ತಾಂಬಾ 10: ಗ್ರಾಮದಿಂದ ಇಂಡಿ ದೇವರಹಿಪರಗಿ ಹೋಗುವ ರಸ್ತೆಯಲ್ಲಿ ಸಂಚರಿಸುವದು ದುಸ್ಥರವಾಗಿದೆ. ವಿಜಯಪೂರಕ್ಕೆ ಹೊಗುವ ತಿರುವಿನಲ್ಲಿ ಸರಕಾರಿ ಬಸ್ಸುಗಳೂ ಹೊರಳಲೂ ಬಾರದಂತ್ತಾಗಿದೆ.
ಈ ಮುಖ್ಯ ರಸ್ತೆಯನ್ನು ಕೆಲವರು ಅತಿಕ್ರಮಿಸಿ ವ್ಯಾಪಾರ ವಹಿವಾಟು ನಡೆಸುತ್ತಿರುವದರಿಂದ ಸಂಚಾರ ದುಸ್ಥರವಾಗಿದೆ ಎಂಬ ದೂರಗಳಿವೆ ಜನತೆಗೆ ಸಾರಿಗೆ ನಿಯಮ ಪಾಲಿಸದ ಖಾಸಗಿ ವಾಹನಗಳು ಎಲ್ಲಿಂದರಲ್ಲಿ ನಿಲ್ಲುತ್ತಿರುವದರಿಂದ ಸಂಚಾರ ವ್ಯವಸ್ಥೆಯನ್ನು ಮತ್ತಷ್ಟು ಹದ ಗೆಡೆಸಿದೆ. ಗ್ರಾಮದಲ್ಲೆ ಪೊಲೀಸ್ ಚೌಕಿ ಇದ್ದರು. ಈ ವ್ಯೆವಸ್ಥೆ ಸುದಾರಣೆಗೆ ಕ್ರಮ ಕೈಗೊಂಡಿಲ್ಲ ಎಂದು ಪ್ರಯಾಣಿಕರು ದೂರಿದ್ದಾರೆ. ಈ ಹಿಂದೆ ಗ್ರಾ.ಪಂ ಅಧ್ಯಕ್ಷರು ಹಾಗೂ ಊರಿನ ಹಿರಿಯರು ರಸ್ತೆ ಬದಿಯಲ್ಲಿ ಹಾಕಲಾದ ಕೇಲ ಅಂಗಡಿಗಳನ್ನು ತೆರವುಗೊಳಿಸಿದರು. ರಸ್ತೆ ಪಕ್ಕದಲ್ಲಿರುವ ಚರಂಡಿ ದಾಟಿ ಅಂಗಡಿಯನ್ನು ಇಡಬಾರದು ಎಂದು ಸೂಚಿಸಲಾಗಿತ್ತು. ನಂತರ ಚರಂಡಿಯನ್ನು ಸ್ವಚ್ಛ ಮಾಡಿ ಚರಂಡಿ ಮೇಲೆ ಇದ್ದ ಎಲ್ಲ ಅಂಗಡಿಗಳನ್ನು ತೆರವುಗೊಳಿಸಲಾಗಿತ್ತು.
ಇನ್ನೆನೂ ಸಂಚಾರ ಸುಗಮವಾಯಿತು ಎಂದುಕೊಂಡಿದ್ದರು.ಆದರೆ ಮತ್ತೆ ಖಾಸಗಿ ವಾಹನಗಳು ಮುಖ್ಯ ರಸ್ತೆಯ ಮೇಲೆ ನಿಲ್ಲುವದು ಅಲ್ಲದೆ ಗೂಡ ಅಂಗಡಿಗಳನ್ನು ರಸ್ತೆಯ ಮೇಲೆ ಆರಂಭಿಸಿರುವದರಿಂದ ಸಂಚಾರ ಕಷ್ಟವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೆ ಸುಗಮ ಸಂಚಾರಕ್ಕೆ ಅನೂಕೂಲ ಕಲ್ಪಿಸಬೇಕು ಹಾಗೂ ಇಲ್ಲಿ ಅತಿ ಕ್ರಮಣವಾಗಿ ಚರಂಡಿ ದಾಟಿ ಬಂದ ಅಂಗಡಿಗಳನ್ನು ತೆರವುಗೊಳಿಸಬೇಕು ಮತ್ತು ಖಾಸಗಿ ವಾಹನಗಳು ರಸ್ತೆಯ ಬದಿಯಲ್ಲಿ ನಿಲ್ಲದ ಹಾಗೆ ವ್ಯವಸ್ಥೆ ಮಾಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳು ಕೂಡಲೆ ಸುಗಮ ಸಂಚಾರಕ್ಕೆ ಅನೂಕೂಲ ಕಲ್ಪಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.