ರನ್ ಮೆಷಿನ್ ಕೊಹ್ಲಿ ವಿಕೆಟ್ ಉರುಳಿಸಲು ರಣತಂತ್ರ ಸಿದ್ಧವಾಗಿದೆ: ಸ್ಟುವಟರ್್ ಬ್ರಾಡ್


ಲಂಡನ್ 31: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಭಾರತವನ್ನು ಮಣಿಸಲು ರಣತಂತ್ರ ಸಿದ್ಧವಾಗಿದೆ ಎಂದು ಇಂಗ್ಲೆಂಡ್ ತಂಡದ ವೇಗಿ ಸ್ಚುವಟರ್್ ಬ್ರಾಡ್ ಹೇಳಿದ್ದಾರೆ. 

ಖಾಸಗಿ ಆಂಗ್ಲ ಕ್ರೀಡಾ ವಾಹಿನಿಯೊಂದಿಗೆ ಮಾತನಾಡಿದ ಸ್ಟುವಟರ್್ ಬ್ರಾಡ್, ಖಂಡಿತಾ ತವರು ನೆಲದ ನೆರವನ್ನು ಇಂಗ್ಲೆಂಡ್ ತಂಡ ಪಡೆಯಲಿದ್ದು ಭಾರತವನ್ನು ಮಣಿಸಲು ಯೋಜನೆ ಸಿದ್ಧವಾಗಿದೆ ಎಂದು ಹೇಳಿದರು. 

ಪ್ರಮುಖವಾಗಿ ವಿರಾಟ್ ಕೊಹ್ಲಿ ಕುರಿತು ಮಾತನಾಡಿದ ಬ್ರಾಡ್, ಭಾರತ ತಂಡ ವಿಶ್ವಶ್ರೇಷ್ಟ ಬ್ಯಾಟ್ಸಮನ್ ಗಳನ್ನು ಹೊಂದಿದೆ. ಪ್ರಮುಖವಾಗಿ ವಿರಾಟ್ ಕೊಹ್ಲಿ ಅತ್ಯುತ್ತಮ ಫಾಮರ್್ ನಲ್ಲಿದ್ದು ಅವರ ಯೋಜನೆಗಳನ್ನು ವಿಫಲಗೊಳಿಸಲು ನಾವೂ ಸಜ್ಜಾಗಿದ್ದೇವೆ. ಅಂತೆಯೇ ಕೊಹ್ಲಿ ಮಾತ್ರವಲ್ಲ, ಭಾರತದ ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ನಮ್ಮ ಗುರಿ. ಕೊಹ್ಲಿ ಅತ್ಯುತ್ತಮ ಬ್ಯಾಟ್ಸಮನ್ ಆಗಿದ್ದು, ಓರ್ವ ನಿದರ್ಿಷ್ಠ ಬೌಲರ್ ನಿಂದ ಅವರನ್ನು ಕಟ್ಟಿಹಾಕಲು ಸಾಧ್ಯವಿಲ್ಲ. ಸಾಂಘಿಕ ಹೋರಾಟದಿಂದ ಮಾತ್ರ ಅವರನ್ನು ನಿಯಂತ್ರಿಸಬಹುದು ಎಂದು ಹೇಳಿದ್ದಾರೆ. 

ಅಂತೆಯೇ ಭಾರತ ತಂಡದ ಆರಂಭಿಕರನ್ನು ನಿಯಂತ್ರಿಸಿದರೆ ನಮ್ಮ ಕೆಲಸ ಅರ್ಧ ಮುಗಿದಂತೆ. ಒಂದು ವೇಳೆ ಅವರು ಹೆಚ್ಚು ರನ್  ಕಲೆಹಾಕಲು ಬಿಟ್ಟರೆ ಖಂಡಿತಾ ನಮ್ಮ ತಂಡದ ಮೇಲೆ ಒತ್ತಡ ಹೆಚ್ಚಾಗುತ್ತದೆ. ಯಾವುದೇ ಕಾರಣಕ್ಕೂ ನಾವು ಒತ್ತಡವನ್ನು ನಮ್ಮ ಮೇಲೆ ಹೇರಿಕೊಳ್ಳಬಾರಜು. ಆದಷ್ಟು ಬೇಗ ಕೊಹ್ಲಿ ವಿಕೆಟ್ ಪಡೆಯಬೇಕು. ಮೊದಲ ಟೆಸ್ಟ್ ಪಂದ್ಯಕ್ಕೆ ನಾನು ಸಂಪೂರ್ಣ ಸಿದ್ಧನಿದ್ದು, ಶೇ.100ರಷ್ಟು ಫಿಟ್ ಆಗಿದ್ದೇನೆ ಎಂದು ಬ್ರಾಡ್ ಹೇಳಿದ್ದಾರೆ.