ಲೋಕದರ್ಶನ ವರದಿ
ಹೊನ್ನಾವರ,22:. ಎಂ.ಪಿ.ಇ. ಸೊಸೈಟಿಯ, ಎಸ್.ಡಿ.ಎಂ. ಪದವಿ ಪೂರ್ವ ಮಹಾವಿದ್ಯಾಲಯದ ವಾಷರ್ಿಕ ಸ್ನೇಹ ಸಮ್ಮೇಳನವು ನೇರವೆರಿತು. ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಎಂ.ಪಿ.ಕಕರ್ಿಯವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಾಗರದ ಖ್ಯಾತ ರಂಗ ಚಿಂತಕರಾದ ದೇವೇಂದ್ರ ಬೆಳೆಯೂರು, ಮಾತನಾಡಿ ಪ್ರೀತಿ ಕರುಣೆಯಿಂದ ಬದುಕುವುದೇ ಧರ್ಮ, ಸಂಸ್ಕಾರವಂತರಾಗಿ, ಪ್ರಕೃತಿದತ್ತವಾದ ಎಲ್ಲಾ ಚೈತನ್ಯವನ್ನು ಒಗ್ಗೂಡಿಸಿಕೊಂಡು ನಮ್ಮೆಲ್ಲರಿಗೆ ಆದರ್ಶನಾದ ಶ್ರೀರಾಮನಂತೆ ಸುಪ್ರಜೆಯಾಗಿ ಬದುಕಿರಿ ಎಂದು ಕರೆ ನೀಡಿದರು.
ಸಂಸ್ಥೆಯ ಉಪಾಧ್ಯಕ್ಷರಾದ . ಕೃಷ್ಣಮೂತರ್ಿ ಭಟ್ ಮಾತನಾಡಿ ವಿದ್ಯಾಥರ್ಿಗಳ ಸವರ್ಾಂಗೀಣ ವಿಕಾಸಕ್ಕೆ ನಮ್ಮ ಸಂಸ್ಥೆ ನಿಮ್ಮೊಂದಿಗೆ ಇರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ವಿಜಯಲಕ್ಷ್ಮೀ ಎಂ. ನಾಯ್ಕ ಇವರು ವಿದ್ಯಾಥರ್ಿಗಳು ಮೂಲ ವಿಜ್ಞಾನದ ಅಧ್ಯಯನದೊಂದಿಗೆ ಸಂಶೋಧನಾ ಕಾರ್ಯಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕೆಂದು ಕಿವಿಮಾತನ್ನು ಹೇಳಿದರು.
ಸಭಾಧ್ಯಕ್ಷತೆ ವಹಿಸಿದ ಪ್ರಾಚಾರ್ಯರಾದ ಎಂ.ಎಚ್. ಭಟ್ಟ ಮಾತನಾಡಿ ವಿದ್ಯಾಥರ್ಿಗಳ ಸಾಧನೆಗೆ ಪ್ರೋತ್ಸಾಹ ಅತ್ಯಗತ್ಯ, ಅದನ್ನು ಗುರುತಿಸುವ ಕೆಲಸ ನಮ್ಮ ಮಹಾವಿದ್ಯಾಲಯ ಮಾಡುತ್ತಿದೆ ಅಂತೆಯೇ ಎಲ್ಲ ವಿದ್ಯಾಥರ್ಿಗಳು ಸಹಪಠ್ಯ ಚಟುವಟಿಕೆಗಳಲ್ಲೂ ಸಾಧಕರಾಗಬೇಕೆಂದು ಹೇಳಿದರು.
ಈ ವೇದಿಕೆಯಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆಯನ್ನು ಮಾಡಿದ ನಮ್ಮ ಮಹಾವಿದ್ಯಾಲಯದ ವಿದ್ಯಾಥರ್ಿನಿಯಾದ ಕು. ಅಖಿಲಾ ನಾಗರಾಜ ಹೆಗಡೆ ಹಾಗೂ ಕು. ಆದರ್ಶ ನಾಯ್ಕ ಇವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದಶರ್ಿಯಾದ ಎಸ್. ಎಂ. ಭಟ್ಟ, ಖಜಾಂಚಿಯಾದ ಉಮೇಶ ನಾಯ್ಕ, ವಿದ್ಯಾಥರ್ಿ ಒಕ್ಕೂಟದ ಸಲಹೆಗಾರರಾದ ಆಯ್.ಎ.ಶೇಖ್, ಪ್ರಧಾನ ಕಾರ್ಯದಶರ್ಿಯಾದ ಕು. ಮಂಜುನಾಥ ಸಾಲೇಹಿತ್ತಲ್, ಕ್ರೀಡಾ ಕಾರ್ಯದಶರ್ಿಯಾದ ಪ್ರಜ್ವಲ ಮೊಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಪನ್ಯಾಸಕರಾದ ಆಯ್.ಎ.ಶೇಖ್ ಸ್ವಾಗತಿಸಿದರು, ವಿನಾಯಕ ಭಟ್ಟ ಪ್ರಾಸ್ತಾವಿಕ ನುಡಿಯೊಂದಿಗೆ ಪರಿಚಯಿಸಿದರು, ವಿದ್ಯಾಧರ ನಾಯ್ಕ ವಾಷರ್ಿಕ ವರದಿಯನ್ನು ವಾಚಿಸಿದರು. ಪ್ರಸಾದ ಎಸ್.ಜಿ. ವಂದಿಸಿದರು .