ಲೋಕದರ್ಶನ ವರದಿ
ಯಲ್ಲಾಪುರ: ಗ್ರಾಮೀಣ ಭಾಗದಲ್ಲಿ ಸರಕಾರಿ ಪಪೂ ಕಾಲೇಜುಗಳಲ್ಲಿ ಎಲ್ಲ ಸೌಲಭ್ಯಗಳು ಇವೆ. ಆ ಭಾಗದ ವಿದ್ಯಾಥರ್ಿಗಳು ಅಲ್ಲಿಯೇ ಓದುವಂತಾಗಬೇಕು ಹಾಗದಾಗ ಅಲ್ಲಿಯ ಕಾಲೇಜುಗಳನ್ನು ಉಳಿಸಿಕೊಳ್ಳಲು ಸಾಧ್ಯ ಹಾಗೂ ಪಟ್ಟಣದಲ್ಲಿ ವಿದ್ಯಾಥರ್ಿಗಳ ಸಂಖ್ಯೆ ಹೆಚ್ಚಾಗಿ ತೊಂದರೆಯಾಗುವದಿಲ್ಲ.
ಸರಕಾರಿ ಪಪೂ ಕಾಲೇಜು ಇರುವ ಮಂಚೀಕೇರಿ, ಗುಳ್ಳಾಪುರ, ಕಿರವತ್ತಿ ಭಾಗದ ವಿದ್ಯಾಥರ್ಿಗಳಿಗೆ ಪಟ್ಟಣದ ಸರಕಾರಿ ಕಾಲೇಜನಲ್ಲಿ ದಾಖಲಾತಿ ನೀಡಬಾರದು ಎಂದು ಪ್ರಾಂಶುಪಾಲರಿಗೆ ಸೂಚಿಸಲಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಪಟ್ಟಣದ ತಾಪಂ ಸಭಾಭವನದಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ಶಾಸಕ ಶಿವರಾಮ ಹೆಬ್ಬಾರ ಅಧ್ಯಕ್ಷತೆಯಲ್ಲಿ ನಡೆಯಿತು.ವಜ್ರಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ದುರಸ್ತಿಗೆ 8-10ಲಕ್ಷ ಅನುದಾನ ಅಗತ್ಯವಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ನರೇಂದ್ರ ಪವಾರ ಹೇಳಿದಾಗ ಸರಕಾರದಿಂದ ಕೊಡಿಸುವದಾಗಿ ಶಾಸಕರು ಭರವಸೆ ನೀಡಿದರು.
ಚವತ್ತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡಕ್ಕೆ ಜಾಗದ ಕೊರತೆಯಿದ್ದು ಪಾಥಮಿಕಶಾಲೆ ಆವಾರದಲ್ಲಿ ಖಾಲಿ ಇರುವ ಜಾಗವನ್ನು ಅದಕ್ಕೆ ನೀಡುವ ಕುರಿತು ನೀರ್ಣಯ ಕೈಗೊಂಡು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಬಿಇಒ ಎನ್.ಆರ್ ಹೆಗಡೆಗೆ ಶಾಸಕರು ಸೂಚಿಸಿದರು.ಕುಡಿಯುವ ನೀರಿನ ಸಮರ್ಪಕ ನಿರ್ವಹಣೆಗೆ ಸರಕಾರ ಸಾಕಷ್ಟು ಅನುದಾನ ನೀಡಿದೆ ಹಣದ ಕೊರತೆ ಇಲ್ಲ ಅಧಿಕಾರಿಗಳು ಹೆಚ್ಚಿನ ಕಾಳಜಿವಹಿಸಿ ಕೆಲಸ ಮಾಡಿ ಎಂದರು.
ಪಡಿತರ ಚೀಟಿ ಪಡೆಯಲು ವಿಧಿಸಿದ್ದಬಯೋಮೆಟ್ರಿಕ್ ಪದ್ಧತಿಯಿಂದ ಗ್ರಾಹಕರಿಗೆ ಅನಾನುಕೂಲತೆ ಆಗುತ್ತಿದೆ. ಇನ್ನು ಮುಂದೆ ಸರಳವಿಧಾನ ಅನುಸರಿಸುವಂತೆ ತಹಶೀಲ್ದಾರರಿಗೆ ಹೇಳಿದರು.
ರೈತರಿಗೆ 1ಲಕ್ಷ ರೂ ವರೆಗಿನ ಸಾಲಮನ್ನಾ ಸೌಲಭ್ಯ ದೊರಕುವಂತಾಗಿದ್ದು ಜಿಲ್ಲೆಯಲ್ಲಿ ಈ ಯೋಜನೆಯಡಿ 476ಕೋಟಿ ರೂ ಸಾಲಮನ್ನಾ ಆಗಿದ್ದು ,ಈಗಾಗಲೆ230 ಕೋಟಿರೂಗಳನ್ನು ಸರಕಾರ ಬಿಡುಗಡೆ ಮಾಡಿದೆ ಎಂದರು.
