ಯಲಗೊಂಡ ಮಾ ಬೇವನೂರ
ಇಂಡಿ22 : ಭಾರತ ದೇಶದಲ್ಲಿ ಪ್ರತಿಶತ 75 ರಷ್ಟು ಜನ ಹಳ್ಳಿಗಳಲ್ಲಿ ವಾಸವಾಗಿದ್ದಾರೆ. ಆ ಹಳ್ಳಿಗಳು ಅಭಿವೃಧ್ದಿ ಹೊಂದಿದಾಗ ಮಾತ್ರ ಮಹಾತ್ಮಾ ಗಾಂಧೀಜಿಯವರು ಕಂಡ ಕನಸು ನನಸು ಮಾಡಲು ಸಾಧ್ಯ ಎಂದು ತಿಳಿದ ರಾಜ್ಯ ಹಾಗೂ ಕೇಂದ್ರ ಸಕರ್ಾರಗಳು ಗ್ರಾಮ ಪಂಚಾಯತ್ಗಳಿಗೆ ನೀರು ಹರಿಸಿದಂತೆ ಕೋಟ್ಯಂತರ ರೂಪಾಯಿ ಹಣ ನೀಡುತ್ತಿವೆ.
ಗ್ರಾಮಗಳ ಅಭಿವೃದ್ದಿಗೆ ಸ್ಥಳೀಯ ಸಕರ್ಾರವನ್ನಾಗಿ (ಗ್ರಾಮ ಪಂಚಾಯತ್) ರಚನೆ ಮಾಡಿ ಅದಕ್ಕೆ ಓರ್ವ ಅಭಿವೃಧ್ದಿ ಅಧಿಕಾರ ನೇಮಕ ಮಾಡಲಾಗುತ್ತದೆ. ಆದರೆ ಗ್ರಾಮ ಪಂಚಾಯತ್ ವತಿಯಿಂದ ಸಾಮಾನ್ಯ ಜನರಿಗೆ, ಬಡವರಿಗೆ ನೀಡಬೇಕಾದ ಸೌಲತ್ತುಗಳನ್ನು ನೀಡದೆ ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಅಭಿವೃಧ್ಧಿ ಅಧಿಕಾರಿಗಳು ಕೂಡಿ ಆ ಎಲ್ಲ ಹಣವನ್ನು ಕಾಮಗಾರಿ ಮಾಡದೆ ಫಲಾನುಭವಿಗಳಿಗೂ ನೀಡದೆ ತಮ್ಮ ಜೇಬಿಗಿರಿಸಿಕೊಳ್ಳುತ್ತಿರುವುದು ಈ ದೇಶದ ಗ್ರಾಮೀಣ ಭಾಗದ ಜನರ ದುರಾದೃಷ್ಠ ಸಂಗತಿ.
ಇದಕ್ಕೆ ಪೂರಕವೆಂಬಂತೆ ತಾಲೂಕಿನ ಚವಡಿಹಾಳ ಗ್ರಾಮಪಂಚಾಯತ್ನಲ್ಲಿ ಸಾಕಷ್ಟು ಅವ್ಯವಹಾರಗಳಾಗಿವೆ. ವೈಯಕ್ತಿಕ ಶೌಚಾಲಯಗಳನ್ನು ಕಟ್ಟದೆ ಬಿಲ್ ತೆಗೆಯಲಾಗಿದೆ, ಕೃಷಿ ಹೊಂಡ ತೋಡದೆ ಬೇರೆಯವರ ಕೃಷಿ ಹೊಂಡದ ಚಿತ್ರ ತೆಗೆದು ಬಿಲ್ ತೆಗೆಯಲಾಗಿದೆ ಎಂಬಿತ್ಯಾದಿ ಆರೋಪಗಳು ಗ್ರಾಮಸ್ಥರಿಂದಲೇ ಕೇಳಿ ಬಂದಿವೆ.
ಕಾಮಗಾರಿಗಳ ಕುರಿತು ಮಾಹಿತಿ ಹಕ್ಕಿನಲ್ಲಿ ಮಾಹಿತಿ ಕೇಳಿದರೂ ಸಹ ಅಭಿವೃದ್ದಿಅಧಿಕಾರಿ ಮಾಹಿತಿ ನೀಡದೆ ಸತಾಯಿಸುತ್ತಿದ್ದಾನೆ. ಅಭಿವೃದ್ದಿ ಅಧಿಕಾರಿ ಮಾಹಿತಿ ನೀಡಿಲ್ಲವೆಂದು ತಾಲೂಕಾ ಪಂಚಾಯತ್ ಕಾರ್ಯನಿವರ್ಾಹಕ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಕಾರ್ಯನಿವರ್ಾಹಕ ಅಧಿಕಾರಿಗಳಿಗೆ ಮಾಹಿತಿ ಹಕ್ಕಿನಲ್ಲಿ ಮಾಹಿತಿ ಕೇಳಲಾಗಿ ಮರಳಿ ಆಯಾ ಕಚೇರಿಯಿಂದ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಿಗೆ ಮಾಹಿತಿಯನ್ನು ಐದು ದಿನದಲ್ಲಿ ನೀಡುವಂತೆ ಆದೇಶಿಸಿದರೂ ಅಭಿವೃಧ್ದಿ ಅಧಿಕಾರಿ ಮಾತ್ರ ಯಾವುದಕ್ಕೂ ಪ್ರತಿಕ್ರಿಯೆ ನೀಡದೆ ಇತ್ತ ಮಾಹಿತಿಯೂ ಕೊಡದೆ ಉಧ್ಧಟತನ ತೋರುತ್ತಿದ್ದಾರೆ ಎಂದು ಚವಡಿಹಾಳ ಗ್ರಾಮದ ಶ್ರೀಶೈಲ ದುಂಡಪ್ಪ ಬಿರಾದಾರ, ಶ್ರೀಮತಿ ವಜೀರಸಾ ನದಾಫ ಆರೋಪಿಸಿದ್ದಾರೆ.