ಯಲಬುರ್ಗಾ ಏ26: ತಾಲೂಕು ವಕೀಲರ ಸಂಘದ ಕಛೇರಿಯಲ್ಲಿ ಶುಕ್ರವಾರ ನಡೆದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಚುನಾವಣೆ ನಡೆದಿದ್ದು, ನೂತನ ಅಧ್ಯಕ್ಷರಾಗಿ ಎಸ್ ಎಸ್ ಹೊಂಬಳ ಅವರು ಆಯ್ಕೆಯಾಗಿದ್ದಾರೆ.
ವಕೀಲರ ಸಂಘದ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಪ್ರಭುರಾಜ ಕಲಬುರ್ಗಿ, ಈರನಗೌಡ ಕೆಂಚಮ್ಮನವರ ಮಾತನಾಡಿ, ತಾಲೂಕಿನಲ್ಲಿ ಒಟ್ಟು 117 ಮತಗಳಿದ್ದು ಅದರಲ್ಲಿ ಎರಡು ಮತಗಳು ಅಸಿಂಧುವಾಗಿವೆ ಎಂದರು.
ಮತದಾನದ ವಿವರ : ಅಧ್ಯಕ್ಷ ಸ್ಥಾನಕ್ಕೆ ಎಸ್.ಎಸ್. ಹೊಂಬಳ 64, ಪ್ರತಿ ಸ್ಪರ್ಧಿ ಎಸ್.ಎನ್. ಶ್ಯಾಗೋಟಿಗೆ 52, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಂ.ಎಸ್. ನಾಯಕರ್ 67, ಪ್ರತಿ ಸ್ಪರ್ಧಿ ಸಿ.ಆರ್. ಕೆಂಚಮ್ಮನವರ್ 48, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಹಾಂತೇಶ ಈ.ಟಿ. 65, ಪ್ರತಿ ಸ್ಪರ್ಧಿ ಕಳಕಪ್ಪ ರಾಮಪ್ಪ ಬೆಟಗೇರಿ 51, ಜಂಟಿಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಹಸನಸಾಬ ನದಾಫ್ 68, ಪ್ರತಿ ಸ್ಪರ್ಧಿ ಹನಮಪ್ಪ ಕಮ್ಮಾರ 48, ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಸವರಾಜ ರಾಚಪ್ಪ ತುರಕಾಣಿ 58, ಪ್ರತಿ ಸ್ಪರ್ಧಿ ಪ್ರವೀಣ ಮಲಗಾ 57, ಮತಗಳನ್ನು ಪಡೆದುಕೊಂಡ ಮಾಜಿ ಅಧ್ಯಕ್ಷ ಆನಂದ ಉಳ್ಳಾಗಡ್ಡಿ ನೇತೃತ್ವದ ತಂಡ ಜಯಶೀಲರಾಗಿದ್ದಾರೆ ಎಂದರು.
ಈ ವೇಳೆ ವಕೀಲರ ಸಂಘದ ಮಾಜಿ ಅಧ್ಯಕ್ಷ ಆನಂದ ಉಳ್ಳಾಗಡ್ಡಿ, ಸರ್ಕಾರಿ ವಕೀಲರಾದ ಮಲ್ಲನಗೌಡ, ವಕೀಲರಾದ ಯು.ಎಸ್.ಮೇಣಸಗೇರಿ, ಅಕ್ಕಮಹಾದೇವಿ ಸಂಗಮೇಶ ಪಾಟೀಲ, ಪ್ರವೀಣ್ ಉಳ್ಳಾಗಡ್ಡಿ, ರಾಘವೇಂದ್ರ ಕುಷ್ಟಗಿ ಶೆಟ್ಟರ್, ಎ.ಎಂ.ಪಾಟೀಲ, ಸಾವಿತ್ರಿ ಗೊಲ್ಲರ, ಅಮರೇಶ ಹುಬ್ಬಳ್ಳಿ, ಶಿವನಗೌಡ ಮಾಲಿಪಾಟೀಲ್, ಎಸ್.ಸಿ.ಗದಗ ಇದ್ದರು.