ರಾಷ್ಟ್ರೀಯ ಪೋಷಣ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ

ಲೋಕದರ್ಶನ ವರದಿ

ಚಿಕ್ಕೋಡಿ 14: ರಾಜ್ಯದ ಅಂಗನವಾಡಿಯಲ್ಲಿ ದಾಖಲಾಗುವ ಪ್ರತಿ ಮಗುವಿನ ಮಾಹಿತಿ ಪಡೆದುಕೊಳ್ಳಲು ಬರುವ ಮಾರ್ಚ 1 ರಿಂದ ಪ್ರತಿ ಅಂಗನವಾಡಿ ಕೇಂದ್ರಗಳಿಗೆ ಸ್ಮಾರ್ಟಪೋನ್ ನೀಡಲು ರಾಜ್ಯ ಸಕರ್ಾರ ನಿರ್ಧರಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಇಲ್ಲಿನ ಕೇಶವ ಕಲಾ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಚಿಕ್ಕೋಡಿ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಪೋಷಣ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪೋಷಣ ಅಭಿಯಾನವು ಪ್ರಧಾನಿ ನರೇಂದ್ರ ಮೋದಿ ಕನಸಿನ ಕೂಸು. ಹೀಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಸದೃಡಗೊಳಿಸುವ ಮೂಲಕ ಅಂಗನವಾಡಿಯಲ್ಲಿ ದಾಖಲಾಗುವ ಮಕ್ಕಳ ಪ್ರಗತಿಗೆ ಕೇಂದ್ರ ಮತ್ತು ರಾಜ್ಯ ಸಕರ್ಾರ ಹತ್ತು ಹಲವು ಜನಪ್ರಿಯ ಯೋಜನೆಗಳನ್ನು ರೂಪಿಸಿದೆ ಎಂದರು.

ರಾಜ್ಯದ 30 ಜಿಲ್ಲೆಯಲ್ಲಿ ಏಕಕಾಲದಲ್ಲಿ ಪೋಷಣ ಅಭಿಯಾನ ಅನುಷ್ಠಾನಗೊಳಿಸಲಾಗುತ್ತದೆ. ಮೊದಲು 19 ಜಿಲ್ಲೆಯಲ್ಲಿದ್ದ ಈ ಪೋಷಣ ಅಭಿಯಾನವು ನಾನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾದ ಮೇಲೆ ಇಲಾಖೆಗೆ ಹೊಸ ಸ್ಪರ್ಷ ನೀಡಿ 30 ಜಿಲ್ಲೆಯಲ್ಲಿ ಪೋಷಣ ಅಭಿಯಾನ ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಂದು ಜಿಲ್ಲೆಯಲ್ಲಿಯಲ್ಲಿ ಪ್ರವಾಸ ಕೈಗೊಂಡು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರ ಯೋಜನೆಗಳನ್ನು ಎಲ್ಲರಿಗೂ ತಲುಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ ಎಂದರು.

ಗಭರ್ೀಣಿ ಮಹಿಳೆಯ ಸೀಮಂತ ಕಾರ್ಯ ಮತ್ತು ಮಗುವಿನ ನಾಮಕರಣ ಹಾಗೂ ಜನ್ಮದಿನವನ್ನು ಹಬ್ಬವಾಗಿ ಆಚರಿಸುವ ಕಾಲ ಮುಗಿದು ಹೋಗಿದೆ. ಈಗ ಕಾಲ ಬದಲಾಗುತ್ತಿದ್ದಂತೆಯೇ ಜನ ಬದಲಾಗುತ್ತಿದ್ದಾರೆ. ಹೀಗಾಗಿ ಇಂದಿನ ಯುವ ಜನರಿಗೆ ಸೀಮಂತ ಕಾರ್ಯ ಏನೆಂಬುದು ಗೊತ್ತಿಲ್ಲ, ಅದನ್ನು ತಿಳಿಸುವ ಕೆಲಸವನ್ನು ಹಿರಿಯರು ಮಾಡಬೇಕಾಗಿದೆ. ಗಭರ್ಿಣಿಯಾದ ಮಹಿಳೆಯರು ಪೌಷ್ಠಿಕಯುಕ್ತ ಆಹಾರ ಸೇವನೆ ಮಾಡುವ ಮೂಲಕ ಆರೋಗ್ಯವಂತ ಮಗು ಜನ್ಮತಾಳಿದರೇ ಆರೋಗ್ಯವಂತ ಸಮಾಜ ನಿಮರ್ಾಣವಾಗುತ್ತದೆ. ಅಂಗನವಾಡಿ ಕಾರ್ಯಕರ್ತರು ಪ್ರತಿ ಗಭರ್ೀಣಿ ಮಹಿಳೆಯರ ಮನೆಗೆ ಹೋಗಿ ಆರೋಗ್ಯ ಬಗ್ಗೆ ತಿಳಿಹೇಳುವ ಮೂಲಕ ಸಕರ್ಾರದ ಪೋಷಣ ಅಭಿಯಾನ ಅಚ್ಚುಕಟ್ಟಾಗಿ ಅನುಷ್ಠಾನಗೊಳಿಸಿ ಇಡೀ ರಾಜ್ಯದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾದರಿ ಇಲಾಖೆಯಾಗಲು ಎಲ್ಲರು ಪ್ರಯತ್ನಿಸಬೇಕು ಎಂದರು.

