ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣಗಳಿಗೆ ಕಾಯಕಲ್ಪ ವಾಣಿಜ್ಯ, ಸಂಪರ್ಕ ಕೇಂದ್ರಗಳಾಗಿ ಆದಾಯ ವೃದ್ಧಿಗೆ ಪ್ರಯತ್ನ: ತಮ್ಮಣ್ಣ


ಗದಗ 30:  ಕನರ್ಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಾರಿಗೇತರ ಆದಾಯವು ವೃದ್ಧಿಸುವ ನಿಟ್ಟಿನಲ್ಲಿ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿನ ಹಾಗೂ ಪ್ರಮುಖ ನಗರಗಳಲ್ಲಿನ ಬಸ್ ನಿಲ್ದಾಣಗಳನ್ನು ವಾಣಿಜ್ಯ ಹಾಗೂ ಸಾರ್ವಜನಿಕ ಸಂಪರ್ಕ ಕೇಂದ್ರಗಳನ್ನಾಗಿ ವೃದ್ಧಿಸುವ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ನುಡಿದರು.

      ಮುಳಗುಂದದಲ್ಲಿಂದು 35 ಗುಂಟೆ ಜಾಗೆಯಲ್ಲಿ 1.25 ಕೋಟಿ ರೂ. ವೆಚ್ಚದಲ್ಲಿ ನಿಮರ್ಿಸಲಾದ ನೂತನ ಬಸ್ ನಿಲ್ದಾಣ ಕಟ್ಟಡವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.   ರಾಜ್ಯ ರಸ್ತೆ ಸಾರಿಗೆ ಸಂಸ್ಥೆ 1.20 ಲಕ್ಷ ಜನರಿಗೆ ಉದ್ಯೋಗ ನೀಡಿರುವ ಬೃಹತ್ ಸಂಸ್ಥೆಯಾಗಿದೆ.  ಇದು ಆಥರ್ಿಕವಾಗಿ, ಸದೃಢಗೊಂಡು ಇಡೀ ರಾಜ್ಯದಲ್ಲಿ  ಸಾರಿಗೆ ಶಕ್ತಿಯಾಗಿ ರೂಪುಗೊಳ್ಳಲು ಹಾಗೂ ನಗರ ಮತ್ತು ಹಳ್ಳಿಗಳ ಸಮರ್ಪಕ  ಸಂಪರ್ಕ  ವ್ಯವಸ್ಥೆಯಾಗುವಂತೆ ಪ್ರಯತ್ನಿಸಲಾಗುತ್ತಿದೆ.  ಬೇರೆ ರಾಜ್ಯಗಳಿಂದ ರಾಜ್ಯಕ್ಕೆ ಸರಕು ತರದ ಖಾಲಿ ಹೋಗುವ ಲಾರಿಗಳ ಮಾಲೀಕರು ಹಾಗೂ ಸಂಸ್ಥೆಗಳ ಜೊತೆ ರಾಜ್ಯ ಸಾರಿಗೆ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ರೈತರ ಬೆಳೆ ಸಾಗಣಿಗೆ ನ್ಯಾಯಯುತ ವೆಚ್ಚವಾಗುವಂತೆ ಮಾರುಕಟ್ಟೆ ವ್ಯಾಪ್ತಿ ವಿಸ್ತರಿಸಿ ಅವರ ಬೆಳೆಗಳಿಗೆ ಹೆಚ್ಚಿನ ಬೆಲೆೆ ಸಿಗುವಂತೆ ಮಾಡುವ ಯೋಜನೆ ರೂಪಿಸಲಾಗುತ್ತಿದೆ.  ಇದರಿಂದ ರಾಜ್ಯದ ಬಹಳಷ್ಟು ರೈತರಿಗೆ ಆಥರ್ಿಕ ಸಾಮಥ್ರ್ಯ ವೃದ್ಧಿಯಾಗಲಿದೆ ಎಂದು ಸಚಿವ ಡಿ.ಸಿ. ತಮ್ಮಣ್ಣ ನುಡಿದರು.  ಗದಗ ಜಿಲ್ಲೆಯ ಅಭಿವೃದ್ಧಿ ಇತ್ತೀಚಿನ ವರ್ಷಗಳಲ್ಲಿ ತುಂಬ ಗಮನಾರ್ಹವಾಗಿದ್ದು ಮಾಜಿ ಸಚಿವ ಎಚ್.ಕೆ.ಪಾಟೀಲ ಅವರಂತೆ ಉಳಿದ ವಿಧಾನಸಬಾ ಕ್ಷೇತ್ರಗಳ ಸದಸ್ಯರು ಪ್ರಯತ್ನಿಸುತ್ತಿದ್ದಾರೆ.  ರಾಜ್ಯದಲ್ಲಿ ಪ್ರಾದೇಶಿಕ ಅಸಮಾನತೆಗೆ ಅವಕಾಶವೇ ಇರುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟ ಸಾರಿಗೆ ಸಚಿವರು ಮುಳಗುಂದ ನೂತನ ಬಸ್ ನಿಲ್ದಾಣ ಆವರಣವನ್ನು 30 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ಹಾಕುವುದಕ್ಕೆ ಹಾಗೂ ಸೀತಾಲಹರಿ ಮುಳಗುಂದ ಗದಗ ಬಸ್ನ್ನು ಪ್ರಾರಂಭಿಸುವುದಕ್ಕೆ ಸೂಕ್ತ  ಕ್ರಮ ಜರುಗಿಸುವ ಭರವಸೆ ನೀಡಿದರು.   

