ಹಾರೂಗೇರಿ ಪೋಲಿಸ್ ಠಾಣೆಗೆ ಎಸ್ಪಿ ರೆಡ್ಡಿ ಭೇಟಿ

ಹಾರೂಗೇರಿ,03: ಕಳೆದ ಮೂರು ವರ್ಷಗಳಿಂದ ಪಟ್ಟಣದಲ್ಲಿ ಪುರಸಭೆ ಆವರಣದಲ್ಲಿ ಪೋಲಿಸ್ ಠಾಣೆ ಪ್ರಾರಂಭವಾಗಿದ್ದು ಸರಕಾರದಿಂದ ಸೂಕ್ತ ಭೂಮಿಯನ್ನು ಅಥವಾ ಖಾಸಗಿ ಭೂಮಿ ಇಲಾಖೆಯಿಂದ ಖರೀದಿಸಲು ಅನುಮೋದನೆಯನ್ನು ಪಡೆದುಕೊಂಡಿದೆ ಎಂದು ಬೆಳಗಾವಿ ಎಸ್ ಪಿ ಸುಧೀರಕುಮಾರ ರೆಡ್ಡಿ ಹೇಳಿದರು.

ಪಟ್ಟಣದ ಪೋಲಿಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ  ಅವರು ಮುಂಬರುವ ದಿನಗಳಲ್ಲಿ ತಕ್ಷಣ ಪೋಲಿಸ್ ಠಾಣೆಗೆ ಸೂಕ್ತವಾದ ಸ್ಥಳವನ್ನು ಗುರುತಿಸಿ ಪೋಲಿಸ ವಸತಿ ನಿಲಯಗಳು ಹಾಗೂ ಪೋಲಿಸ್ ಠಾಣೆ ನಿಮರ್ಾಣದ ಕ್ರಮವನ್ನು ನಾವುಗಳು ತಗೆದುಕೊಳ್ಳುತ್ತಿದ್ದೇವೆ ಹಾಗೂ ಈ ಭಾಗದಲ್ಲಿ ಮಹಿಳಾ ಪೋಲಿಸ್ ಠಾಣೆ ನಿಮರ್ಾಣಕ್ಕೆ ಸರಕಾರದ ಕೆಲವೊಂದು ಮಾನದಂಡನೆಗಳನ್ನು ಗುರುತಿಸಿಕೊಂಡು ಕ್ರಮ ಕೈಗೊಳ್ಳಲಾಗುತ್ತದೆ. ಮಹಿಳೆಯರಿಗೂ ಈಗಿರುವ ಪೋಲಿಸ್ ಠಾಣೆಯಲ್ಲಿ ಅವರುಗಳಿಗೂ ಕೂಡ ಸೂಕ್ತವಾಗಿ ನ್ಯಾಯ ಕೊಡಿಸುವ ವ್ಯವಸ್ಥೆ ಇರುತ್ತದೆ ಎಂದು ಸುಧೀರಕುಮಾರ ರೆಡ್ಡಿ ಹೇಳಿದರು.

ಪೋಲಿಸ್ ಠಾಣೆಯ ವಿವಿಧ ದಾಖಲೆಗಳು ಹಾಗೂ ಪೋಲಿಸ್ ಸಿಬ್ಬಂದಿಗಳೊಂದಿಗೆ ಕಾನೂನು ಸುವ್ಯವಸ್ಥೆಯ ಬಗ್ಗೆ ಚಚರ್ೆ ನಡೆಸಿದರು.

ರಾಯಬಾಗ ಸಿಪಿಆಯ್ ಪ್ರೀತಂ ಶ್ರೇಯಕರ, ಹಾರೂಗೇರಿ ಪಿಎಸ್ಆಯ್, ಎಎಸ್ಐ, ಮುಖ್ಯಪೇದೆ, ಪೇದೆಗಳು ಉಪಸ್ಥಿತರಿದ್ದರು.