ಮುನವಳ್ಳಿ 19: ಮುನವಳ್ಳಿ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿ ಡಿ. 18 ರಂದು ಸಾಯಂಕಾಲ 4 ಗಂಟೆಗೆ ಪಟ್ಟಣದ ಪಂಚಲಿಂಗೇಶ್ವರ ಕ್ರಾಸ್ನ ರಾಜ್ಯ ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಸೋಮಶೇಖರ ಮಠದ ಮುರುಘೇಂದ್ರ ಮಹಾಸ್ವಾಮಿಗಳು ಮಾತನಾಡುತ್ತ ಮುನವಳ್ಳಿ ತಾಲೂಕಾಗಲೂ ಎಲ್ಲಾ ಅರ್ಹತೆ ಹೊಂದಿದ್ದು, ಈ ಹಿಂದೆ ರಚಿಸಲಾದ ಏಕ ಸದಸ್ಯ ಆಯೋಗದ ಐ.ಎ.ಎಸ್. ಅಧಿಕಾರಿ ಎಂ.ವಾಸುದೇವ, ಮಹಾಜನ ವರದಿ ಆಯೋಗ, ಹುಂಡೇಕಾರ ಸಮಿತಿ, ಗದ್ದಿಗೌಡರ ಸಮಿತಿಗಳು ಹಾಗೂ ಇತ್ತೀಚೆಗೆ ರಚಿಸಲಾದ ಚಿರಂಜೀವಿ ಸಿಂಗ್ ಸಮಿತಿಯೂ ಕೂಡ ಮುನವಳ್ಳಿ ಪಟ್ಟಣವು ತಾಲೂಕಾಗಲು ಅರ್ಹತೆ ಹೊಂದಿದೆ ಎಂದು ವರದಿ ಸಲ್ಲಿಸಿದೆ.
ಮುನವಳ್ಳಿ ಪಟ್ಟಣವು ಸುಮಾರು 45 ಸಾವಿರಕ್ಕಿಂತಲೂ ಅಧಿಕ ಜನಸಂಖ್ಯೆ ಹೊಂದಿದ್ದು, ಭೌಗೋಳಿಕವಾಗಿ ಸು. 20 ಚಕಿಮೀ ವಿಸ್ತೀರ್ಣ ಹೊಂದಿದೆ. ಸುಮಾರು 75 ಹಳ್ಳಿಗಳನ್ನೂ ಕೂಡ ಒಳಗೊಂಡಿದೆ. ಸರಕಾರಕ್ಕೆ ಸಂದಾಯವಾಗುವ ಕಂದಾಯ, ಆದಾಯ, ಜನಸಾಂದ್ರತೆ, ಕೈಗಾರಿಕಾ ಅಭಿವೃದ್ಧಿ, ನೀರಾವರಿ ಸೌಲಭ್ಯ, ಶೈಕ್ಷಣಿಕ ಕ್ರಾಂತಿ,ವಾಣಿಜ್ಯ ವ್ಯಾಪಾರ, ಆಡಳಿತಾತ್ಮಕವಾಗಿ ತಾಲೂಕು ಕೇಂದ್ರವಾಗಲು ಅರ್ಹತೆ ಹೊಂದಿದೆ. ಆಡಳಿತ ವಿಕೇಂದ್ರಿಕರಣ ದೃಷ್ಟಿಯಿಂದಲೂ ಮುನವಳ್ಳಿ ತಾಲೂಕು ಆಗಬೇಕೆಂದರು.
ಚಂದ್ರಯ್ಯ ಸ್ವಾಮಿಗಳು ವಿರಕ್ತಮಠ, ರಾಮನಗೌಡ ಗೀದಿಗೌಡ್ರ, ಶಿವಾನಂದ ಮೇಟಿ, ಕಲ್ಲಪ್ಪ ನಲವಡೆ, ಶಿವಪುತ್ರಪ್ಪ ಕೆಳಗಡೆ, ಡಾ. ಬಸೀರಅಹ್ಮದ ಬೈರಕದಾರ, ಆನಂದ ಬಕ್ರಿ, ಸುಭಾಸಗೌಡ ಗೀದಿಗೌಡ್ರ, ಸಂಗಪ್ಪ ಹೂಲಿ, ಮಂಜುನಾಥ ಬಸಲಿಗುಂದಿ, ಪ್ರವೀಣ ಹೂಲಿ, ಬಕಾಡೆ, ಪುರಸಭೆ ಸದಸ್ಯರು ಸೇರಿದಂತೆ ನಾಗರಿಕರು, ಸುತ್ತಲಿನ ಗ್ರಾಮಗಳ ಹಿರಿಯರು ಇದ್ದರು. ಉಪತಹಶೀಲ್ದಾರ ಪವಾರ ಅವರಿಗೆ ಮನವಿ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಮುನವಳ್ಳಿ ಹೊರ ಪೊಲೀಸ ಠಾಣೆಯನ್ನು ಮೇಲ್ದಜರ್ೆಗೇರಿಸಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.