ಮಾಂಜರಿ 20: ಯಕ್ಸಂಬಾ ದಿಂದ ಚಿಕ್ಕೋಡಿ ಮತ್ತು ಚಿಕ್ಕೋಡಿಯಿಂದ ಯಕ್ಸಂಬಾ ಪಟ್ಟಣಕ್ಕೆ ತೆರಳುವ ಪ್ರತಿಯೊಂದು ಬಸ್ ನಿಲುಗಡೆ ಮಾಡುವಂತೆ ಒತ್ತಾಯಿಸಿ ಗುರುವಾರ ಸಮೀಪದ ನಣದಿವಾಡಿ ಗ್ರಾಮದ ವಿದ್ಯಾಥರ್ಿಗಳು ಮತ್ತು ಪಾಲಕರು ರಸ್ತೆ ತಡೆ ನಡೆಸಿ ಅಕ್ರೋಶ ವ್ಯಕ್ತಪಡಿಸಿದರು.
ನಣದಿವಾಡಿ ವಿದ್ಯಾಥರ್ಿಗಳು ಯಕ್ಸಂಬಾ ಮತ್ತು ಚಿಕ್ಕೋಡಿ ಪಟ್ಟಣಕ್ಕೆ ವಿದ್ಯಾಭ್ಯಾಸಕ್ಕಾಗಿ ತೆರಳುತ್ತಾರೆ. ಆದರೆ ನಣದಿವಾಡಿ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಸ್ಗಳು ನಿಲುಗಡೆಯಾಗುವುದಿಲ್ಲ. ಇದರಿಂದಾಗಿ ವಿದ್ಯಾಥರ್ಿಗಳು ಶಾಲೆಗೆ ಸರಿಯಾದ ವೇಳೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಇದರಿಂದ ವಿದ್ಯಾಭ್ಯಾಸ ಕುಂಠಿತವಾಗುತ್ತಿದೆ ಎಂದು ಪಾಲಕರು ತಿಳಿಸಿದ್ದಾರೆ.
ಯಕ್ಸಂಬಾ ಪಟ್ಟಣದಿಂದ ಮತ್ತು ಚಿಕ್ಕೋಡಿ ಪಟ್ಟಣದಿಂದ ಬಹುತೇಕ ಎಲ್ಲ ಬಸ್ಗಳು ತುಂಬಿಯೇ ಬರುತ್ತಿವೆ. ಇದರಿಂದ ನಣದಿವಾಡಿ ಗ್ರಾಮದಲ್ಲಿ ಬಸ್ ನಿಲ್ಲುವುದಿಲ್ಲಾ, ವಿದ್ಯಾಥರ್ಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ಬಿಡಬೇಕು ಎಂದು ಕೆ.ಎಸ್.ಅರ್.ಟಿ ಸಿ ಚಿಕ್ಕೋಡಿ ಘಟಕದ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿ ಒತ್ತಾಯಿಸಿದರು.