ಸಿಬಿಎಸ್ಇ ಕ್ಲಸ್ಟರ್ ಮಟ್ಟದ ಖೋ-ಖೋ ಪಂದ್ಯಾವಳಿ ಚಾಲನೆ

ಲೋಕದರ್ಶನವರದಿ

ಮುಧೋಳ: ನಗರದ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾದ ಕೆ.ಆರ್.ಲಕ್ಕಂ ವಿದ್ಯಾಲಯ ಸಿ.ಬಿ.ಎಸ್.ಇ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಖೋ-ಖೋ ಪಂದ್ಯಾಟಕ್ಕೆ ಭರ್ಜರಿ ಚಾಲನೆ ದೊರೆಯಿತು. ಅ.13ರಂದು  ಕೆ.ಆರ್.ಲಕ್ಕಂ ವಿದ್ಯಾಲಯ ಸಿ.ಬಿ.ಎಸ್.ಇ ಶಾಲೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ದುಂಡಪ್ಪಾ ರಾ ಲಕ್ಕಂ ಅಧ್ಯಕ್ಷರು ಕಲ್ಮೇಶ್ವರ ಚಾರಿಟೇಬಲ್ ಟ್ರಸ್ಟ್ ಮುಧೋಳ ಇವರು ವಹಿಸಿದ್ದರು. 

  ಕ್ರೀಡಾಕೂಟದ ಉದ್ಘಾಟನೆಯನ್ನು.ಆರ್ ಎಸ್.ಪಾಟೀಲ ಮಾಜಿ ಸಂಸತ್ ಸದಸ್ಯರು ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಶಶಿಕಾಂತಗೌಡಾ  ಪಾಟೀಲರವರು  ಆಗಮಿಸಿದ್ದರು.

     ನಮ್ಮ ಸಂಸ್ಥೆಯ ಕಾರ್ಯದಶರ್ಿಗಳಾದ ಡಾ|| ಮೋಹನ ಬಿರಾದಾರ ರವರು ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಆರ್ ಎಸ್.ಪಾಟೀಲ ರವರು ಕ್ರೀಡಾ ಜ್ಯೋತಿ ಬೆಳಗಿಸುವುದರ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು ಪ್ರಾಚಾರ್ಯರಾದ ಗಂಗಾಧರ ಪೈ ರವರುಕ್ರೀಡಾಕೂಟದ ಮಾಹಿತಿಯನ್ನು ನೀಡಿದರು. 

      ಅತಿಥಿಗಳಾಗಿ ಡಾ|| ಮೋಹನ ಬಿರಾದಾರ, ಅಪ್ಪಾಸಾಬ ರಾ ಲಕ್ಕಂ, ದಿವಂಗತ ಕೆ.ಆರ್.ಲಕ್ಕಂ ಅವರ ಧರ್ಮಪತ್ನಿ ಸುನಂದಮ್ಮಾ .ಕೆ. ಲಕ್ಕಂ , ರಮೇಶ .ಡಿ. ಲಕ್ಕಂ ,ಶ್ರೀ ಆನಂದ .ಎ. ಲಕ್ಕಂ,  ಗಂಗಾಧರ ಪೈ ಸಿ.ಬಿ.ಎಸ್.ಇ ವಿಭಾಗದ ಪ್ರಾಚಾರ್ಯರು, ಮಾರುತಿ ಪವಾರ ಉಪಪ್ರಾಚಾರ್ಯರು ಸಿ.ಬಿ.ಎಸ್.ಇ ವಿಭಾಗ ಹಾಗೂ ಅರುಣ ಬಿರಾದಾರ ಕನ್ನಡ ಮಾಧ್ಯಮದ ಪ್ರೌಢ ವಿಭಾಗದ ಮುಖ್ಯಗುರುಗಳು, ಅನಿಲ ಮಾಗಿ ಮುಖ್ಯಗುರುಗಳು ಪ್ರಾಥಮಿಕ ವಿಭಾಗ ಇವರುಗಳು ಉಪಸ್ಥಿತರಿದ್ದರು. 

      ಹಾಗೂ ಕೆ.ಎಲ್.ಇ.ನಿಪ್ಪಾಣಿ ಮತ್ತು ಸೇಂಟ್ ಪೀಟರ್ಸ್ ಹಾರುಗೇರಿ ತಂಡಗಳ ಪ್ರಥಮ ಪಂದ್ಯಕ್ಕೆ ಶುಭ ಹಾರೈಸಿದರು. 

     ಈ ಕ್ರೀಡಾಕೂಟಕ್ಕೆ ಸುಮಾರು 70 ಕ್ಕೂ ಹೆಚ್ಚು ಶಾಲೆಗಳಿಂದ 1000 ಕ್ಕೂ ಹೆಚ್ಚು ವಿದ್ಯಾಥರ್ಿಗಳು ಭಾಗವಹಿಸಿದರು. ಕೆ.ಆರ್.ಲಕ್ಕಂ ಶಾಲೆಯ ಸಿಬ್ಬಂದಿ ವರ್ಗದವರು ಹಾಗೂ ರಾಜ್ಯದ ವಿವಿಧ ಸಿ.ಬಿ.ಎಸ್.ಇ.ಶಾಲೆಗಳ ವಿದ್ಯಾಥರ್ಿ ಮತ್ತು ವಿದ್ಯಾಥರ್ಿನಿಯರು ಈ ಸಮಾರಂಭದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು