ಲೋಕದರ್ಶನ ವರದಿ
ಧಾರವಾಡ 16 : ಶಿರಡಿಯ ಸಾಯಿ ಬಾಬಾ ನೆನದವರ ಮನದಲ್ಲಿ ಆಸೀನವಾಗಿದ್ದು, ಬಾಬಾನ ನೆನಸಿದಲ್ಲಿ ಕ್ಷಣಾರ್ಧದಲ್ಲಿ ್ಲ ಸಂಕಷ್ಟ ನಿವಾರಣೆಯಾಗಲಿವೆ ಎಂದು ಧಾರವಾಡ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರಾದ ಈಶಪ್ಪ ಭೂತೆ ಹೇಳಿದರು.
ಅವರು ಮಂಗಳವಾರ ಇಲ್ಲಿಯ ಕೆಲಗೇರಿ ರಸ್ತೆಯಲ್ಲಿರುವ ಶ್ರೀ ಶಿರಡಿ ಸಾಯಿಬಾಬಾರವರ ಸಮಾಧಿ ಶತಮಾನದ ಸ್ಮರಣೋತ್ಸವ ಮೂರನೇ ದಿನದ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾಯಿ ಬಾಬಾ ಇಡೀ ಅಖಂಡ ಜಗತ್ತೇಗೆ ಪ್ರಚಲಿತವಾಗಿದ್ದು, ಮನಸ್ಸಿನಲ್ಲಿ ನೆನಪಿಸಿಕೊಂಡ ಇಷ್ಟಾರ್ಥಗಳು ಕ್ಷಣಾರ್ಧದಲ್ಲಿ ಈಡೇರುವವು. ಅಂತಹ ಮಹಾನ್ ಪುರುಷರ ಸಮಾಧೀ ಶತಮಾನೋತ್ಸವವನ್ನು ಸಾಯಿ ಸದ್ಭಕ್ತರು ಮನಸಾರೆ ಆಚರಿಸುವ ಮೂಲಕ ಜೀವನ ಪಾವನ ಮಾಡಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಬಾಬಾರವರನ್ನು ನೀವು ನೋಡದಿದ್ದರೂ, ಬಾಬಾರವರು ನಿಮ್ಮನ್ನು ನೋಡುತ್ತಾರೆ. ಅಂತಹ ಎಷ್ಟೋ ಅನುಭವಗಳನ್ನು ನಾನು ಕೂಡ ಅನುಭವಿಸಿದ್ದೇನೆ ಎಂದು ಸ್ಮರಿಸಿದರು.
ಬೆಳಗಾವಿಯ ಸತ್ರ ನ್ಯಾಯಾಧೀಶರಾದ ವಿಶ್ವನಾಥ ಸೂರ್ಯವಂಶಿ ಮಾತನಾಡಿ, ಶಿರಡಿ ಸಾಯಿ ಬಾಬಾ ಜೀವನ ಸಂಕಷ್ಟ, ಸವಾಲು ಹಾಗು ಅವರ ಸಾಧನೆ ಇತರರಿಗೆ ಸ್ಪೂತರ್ಿಯಾಗಿದೆ. ಪ್ರತಿ ನಿತ್ಯ ಬಾಬಾ ನೆನೆದರೆ ಜೀವನ ರೂಪುಗೊಳ್ಳುತ್ತದೆ. ನಾನು ಕೂಡ ಬಾಬಾರವರ ಭಕ್ತನಾಗಿದ್ದು, ಅನೇಕ ಅನುಭವಗಳಾಗಿವೆ ಎಂದರು.
ಶ್ರೀ ಶಿರಡಿ ಸಾಯಿಬಾಬಾ ಟ್ರಸ್ಟ್ ಅಧ್ಯಕ್ಷ ಮಹೇಶ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ನಾಲ್ಕನೇ ಹೆಚ್ಚುವರಿ ನ್ಯಾಯಾಧೀಶ ಹೊಸಮನಿ ಸಿದ್ದಪ್ಪ ಹೆಚ್. , ನಿವೃತ್ತ ನ್ಯಾಯಾಧೀಶರಾದ ಬಳ್ಳೋಳ್ಳಿ, ಧಾರವಾಡ ಜಿಲ್ಲಾ ಗ್ರಾಹಕರ ವೇದಿಕೆ ನ್ಯಾಯಾಧೀಶರಾದ ಕುಂಬಾರ, ಟ್ರಸ್ಟ್ ಸದಸ್ಯರಾದ ವಿಪಿನ್ನಾಂದ ಶೆಟ್ಟಿ, ವಿಜಯ ಲಾಡ್, ಆಶಾ ರಮೇಶ ನಾಯ್ಕ, ಶ್ರೀಮತಿ ಬಸಪ್ಪ ಮುಶಿಗೇರಿ, ಸುಜನ್ ಶೆಟ್ಟಿ, ಸರೋಜನಿ ಕೊಟಬಾರಿ, ಜಿ.ಬಿ. ಶಾನವಾಡ, ರಾಜೇಶ್ವರಿ ನರೇಂದ್ರ, ಶ್ರೀನಿವಾಸ ಶೆಟ್ಟಿ, ಭಾಸ್ಕರ ಮಾನೆ, ಸೌರಭ ಸಾಳಗಾಂವಕರ್ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಸಂತೋಷ ಮಿಕ್ಕಲಿ ಸ್ವಾಗತಿಸಿದರು. ಪ್ರಜ್ಞಾ ಮತ್ತಿಹಳ್ಳಿ ನಿರೂಪಿಸಿದರು.
ಮೂರನೇ ದಿನದ ಕಾರ್ಯಕ್ರಮದಲ್ಲಿ ಸಾಯಿ ಭಜನಾ ಮಂಡಳಿಯವರಿಂದ ದಾಂಡಿಯಾ ನೃತ್ಯ, ಜಾನಪದ ಗೀತೆಗಳು, ಜೋಕುಮಾರ ಸ್ವಾಮಿ ಗೀತೆಗಳು, ಗೀಗೀ ಪದಗಳು, ಗಭರ್ಾ ನೃತ್ಯ, ಪ್ರಜ್ವಲ್ ಹವ್ಯಾಸಿ ನಾಟಕ ತಂಡದಿಂದ ಆಯೋ ಸಾಯಿ ನಾಟಕ ಮೆರಗು ನೀಡಿದವು.