        ಸಮಾರಂಭದ ಅಧ್ಯಕ್ಷತೆ ವಹಿಸಿದ ಶಾಸಕ ಹಾಗೂ ಮಾಜಿ ಸಚಿವರಾದ ಎಚ್.ಕೆ.ಪಾಟೀಲ ಅವರು ಮಾತನಾಡಿ ಸಾರಿಗೆ ಸಚಿವರು ಈ ಮೊದಲು ಧಾರವಾಡ ಕೃಷಿ ವಿ ವಿ. ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು ಈ ಭಾಗದ ಪರಿಚಯ ಚೆನ್ನಾಗಿದ್ದು ಗದುಗಿನ ಸಾರಿಗೆ ವ್ಯವಸ್ಥೆ ಇನ್ನಷ್ಟು ಬಲಗೊಳ್ಳುವುದಕ್ಕೆ ವಾಯವ್ಯ ಕನರ್ಾಟಕ ರಸ್ತೆ ಸಾರಿಗೆ ಸಂಸ್ಥೆ ಲಾಭದಾಯಕ ಹಾಗೂ ಹೆಚ್ಚು ಜನಸ್ನೇಹಿ ಸಾರಿಗೆ ಸಂಸ್ಥೆಯಾಗಿ ಬೆಳೆಯಲು ಅಗತ್ಯವಾದ ಕ್ರಮ ಜರುಗಿಸಲು ಆಗ್ರಹಿಸಿದರು.  ಉದಯವಾಗಲಿ ಚೆಲುವ ಕನ್ನಡ ಎಂದು ಗಂಡು ನುಡಿಯ ಮೂಲಕ ಏಕೀಕೃತ ಕನರ್ಾಟಕದ ಬೀಜ ಬಿತ್ತಿನ ಗದಗ ನೆಲದಲ್ಲಿ  ಅದರ ಸಾಕಾರಕ್ಕೆ ಸರ್ವರೂ ಜೊತೆಗೂಡಿ ಪ್ರಯತ್ನಿಸುವ ಅಗತ್ಯವಿದೆ ಎಂದು ಎಚ್.ಕೆ.ಪಾಟೀಲ ನುಡಿದರು.

       ಸಮಾರಂಭದಲ್ಲಿ ಗದಗ ಜಿ.ಪಂ. ಅಧ್ಯಕ್ಷ ವಾಸಣ್ಣ ಕುರಡಗಿ, ಉಪಾಧ್ಯಕ್ಷೆ ರೂಪಾ ಅಂಗಡಿ, ಮುಳಗುಂದ ಪ.ಪಂ. ಅಧ್ಯಕ್ಷೆ ಶ್ರೀಮತಿ ಸೋನವ್ವ ಚೆನ್ನಪ್ಪ ದೊಡ್ಡಮನಿ, ಉಪಾಧ್ಯಕ್ಷ ಕೆ.ಎಲ್. ಕರಿಗೌಡರ, ಗದಗ ಎಪಿಎಂಸಿ ಅಧ್ಯಕ್ಷ ಸಿ.ಬಿ. ಬಡ್ನಿ,  ಗದಗ ತಾ.ಪಂ.  ಉಪಾಧ್ಯಕ್ಷ ಎ.ಆರ್. ನದಾಫ್,   ಮಾಜಿ ಶಾಸಕ ಎನ್.ಎಚ್. ಕೋನರೆಡ್ಡಿ, ಮಾಜಿ ಸಂಸದ ಐ.ಜಿ. ಸನದಿ, ಜಿಲ್ಲಾ ಪಂಚಾಯತ್ ಸದಸ್ಯರಾದ ವಿ.ಪಿ. ಬಳಿಗಾರ,  ಸಿದ್ಧು ಪಾಟೀಲ, ಕನರ್ಾಟಕ ಸೌಹಾರ್ದ ಸಂಯುಕ್ತ ಸಹಕಾರಿ ಮಂಡಳಿ ನಿದರ್ೇಶಕ  ಆರ್.ಎನ್.ದೇಶಪಾಂಡೆ , ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ವಾ.ಕ. ರ. ಸಾ. ಸಂಸ್ಥೆ ವ್ಯವಸ್ಥಾಪಕ ನಿದರ್ೇಶಕ ಎಂ.ಜಿ. ಹಿರೇಮಠ, ಮುಖ್ಯ ಕಾಮರ್ಿಕ ಕಲ್ಯಾಣಾಧಿಕಾರಿ ಎಸ್.ಕೆ. ಹಳ್ಳಿ, ಮುಖ್ಯ ಲೆಕ್ಕಾಧಿಕಾರಿ ಶಾಂತಪ್ಪ ಜನಪ್ರತಿನಿಧಿಗಳು, ಗಣ್ಯರು  ಉಪಸ್ಥಿತರಿದ್ದರು.  ವಾ.ಕ.ರ.ಸಾ.ಸಂಸ್ಥೆಯ ಗದಗ  ವಿಭಾಗೀಯ ನಿಯಂತ್ರಣಾಧಿಕಾರಿ ಎಫ್.ಸಿ. ಹಿರೇಮಠ ಸರ್ವರನ್ನು ಸ್ವಾಗತಿಸಿದರು.  ಬಾಹುಬಲಿ ಜೈನರ ಕಾರ್ಯಕ್ರಮ ರೂಪಿಸಿದರು.  ಮುಳಗುಂದದ ಆರ್.ವಿ. ದೇಶಪಾಂಡೆ ಸಕರ್ಾರಿ ಪ್ರಥಮ ದಜರ್ೆ ಮಹಾವಿದ್ಯಾಲಯದ ವಿದ್ಯಾಥರ್ಿಗಳ ನಾಡಗೀತೆಯೊಂದಿಗೆ ಸಮಾರಂಭ ಪ್ರಾರಂಭಗೊಂಡಿತು.