ತಾಯಂದಿರು ಮಕ್ಕಳಿಗೆ ಪೀಜಾ ಬರ್ಗರ ನೀಡಬೇಡಿ.ಪೌಷ್ಟಿಕಯುಕ್ತ ಆಹಾರ ನೀಡಿ ಸದೃಡ ದೇಶ ನಿಮರ್ಾಣವಾಗಬೇಕು. ಮಹಿಳೆಯರು ಸ್ವಾಭಿಮಾನಿ ಬದುಕು ಸಾಗಿಸಲು ಸರಕಾರ ನೀಡುವ ಸಹಾಯಧನದ ಮೂಲಕ ಉದ್ಯೋಗ ಮಾಡಬೇಕು. ಮತ್ತೋಬ್ವರಿಗೆ ಉದ್ಯೋಗ ನೀಡುವ ಹಾಗೇ ಬೆಳೆಯಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಗಣೇಶ ಹುಕ್ಕೇರಿ ಮಾತನಾಡಿ ಎಸ್.ಎಂ.ಕೃಷ್ಣಾ ಮತ್ತು ಮಾಜಿ ಪ್ರಧಾನಿ ಮನಹೋನಸಿಂಗ ಪ್ರಧಾನಿ ಇದ್ದಾಗ ಸ್ರ್ತೀಶಕ್ತಿ ಸಂಘಗಳನ್ನು ಸ್ಥಾಪಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಗತಿಗೆ ಶ್ರಮೀಸಿದ್ದರು. ಇಂದು ಸಚಿವೆ ಶಶಿಕಲಾ ಜೊಲ್ಲೆಯವರು ಇಡೀ ರಾಜ್ಯದಲ್ಲಿ ಪ್ರವಾಸ ಮಾಡಿ ಇಲಾಖೆ ಸದೃಡವಾಗಲು ಪ್ರಯತ್ನ ನಡೆಸಿದ್ದಾರೆ. ಮಕ್ಕಳು ಮಾನಸಿಕವಾಗಿ ಸಿದ್ದಗೊಳ್ಳುವ ನಿಟ್ಟಿನಲ್ಲಿ ಸಕರ್ಾರದ ಯೋಜನೆ ಅನುಷ್ಠಾನಗೊಳಿಸಬೇಕು ಎಂದರು. ವಿಧಾನ ಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿದರು. ವೇದಿಕೆ ಮೇಲೆ ಸಂಸದ ಅಣ್ಣಾಸಾಹೇಬ ಜೊಲ್ಲೆ, ಪುರಸಭೆ ಸದಸ್ಯರಾದ ಗುಲಾಬ ಬಾಗವಾನ, ಅನಿಲ ಮಾನೆ, ನಾಗರಾಜ ಮೇಧಾರ, ನರೇಂದ್ರ ನೇಲರ್ೆಕರ, ಬಾಬು ಮಿಜರ್ೆ, ಸೋಮು ಗವನಾಳೆ ಮುಂತಾದವರು ಇದ್ದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿದರ್ೇಶಕ ಬಸವರಾಜ ವರವಟ್ಟಿ ಸ್ವಾಗತಿಸಿದರು. ಸಿಡಿಪಿಒ ದೀಪಾ ಕಾಳೆ ವಂದಿಸಿದರು.