಹುಪರಾಕ್ ಹೇಳಿತು.

     ಶಾಸಕ ಮಹಾಂತೇಶ ಕೌಜಲಗಿ ಕಲಾಮೇಳ, ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ, ಸ್ವಾಭಿಮಾನಕ್ಕಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದ ಶೂರ ಸಂಗೊಳ್ಳಿ ರಾಯಣ್ಣ ಅಪ್ಪಟ ದೇಶಭಕ್ತ. ಅವರ ಆದರ್ಶಗಳು ಜನಮಾನಸದಲ್ಲಿ ಅಜರಾಮರವಾಗಿ ಉಳಿಯಬೇಕು. ಯುವಜನತೆ ರಾಯಣ್ಣನ ಆದರ್ಶ ಬೆಳೆಸಿಕೊಂಡು ಹೋಗಬೇಕೆಂದರು.

    ಜಿಪಂ ಸದಸ್ಯ ಅನಿಲ ಮ್ಯಾಕಲಮಡರ್ಿ ನಾಡ ಧ್ವಜಾರೋಹಣ ನೆರವೇರಿಸಿದರು. 

     ಬೆಳಗ್ಗೆ ಪ್ರಾತಃಕಾಲದಲ್ಲಿ ಸಂಗೊಳ್ಳಿ ಗುರುಸಿದ್ಧಲಿಂಗೇಶ್ವರ ಸಂಸ್ಥಾನದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಅರ್ಚಕ ಬಸವರಾಜ ಡೊಳ್ಳಿನ ರಾಯಣ್ಣನ ಪ್ರತಿಮೆಗೆ ಪೂಜೆ ಸಲ್ಲಿಸಿದರು. 

   ಗ್ರಾಮದ ಹುತಾತ್ಮ ವೀರಯೋಧ ಕೈಲಾಸನಾಥ ಮಾಲಬನ್ನವರ ಹುತಾತ್ಮ ಚೌಕಗೆ ಹೂ ಮಾಲೆ ಹಾಕಿ ಗೌರವ ಸೂಚಿಸಲಾಯಿತು. 

    ಎಸಿ ಶಿವಾನಂದ ಭಜಂತ್ರಿ, ತಹಶೀಲ್ದಾರ ಪ್ರಕಾಶ ಗಾಯಕವಾಡ, ತಾಪಂ ಇಒ ಸಮೀರ ಮುಲ್ಲಾ, ಕಿತ್ತೂರ ತಹಶೀಲ್ದಾರ ಮೋಹನ, ಎಇಇ ಗಣಾಚಾರಿ, ಕೃಷಿ ಅಧಿಕಾರಿ ಎಂ.ಬಿ.ಹೊಸಮನಿ, ಸಮಾಜ ಕಲ್ಯಾಣ ಅಧಿಕಾರಿ ಉಣ್ಣಿ, ತಾಪ ಸಹಾಯಕ ನಿದರ್ೇಶಕ ಎಸ್.ಎಸ್. ಸಂಪಗಾಂವ, ಗ್ರಾಪಂ ಅಧ್ಯಕ್ಷೆ ಯಲ್ಲವ್ವ ಹಳೇಮನಿ, ಉಪಾಧ್ಯಕ್ಷ ಬಸವರಾಜ ಕೊಡ್ಲಿ, ಸಂಶೋಧಕ ಬಸವರಾಜ ಕಮತ, ತಾಪಂ ಸದಸ್ಯ ಗೌಸಸಾಬ ಬುಡ್ಡೇಮುಲ್ಲಾ, ಹಿರಿಯರಾದ ಮಲ್ಲಿಕಾಜರ್ುನ ಕುಡೊಳ್ಳಿ, ಗಂಗಪ್ಪ ಕುರಿ, ಉಮೇಶ ಲಾಳ, ಸುನೀಲ ಕುಲಕಣರ್ಿ, ಪಿಡಿಒ ಮಮತಾಜ ಛಬ್ಬಿ, ಶಿದ್ಲಿಂಗಯ್ಯಾ ವಕ್ಕುಂದಮಠ, ಅರುಣ ಯಲಿಗಾರ, ಮಹಾಂತೇಶ ಬೆಣ್ಣಿ, ಮಹೇಶ ಹಿರೇಮಠ, ಮಲ್ಲಪ್ಪ ವಾರದ, ಆರೋಗ್ಯ ಇಲಾಖೆ, ಅಗ್ನಿ ಶಾಮಕದಳ, ಕಂದಾಯ, ಪೊಲೀಸ್, ಶಿಕ್ಷಣ, ತಾ.ಪಂ., ಗ್ರಾ.ಪಂ. ಹಾಗೂ ಇನ್ನೂಳಿದ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ಜಾನಪದ ಕಲಾ ತಂಡಗಳ ಆಕರ್ಷಣೆ: ಗುಂಡೇನಟ್ಟಿ ಬಸವೇಶ್ವರ ಕಲಾ ತಂಡ ಜಗ್ಗಲಗಿ ಮೇಳ, ಶಾಹಾಪೂರದ ಕರಬಲ್ಲ ಕುಣಿತ, ಕಲ್ಲೊಳ್ಳಿಯ ವೀರಗಾಸೆ, ರಾಮದುರ್ಗ ಶಾಕಾಂಬರಿ ಕಲಾ ತಂಡ, ಸವದತ್ತಿಯ ಸಾಗರ ಕಲಾ ತಂಡ, ಗೋವನಕೊಪ್ಪದ ಮಯೂರ ಗೊಂಬೆ ಕಲಾ ತಂಡ, ಸಾರೋಟನ ರಾಯಣ್ಣನ ಭಾವಚಿತ್ರ, ಶಕ್ತಿ ಪ್ರದರ್ಶನದ ಗದೆ ಮೆರವಣಿಗೆ, ನಾಗನೂರಿನ ಮರಗಲ್ಲ ಕುಣಿತ, ಹನುಮಂತ ಸಣ್ಣಮನಿಯ ಯಮನ ವೇಷ, ಚಿಂಚಲಿಯ ಸ್ವರ ಸಂಗಮ ತಂಡದ ನಾಶಿಕ ಡೋಲ, ತಿಮ್ಮಾಪೂರದ ಕನಕದಾಸ ತಂಡ, ಸಂಗೊಳ್ಳಿ ಕೋಲಾಟ, ಹುಬ್ಬಳ್ಳಿ ಸ್ವರ್ಣ ಮಯೂರಿ ಗೊಂಬೆ ತಂಡ,  ಸೇರಿದಂತೆ ಹಲವಾರು ಕಲಾ ತಂಡಗಳು ಜಾನಪದ ಕಲಾಮೇಳದಲ್ಲಿ ಭಾಗವಹಿಸಿದ್ದವು. ಪ್ರತಿ ತಂಡಗಳ ಕಲಾವಿದರುಗಳು ಗೆಜ್ಜೆ ಕಟ್ಟಿ ಕುಣಿದು ಕುಪ್ಪಳಿಸಿದರು. ಅತ್ಯುತ್ತಮವಾಗಿ ತಮ್ಮ ಕಲೆ ಹೊರ ಸೂಸಿದರು. ಮೆರವಣಿಗೆಯಲ್ಲಿ ಸಾಗಿದ ಕಲಾವಿದರಿಗೆ ಗ್ರಾಮಸ್ಥರು ಅಂಬಲಿ ನೀಡಿ ದಣಿವು ನೀಗಿಸಿದರು.