ಬೆಂಗಳೂರು,ಫೆ. 17, ಕಂಬಳ ವೀರ ಶ್ರೀನಿವಾಸಗೌಡ ಅವರನ್ನು ಕರೆದಿದ್ದು, ಅವರಿಗೆ ಅಗತ್ಯವಾದ ಎಲ್ಲಾ ತರಬೇತಿ ಕೊಡುತ್ತೇವೆ ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀನಿವಾಸಗೌಡ ಅವರು ಫ್ರೀ ಕ್ವಾಲಿಫಿಕೇಶನ್ ನಲ್ಲಿ ಪಾಸ್ ಆದಲ್ಲಿ ತರಬೇತಿ ನೀಡುತ್ತೇವೆ ಎಂದರು.ಕಾಂಗ್ರೆಸ್ನ ನಿಜ ಬಣ್ಣ ಬಯಲಾಗಿದೆ. ಹುಬ್ಬಳ್ಳಿ, ಶಾಹೀನ್ ಶಾಲೆ ವಿಚಾರದಲ್ಲಿ ದ್ವಂದ್ವ ನಿಲುವು ಹೊಂದಿದೆ. ದೇಶದ್ರೋಹಿಗಳೊಂದಿಗೆ ಯಾವುದೇ ಕಾರಣಕ್ಕೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ.
ಇಲ್ಲಿ ಇದ್ದು ಪಾಕ್ ಪರ ಘೋಷಣೆ ಕೂಗುವುದು ಸರಿಯಲ್ಲ.ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಗೃಹಸಚಿವರಿಗೆ ಒತ್ತಾಯಿಸುವುದಾಗಿ ಹೇಳಿದರು.ಹುಬ್ಬಳ್ಳಿಯಲ್ಲಿ ದೇಶದ್ರೋಹ ಎಸಗಿದವರಿಗೂ ಕಠಿಣ ಕ್ರಮ ಜರುಗಿಸಬೇಕು. ಸಿಎಎ ವಿರೋಧವಾಗಿ ಶಾಹಿನ್ ಶಾಲೆಯಲ್ಲಿ ಮಕ್ಕಳ ಮೂಲಕ ನಾಟಕ ಮಾಡಿಸಿದ್ದಾರೆ. ಸಿಎಎ ಯಿಂದ ಯಾರಿಗೂ ತೊಂದರೆಯಾಗಿಲ್ಲ. ಸಿಎಎಯಿಂದ ಯಾರ ಹಕ್ಕು ಕಿತ್ತುಕೊಂಡಿದೆ. ಸಂವಿಧಾನ ವಿರೋಧಿ ಎಂದು ಹೇಳಿದ್ದಾರೆ. ಭಾರತೀಯ ಪ್ರಜೆಗಳಿಗೆ ತಾರತಮ್ಯ ಮಾಡಿಲ್ಲ. ಕಾಂಗ್ರೆಸ್ ನವರು ಮಾಡುತ್ತಿರುವುದು ಆರೋಪವಷ್ಟೇ ಎಂದರು.