ಎಸ್. ಆರ್ ಶ್ರೀನಿವಾಸರಿಂದ ಆತ್ಮಲಿಂಗಕ್ಕೆ ಪೂಜೆ

ಲೋಕದರ್ಶನ ವರದಿ

ಗೋಕರ್ಣ: ಉಡುಪಿ ಮತ್ತು ಮಂಗಳೂರು ಮಧ್ಯಭಾಗದಲ್ಲಿ ಸಣ್ಣ ಕೈಗಾರಿಕೆ ನಡೆಸಲು ಜಾಗವನ್ನು ಗುರುತಿಸಿದ್ದು ಆಮೂಲಕ ಈ ಭಾಗದ ಜನರಿಗೆ ಪ್ರಥಮ ಆದ್ಯತೆಯ ಮೇರಿಗೆ ಜಾಗ ನೀಡಿ ಸಣ್ಣ ಕೈಗಾರಿಕೆ ಉತ್ತೇಜಿಸಲು ಸಕರ್ಾರ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಸಣ್ಣ ಕೈಗಾರಿಕೆ ಸಚಿವ ಎಸ್. ಆರ್ . ಶ್ರೀನಿವಾಸ ಹೇಳಿದರು ಅವರು ಬುಧವಾರ ಸಂಜೆ ಇಲ್ಲಿನ ಮಹಾಬಲೇಶ್ವರ ದೇವಾಲಯಕ್ಕೆ  ಭೇಟಿ ನೀಡಿ ಆತ್ಮಲಿಂಗಕ್ಕೆ ಪೂಜೆಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ತಿಳಿಸಿದರು.ವಿಶೇಷವಾಗಿ ಈ ಭಾಗದ ಪ್ರಮುಖ ಬೆಳೆಯಾದ ತೆಂಗು ಇದರ ನಾರಿನ ಉತ್ಪನ್ನಗಳ ತಯಾರಿಕೆಗಳ ಬಗ್ಗೆ ಪ್ರೋತ್ಸಾಹ ನೀಡುವ ಸಲುವಾಗಿ ಕೇರಳ ಮತ್ತು ತಮಿಳುನಾಡಿಗೆ ಪ್ರವಾಸ ಮಾಡಿದ್ದು,ಅಲ್ಲಿನ  ತೆಂಗು ಬೆಳಗಾಗರು ಯಾವ ರೀತಿ ಪೂರಕ ಉತ್ಪನ್ನಗಳನ್ನಾ ದೊಡ್ಡ ಮಟ್ಟದಲ್ಲಿ ತಯಾರುಸುತ್ತಾರೂ ಅದೇ ರೀತಿ ಇಲ್ಲಿನ ತೆಂಗು ಬೆಳಗಾರರ ಪ್ರತಿ ಕುಟುಂಬ ಭಾಗವಹಿಸುವಂತೆ ಮಹಿಳೆಯ ಅಥವಾ ಪುರುಷರ  ಸಹಕಾರಿ ಸಂಘ ರೀತಿ 15ಜನರ ಗುಂಪು ರಚಿಸಿ ಆ ಮೂಲಕ ಸಕರ್ಾರ ಉದ್ದಿಮೆ ನಡೆಸುವ ಸಂಘಕ್ಕೆ ಸಕರ್ಾರವೇ ಯುನಿಟ್ ಸ್ಥಾಪಿಸಿ ಕೊಡಲಿದೆ . ಇದರಿಂದ ಬರುವ ತೆಂಗಿನ ನಾರುಗಳ ಬಳಕೆ ಮಾಡುವ ರಸ್ತೆ, ಟೆಕ್ಸಟೈಲ್ ಉದ್ಯಮಕ್ಕೆ  ರಫ್ತುಮಾಡಲು  ಅನುಕೂಲವಾಗುತ್ತದೆ.  ಎಲ್ಲೆಲ್ಲಿ ತೆಂಗು ಬೆಳೆಗಳನ್ನು ಹೆಚ್ಚಾಗಿ ಬೆಳೆಯುವ ಪ್ರದೇಶಗಳಿಗೆ ಪ್ರತಿ ಗ್ರಾಮದಲ್ಲೂ ಈ ಯುನಿಟ್ ಸ್ಥಾಪನೆ ಮಾಡುವುದಾಗಿ ತಿಳಿಸಿದರು.   ಈ ಯೋಜನೆ ಈ ತಿಂಗಳ ಕೊನೆಯಲ್ಲಿ ಅನುಷ್ಠಾನ ಗೊಳಿಸಲಾಗುತ್ತಿದ್ದ ಇದು ರಾಜ್ಯದಲ್ಲೆ ಪ್ರಥಮವಾಗಿ ಜಾರಿಗೊಳ್ಳುತ್ತಿದೆ ಎಂದು ತಿಳಿಸಿದರು.ಸಚಿವರ ಆಪ್ತರು ಮತ್ತು ಜಿಲ್ಲಾ ಸಣ್ಣಕೈಗಾರಿಕಾ ನಿಗಮದ ಅಧಿಕಾರಿಗಳು ಮತ್ತು ದೇವಾಲಯದ ಆಡಳಿತಾಧಿಕಾರಿ ಜಿ.ಕೆ.ಹೆಗಡೆ ಉಪಸ್ಥಿತರಿದ್ದರು.