ಬೈಲಹೊಂಗಲ 12: ಪೆನಶನ್ ಹಣವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮ್ಯಾನೇಜರ್ ಸರಿಯಾಗಿ ಜಮೆ ಮಾಡುತ್ತಿಲ್ಲ ಮತ್ತು ಗ್ರಾಹಕರಿಗೆ ಅಗೌರವ ನೀಡುತ್ತಿದ್ದಾರೆಂದು ಆರೋಪಿಸಿ ಎಸ್ಬಿಐ ಬ್ಯಾಂಕ್ ಎದುರು ಪುರಸಭೆ ನಿವೃತ್ತ ಸಿಬ್ಬಂದಿ, ಕಾಮರ್ಿಕರು ಮಂಗಳವಾರ ಪ್ರತಿಭಟನೆ ನಡೆಸಿದರು.
ಖಜಾನೆ ಇಲಾಖೆಯವರು ಪ್ರತಿ ತಿಂಗಳು ದಿ.30ರಂದು ಚೆಕ್ ಮತ್ತು ಮಾಹಿತಿ ಕಳುಹಿಸಿರುತ್ತಾರೆ. ಆದರೆ ಎಸ್ಬಿಐ ಬ್ಯಾಂಕನವರು ಇನ್ನೂ ಮೇಲ್ ಬಂದಿಲ್ಲ, ಬ್ಯಾಂಕ್ನಲ್ಲಿ ಬಹಳಷ್ಟು ಗ್ರಾಹಕರಿದ್ದಾರೆ. ಆ ಮೇಲೆ ಜಮಾ ಮಾಡುತ್ತೇವೆಂದು ಕಾಲಹರಣ ಮಾಡುತ್ತಿದ್ದಾರೆ. ಪ್ರತಿ ತಿಂಗಳು ದಿ.1ರಂದು ಹಣ ಜಮೆ ಮಾಡಬೇಕು. ಆದರೆ ಪ್ರಸ್ತುತ ದಿ.11 ಆದರೂ ಜಮೆ ಆಗಿಲ್ಲ. ಪೆನಶನ್ ಹಣದ ಮೇಲೆಯೇ ಅವಲಂಬಿತರಾಗಿದ್ದು, ಜೀವನ ಸಾಗಿಸುವುದು ಕಷ್ಟದಾಯಕವಾಗಿದೆ. ವಯಸ್ಸಾದ ವೃದ್ಧರು ಪ್ರತಿದಿನ ಬ್ಯಾಂಕ್ಗೆ ಅಲೆದಾಡುವ ಪರಿಸ್ಥಿತಿ ನಿಮರ್ಾಣವಾಗಿದೆ ಎಂದು ಆರೋಪಿಸಿದರು.
ಬೇಗ ಪೆನಶನ್ ಹಣ ಜಮೆ ಮಾಡಿ ಎಂದರೆ, ಮ್ಯಾನೇಜರ್ ಉಡಾಫೆ ಉತ್ತರ ನೀಡುತ್ತಾ, ಗ್ರಾಹಕರಿಗೆ ಅಗೌರವ ತೋರುತ್ತಿದ್ದಾರೆ. ನಿವೃತ್ತ ನೌಕರರನ್ನು ನಾಳೆ ಬಾ ಎಂದು ಸುಮ್ಮನೆ ಅಲೆದಾಡಿಸುತ್ತಿದ್ದಾರೆಂದು ಆರೋಪಿಸಿದರು.
ಬಸವ್ವಾ ಮೆಗೇರಿ, ಬಸವ್ವ ಹೊರಕೇರಿ, ಗಂಗವ್ವ ಭರಮಣ್ಣವರ, ಗದಿಗೆವ್ವ ಹಲಗಿ, ಮಲ್ಲವ್ವ ಭರಮಣ್ಣವರ, ಪಾರ್ವತೆವ್ವ ಸಂಗೊಳ್ಳಿ, ಮಹಾದೇವ ಕಾಳಿ, ಆರ್.ಎಸ್.ಗೌಡರ, ಶಂಕರ ತಳವಾರ ಸೇರಿದಂತೆ ಅನೇಕರು ಇದ್ದರು.
----
ಎಸ್ಬಿಐ ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿ ಗ್ರಾಹಕರಿಗೆ ಸರಿಯಾಗಿ ಮಾಹಿತಿ ನೀಡಲ್ಲ. ಇದರಿಂದ ಅನಕ್ಷರಸ್ಥ ಗ್ರಾಹಕರಿಗೆ ತುಂಬಾ ತೊಂದರೆಯಾಗುತ್ತಿದೆ. ಗ್ರಾಹಕರ ಅಲೆದಾಟದಲ್ಲೆ ಸಮಯ ವ್ಯರ್ಥವಾಗುತ್ತಿದೆ.
ಬಿ.ಎಸ್.ವಕ್ಕುಂದ
ಎಸ್ಬಿಐ ಬ್ಯಾಂಕ್ ಗ್ರಾಹಕರು
-----
ಪುರಸಭೆ ನಿವೃತ್ತ ಸಿಬ್ಬಂದಿ, ಕಾಮರ್ಿಕರ ಪೆನಶನ್ ಹಣದ ಚೆಕ್ ಮತ್ತು ಮಾಹಿತಿಯನ್ನು ಖಜಾನೆ ಇಲಾಖೆಯವರು ನಮ್ಮ ಎಸ್ಬಿಐ ಬ್ಯಾಂಕ್ಗೆ ಮೇಲ್ ಮಾಡಬೇಕು. ಆದರೆ ಈವರೆಗೂ ಮಾಹಿತಿ ಕಳಿಸಿಲ್ಲ. ಗ್ರಾಹಕರಿಗೆ, ನಿವೃತ್ತ ನೌಕರರಿಗೆ ಯಾವುದೇ ತೊಂದರೆ ನೀಡುತ್ತಿಲ್ಲ. ಗ್ರಾಹಕರ ಪರ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.
ಮ್ಯಾನೇಜರ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬೈಲಹೊಂಗಲ