ಸಕರ್ಾರಗಳು ರೈತರ ಬದುಕಿನ ಜೊತೆಗೆ ಚೆಲ್ಲಾಟವಾಡುತ್ತಲಿವೆ: ಬೇವಿನಹಳ್ಳಿ

ಲೋಕದರ್ಶನವರದಿ

ರಾಣೇಬೆನ್ನೂರು: ಸಕರ್ಾರಗಳು ರೈತರ ಬದುಕಿನ ಜೊತೆಗೆ ಚೆಲ್ಲಾಟವಾಡುತ್ತಾ ಅವರನ್ನು ನಿತ್ಯವೂ ಶೋಷಣೆಗೆ ಒಳಪಡಿಸುತ್ತಲಿವೆ.  ಇಂತಹ ಸಂದರ್ಭದಲ್ಲಿ ಆಯಾ ಕ್ಷೇತ್ರದಲ್ಲಿ ಸಂಘಟನೆಯ ಮುಖಂಡರು ಕಾರ್ಯಕರ್ತರು ಅತ್ಯಂತ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವುದರ ಮೂಲಕ ಸ್ಥಳೀಯ ಆಡಳಿತದ ಕಣ್ಣು ತೆರಸಲು ಮುಂದಾಗಬೇಕು ಎಂದು ಉತ್ತರ ಕನರ್ಾಟಕ ಪ್ರದೇಶ ರೈತ ಹಾಗೂ ರೈತ ಕಾಮರ್ಿಕ ಸಂಘದ ರಾಜ್ಯಾಧ್ಯಕ್ಷ ಬಸವರಾಜ ಬೇವಿನಹಳ್ಳಿ ಹೇಳಿದರು.  

ಅವರು ಸೋಮವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.  ರಾಜ್ಯವೂ ಸೇರಿದಂತೆ ನಾಡಿನ ವಿವಿಧ ಭಾಗಗಳಲ್ಲಿ ಸಮಸ್ತ ರೈತ ಸಮುದಾಯ ತನಗೆ ದೊರಕಬೇಕಾದ ಯಾವುದೇ ಸೌಲಭ್ಯಗಳನ್ನು ಪಡೆಯಬೇಕಾದರೂ ಇಂದು ಹೋರಾಟ ಅನಿವಾರ್ಯವಾಗಿದೆ. 

       ಇದರಿಂದ ಯಾರೂ ಹೊರತಾಗಿಲ್ಲ.  ಸಂಘಟನೆಗಳು ಒಗ್ಗಟ್ಟು ಮತ್ತು ತನ್ನ ಬಲಾಢ್ಯತೆಯನ್ನು ಕಾಯ್ದುಕೊಳ್ಳಬೇಕು.  ಇದರಿಂದ ಯಾವುದೇ ಸಮಸ್ಯಗಳಿದ್ದರೂ ಸರಳ ಮತ್ತು ಸುಲಭವಾಗಿ ಪರಿಹರಿಸಿಕೊಳ್ಳಲು ಸಾಧ್ಯವಾಗುವುದು ಎಂದರು. 

ಇದೇ ಸಂದರ್ಭದಲ್ಲಿ ರಾಜ್ಯ ಸಂಘಟನೆಯ ಉಪಾಧ್ಯಕ್ಷರಾಗಿ ಸವರ್ಾನುಮತದಿಂದ ನೇಮಕಗೊಂಡ ದಯಾಲಾಲ್ ಪ್ರೇಮಚಂದ್ಜೀ ಸಂಘವಿ ಅವರಿಗೆ ಬೇವಿನಹಳ್ಳಿ ಅವರು ಪ್ರಮಾಣಪತ್ರ ನೀಡಿ ಸಾರ್ವಜನಿಕವಾಗಿ ಗೌರವಿಸಿದರು.  

        ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.  ನಾರಾಯಣ ಎನ್.ಮೆರಹರವಾಡೆ(ರಾಜ್ಯ ಸಂಘಟನಾ ಕಾರ್ಯದಶರ್ಿ), ಮಹೇಂದ್ರ ವ್ಹಿ.ಜೈನ್(ತಾಲೂಕಾ ಪ್ರಧಾನ ಕಾರ್ಯದಶರ್ಿ), ಬೀರಪ್ಪ ಭರಮಪ್ಪ ಕಂಬಳಿ(ಶಾಲಾ ಸಮಿತಿ ಅಧ್ಯಕ್ಷ), ವಿಶ್ವನಾಥ ಎಸ್ ಹೊಸಂಗಡಿ(ಗೌರವಾಧ್ಯಕ್ಷ), ನಿಂಗಪ್ಪ ಹೊಳಬಸಪ್ಪ ಕುಂಚೂರ(ತಾಲೂಕಾ ಉಪಾಧ್ಯಕ್ಷ), ಚಂದ್ರಶೇಖರ ಕಾಳಿ(ಕೋಶಾಧ್ಯಕ್ಷ) ಮತ್ತು ಬಸವರಾಜ ಎಫ್.ಕೋಡದ(ತಾಲೂಕಾ ಸಂಘಟನಾ ಕಾರ್ಯದಶರ್ಿ) ಸಮಾಲೋಚನಾ ಸಭೆಯಲ್ಲಿ ತಾಲೂಕಾಧ್ಯಕ್ಷ ಕೃಷ್ಣಮೂತರ್ಿ ಲಮಾಣಿ, ರಾಜ್ಯ ಜಂಟಿ ಕಾರ್ಯದಶರ್ಿ ಮಂಜಪ್ಪ ವಡ್ಡರ, ತಾಲೂಕಾ ಪ್ರಧಾನ ಕಾರ್ಯದಶರ್ಿ ವೆಂಕಟೇಶ ಹೊಸಮನಿ, ತಾಲೂಕಾ ಉಪಾಧ್ಯಕ್ಷ ಗಣೇಶ ಅಂಕಸಾಪುರ ಸೇರಿದಂತೆ ನೂರಾರು ಕಾರ್ಯಕರ್ತರು, ಪಾಲ್ಗೊಂಡಿದ್ದರು