ರೈತರಿಗೆ ಕೃಷಿ ಅಧಿಕಾರಿಗಳು ಯಾವದೇ ಯೋಜನೆ ಗಳ, ಕಾರ್ಯಕ್ರಮಗಳ ಕುರಿತು ಸರಿಯಾದ ಮಾಹಿತಿ ನೀಡದೇ ಕದ್ದುಮುಚ್ಚಿ ಕಾರ್ಯಕ್ರಮ ಮಾಡುತ್ತಿರುವದು ಏಕೆಂದು ಗುರುಭಟ್ಟ ಕಲ್ಲಳ್ಳಿ ಪ್ರಶ್ನಿಸಿದರು. ಇಂದಿನ ದಿನಗಳಲ್ಲಿ ರೈತರು ಕೃಷಿ ಕ್ಷೇತ್ರಕ್ಕೆ ಬರಲು ಹಿಂದೇಟು ಹಾಕುತ್ತಿರುವಾಗ ನೀವು ಅವರಿಗೆ ಸೌಲಭ್ಯಗಳ ಕುರಿತು ಮಾಹಿತಿ ನೀಡಿ ಉತ್ತೇಜನ ನೀಡಬೇಕು ಹೀಗೆ ಮಾಡುವದು ಸರಿಯಲ್ಲ ಎಂದು ಕೃಷಿ ಅಧಿಕಾರಿ ವಿ.ಜಿ ಹೆಗಡೆ ವಿರುಧ್ದ ಶಾಸಕರು ಅಸಮಧಾನ ವ್ಯಕ್ತಪಡಿಸಿದರು.
ವಾಕರರಾ ನಿಗಮ ಸಂಸ್ಥೆಯ ಅಧ್ಯಕ್ಷರಾದ ಸಮಸ್ಯೆಗಳ ಕುರಿತು ಅರಿವಿದೆ. ತಾಲೂಕಿನ ಸಾರಿಗೆ ಘಟಕಕ್ಕೆ ಎರಡು ಮಿನಿ ಬಸ್ ಮಂಜೂರು ಮಾಡಿದೆ.ಹಂತ ಹಂತವಾಗಿ ಸುರಕ್ಷಿತ ಸುವ್ಯವಸ್ಥಿತ ಸಾರಿಗೆಗೆ ಕ್ರಮ ಕಯಗೊಳ್ಳಲಾಗುವದು.
ಗ್ರಾಮ ಪಂಚಾಯತಿ ಪಿಡಿಓಗಳು ಪ್ರಾಣಿಗಳ ಕುಡಿಯುವ ನೀರಿನ ತೊಟ್ಟಿ ನಿಮರ್ಿಸುವ ಯೋಜನೆ ರೂಪಿಸುವಂತೆ ಆದೇಶಿಸಿದರು.
ಮಳೆಗಾಲದಲ್ಲಿ ವಿದ್ಯುತ್ ಸಂಪರ್ಕದ ಸುವ್ಯವಸ್ಥೆಗಾಗಿ ಹೆಸ್ಕಾಂ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಅವಲಂಬಿಸುವದನ್ನು ಬಿಟ್ಟು ಆಯಾ ಗ್ರಾಮ ಪಂ ವ್ಯಾಪ್ತಿಯ ವಿದ್ಯುತ್ ಮಾರ್ಗಗಳ ಸುರಕ್ಷತೆಗೆ ಎಲ್ಲ ಗ್ರಾಪಂ ಳುನಿಗಾ ವಹಿಸಿ ತುತರ್ುಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ 35 ಭಾಗ್ಯಲಕ್ಮಿ ಬಾಂಡ ಪಲಾನುಭವಿಗಳಿಗೆ ಹಾಗೂ ಸರಕಾರದ ವಿವಿಧ ಯೋಜನೆಯಡಿ ಚೆಕ ನ್ನು ವಿತರಿಸಲಾಯಿತು.ತಾಪಂ ಅಧ್ಯಕ್ಷೆ ಭವ್ಯಾ ಶೆಟ್ಟಿ, ಜಿ.ಪಂ ಸದಸ್ಯೆ ಶೃತಿಹೆಗಡೆ, ತಹಶೀಲ್ದಾರ ಡಿ.ಜಿ ಹೆಗಡೆ, ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ತಿನೇಕರ್, ವಿಜಯ ಮಿರಾಶಿ ,ತಾಪಂ ಕಾರ್ಯನಿರ್ವಾಹಕ ನಾರಾಯಣ ಹೆಗಡೆ ಇದ್ದರು.