ಲೋಕದರ್ಶನ ವರದಿ
ಯಮಕನಮರಡಿ, 17: ಹುಕ್ಕೇರಿ ತಾಲೂಕಿನ ಶಹಾಬಂದರದ ಭಕ್ತಿ ಮಠದಲ್ಲಿ ಎರಡನೇಯ ರುದ್ರಾಕ್ಷಿ ಮಹಿಮೆ ಕಿರು ಹೋತ್ತಿಗೆ ಬಿಡುಗಡೆ, ಸಮಾರಂಬವು ಅನೆಕ ಶ್ರೀಗಳ ಉಪಸ್ಥಿತಿಯಲ್ಲಿ ನಡೆಯಿತು,ಮುಖ್ಯ ಅತಿಥಿಗಳಾಗಿ ದತ್ತವಾಡದ ಬಾಲಚಂದ್ರ ಬಾಬಾ ಮಹಾರಾಜರು ಆಗಮಿಸಿ ಮಾತನಾಡುತ್ತ ಧರ್ಮಗಳಲ್ಲಿ ಶ್ರೇಷ್ಠಧರ್ಮವಾದ ಲಿಂಗಾಯತ ಧರ್ಮಕ್ಕೆ ರುದ್ರಾಕ್ಷಿಯು ಮುಖ್ಯ ಲಾಂಛನವಾಗಿ ನಮಗೆಲ್ಲ ದೊರಕಿದೆ ಪರಶಿವನಿಂದ ನಿಮರ್ಿತವಾದ ರುದ್ರಾಕ್ಷಿಗಳಲ್ಲಿ ಅನೇಕ ರುದ್ರಾಕ್ಷಿಗಳು ನಿಮರ್ಾಣವಾಗಿ ಭೂಲೋಕವಲ್ಲದೆ ದೇವಲೋಕದಲ್ಲಿರು ಸಹ ಎಲ್ಲ ದೇವತೆಗಳು ಧಾರಣ ಮಾಡಿಕೋಂಡು ತಮ್ಮ ಪವಿತ್ರ ಧರ್ಮವನ್ನು ಕಾಪಾಡಿಕೋಂಡು ಬಂದಿರುವುದು ಅನೆಕ ಮಠಾಧೀಶರುಗಳು ರುದ್ರಾಕ್ಷಿ ಧರಿಸಿಕೊಂಡು ಲಿಂಗಾಯತ ಧರ್ಮದ ಸ್ಥಾಪಕರಾಗಿದ್ದಾರೆ ಅಂತೆಯೇ ಲಿಂಗಾಯತ ಧರ್ಮದ ನಾವು-ನಿವುಗಳು ಧರ್ಮಗುರುಗಳ ಮೂಲಕ ರುದ್ರಾಕ್ಷಿಯನ್ನು ಧಾರಣ ಮಾಡಿಕೊಳ್ಳಬೇಕೆಂದರು,
ಕಾಯ್ಕ್ರಮದ ಸಾನಿಧ್ಯವನ್ನು ಚಿಕ್ಕಲದಿನ್ನಿ ಶಿವಲಿಂಗೇಸ್ವರ ಮಠದ ಶ್ರೀಗಳಾದ ಅದೃಶ್ಯಾಣಮಧ ಸ್ವಾಮಿಗಳು ವಹಿಸಿ ಕಿರುಹೋತ್ತಿಗೆ ಬಿಡುಗಡೆಗೊಳಿಸಿದರು, ಇದೇ ಸಂದಭ್ದಲ್ಲಿ ಭಕ್ತಿಮಠದ ಶ್ರೀಗಳಿಗೆ ರುದ್ರಾಕ್ಷಿ ಕಿರಿಟ ಧಾರಣೆ ಮಾಡಲಾಯಿತು, ಕಾರ್ಯಕ್ರಮದಲ್ಲಿ ಕರವೇಯ ಉಪಾಧ್ಯಕ್ಷರಾದ ರಾಜು ನಾಶಿಪುಡಿ, ಶಿಕ್ಷಕರಾದ ಪಂಗನ್ನವರ,ಅನೇಕರು ಉಪಸ್ಥಿತರಿದ್ದು ಕೀರುಹೋತ್ತಿಗೆ ಪಡೆದುಕೋಂಡರು ಕಿರುಹೊತ್ತಿಗೆಯ ರೂವಾರಿಗಳಾದ ಹುಣಸಿಕೊಳ್ಳಮಠದ ಸೇವಾ ಸಮೀತಿಯ ಸದಸ್ಯರಾದ ಗೋಪಾಲ ಚಿಪಣಿ, ಶಿವಪ್ಪಣ್ಣಾ ತುಬಚಿ, ಸೋಮಶೇಖರ ಹೋರಕೇರಿ, ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು