ಕಟಾವಿಗಾಗಿ ಕಾಯುತ್ತಿರುವ ನದಿತೀರದ ಕಬ್ಬು ಬೆಳೆ
ಮಾಂಜರಿ 24: ಕಬ್ಬು ಬೆಳೆಯು ಕೃಷ್ಣಾ, ದೂಧಗಂಗಾ ಸೇರಿದಂತೆ ಉಪನದಿಗಳಿಗೆ ನೆರೆ ಎದುರಾಗಿ ಸಹಸ್ರಾರು ಎಕರೆಯಲ್ಲಿ ವಷರ್ಾನುಗಟ್ಟಲೆ ಬೆಳೆದ ಕಬ್ಬು ಶೇ 43 ರಷ್ಟು ಹಾನಿಯಾಗಿದ್ದು, ನೆರೆಯಲ್ಲಿ ಮುಳೆಗಡೆಯಾದ ಕಬ್ಬನ್ನು ಕಾರಖಾನೆಗಳು ಒಯ್ಯಲು ವಿಳಂಬ ಮಾಡುತ್ತಿರುವುದರಿಂದ ಉತ್ಪಾದಕರಲ್ಲಿ ನಿರಾಶೆ ಮೂಡಿಸಿದೆ.
ಕಬ್ಬು ಕಟಾವು ಕಾಮರ್ಿಕರ ಕೊರತೆ ರೈತರ ಜೊತೆಗೆ ಸಕ್ಕರೆ ಕಾರಖಾನೆಗಳಿಗೂ ತಲೆನೋವಾಗಿ ಪರಿಣಮಿಸಿದ್ದು, ನೆರೆಯಲ್ಲಿ ಹಾನಿಯಾದ ಕಬ್ಬನ್ನು ಕಡಿಯಲು ಪ್ರತಿ ಎಕರೆಗೆ 3 ರಿಂದ 4 ಸಾವಿರ ರೂ. ರೈತರಿಂದ ಬೇಡುತ್ತಿದ್ದಾರೆ. ಅದಲ್ಲದೆ ಕಟಾವು ಯಂತ್ರದ ಚಾಲಕರು ಎಕರೆಗೆ 5 ಸಾವಿರ ರೂ ಕೊಡಬೇಕು ಯಾಕೆಂದರೆ ಡಿಜೈಲ್ ಹೆಚ್ಚು ಸುಡುತ್ತದೆ ಎಂದು ಹೇಳುತ್ತಿದ್ದಾರೆ.
ಚಿಕ್ಕೋಡಿ ತಾಲೂಕಿನಲ್ಲಿ ಪಂಚನದಿಗಳಾದ ಕೃಷ್ಣಾ, ದೂಧಗಂಗಾ, ಪಂಚಗಂಗಾ, ವೇದಗಂಗಾ ಮತ್ತು ಚಿಕೋತ್ರಾ ನದಿಗಳ ಕೃಪಾಕಟಾಕ್ಷವಿದ್ದರೂ ಪ್ರಸಕ್ತ ಸಾಲಿನ ಭೀಕರ ಭರಗಾಲದಿಂದ ಶೇ 22 ರಷ್ಟು ಬಳೆ ನೀರಿನ ಅಭಾವದಿಂದ ಒಣಗಿ ಹೋಗಿದ್ದವು, ಇದರ ಬೆನ್ನಲ್ಲೆ ಪ್ರವಾಹ ಬಂದು ಶೇ 42 ರಷ್ಟು ಕಬ್ಬು ನಾಶವಾಗಿದೆ. ಪ್ರಸಕ್ತ ಸಾಲಿನಲ್ಲಿ 59,491 ಹೆಕ್ಟರ ಕಬ್ಬು ಬೆಳೆದಿದ್ದರು. ಇದರಲ್ಲಿ ಬರಗಾಲದಿಂದ 13,000 ಹೆಕ್ಟರ ಮತ್ತು ಪ್ರವಾಹದಿಂದಾಗಿ 23,610 ಹೆಕ್ಟರ ಕಬ್ಬು ನಾಶವಾಗಿದೆ.
ಸಾಕಷ್ಟು ಪ್ರಮಾಣದಲ್ಲಿ ನದಿ ಭಾಗದಿಂದ ಮಣ್ಣು ಕಬ್ಬಿನ ಎಲೆ ಭಾಗದ ಮೇಲೆ ಬಿದ್ದಿದೆ, ಹೀಗಾಗಿ ಕಬ್ಬು ಹೆಚ್ಚು ನಾಶವಾಗುತ್ತದೆ ಎನ್ನುತ್ತಿದ್ದಾರೆ ಉತ್ಪಾದಕರು. ನದಿ ತೀರದ ಜಮೀನುಗಳಿಂದ ರೈತರಿಗೆ ಆಥರ್ಿಕ ಶಕ್ತಿಯಾದ ಕಬ್ಬು ನೆರೆ ಪ್ರಸಕ್ತ ಸಾಲಿನಲ್ಲಿ ಆಘಾತತ ಂದು ಕೊಟ್ಟಿದೆ, ಪ್ರತಿವರ್ಷ ಸಣ್ಣ, ಮಧ್ಯಮ ಮತ್ತು ದೊಡ್ಡ ರೈತರು ಸಾವಿರಾರು ರೂ ಖಚರ್ು ಮಾಡಿ ಕಬ್ಬು ಬೆಳೆ ಬೆಳೆದಿದ್ದರು ಆದರೆ ಸಂಪೂರ್ಣವಾಗಿ ನಿರಾಶೆ ಮೂಡಿಸಿದ್ದು, ಅಥರ್ಿಕವಾಗಿ ದುರ್ಬಲರಾಗಿದ್ದಾರೆ.
ಚಿಕ್ಕೋಡಿ ತಾಲೂಕಿನಲ್ಲಿ ಉತ್ಪಾದಿಸಿದ ಕಬ್ಬು ತಾಲೂಕಿನ ಚಿಕ್ಕೋಡಿ, ಬೇಡಕಿಹಾಳ, ನಿಪ್ಪಾಣಿ ಮತ್ತು ಜೈನಾಪೂರ, ರಾಯಬಾಗ ತಾಲೂಕಿನ ಯಡ್ರಾಂವ, ಅಥಣಿ ತಾಲೂಕಿನ ಶಿರಗುಪ್ಪಿ ಹಾಗೂ ಮಹಾರಾಷ್ಟ್ರದ ಗಡಿಭಾಗದ ಕಾರಖಾನೆಗಳಾದ ಟಾಕಳಿ, ಹುಪರಿ, ಇಚಲಕರಂಜಿ, ಶಿರೋಳ, ಕಾಗಲ ಮತ್ತು ಹಮಿದವಾಡ ಹೀಗೆ 12 ಕಾರಖಾನೆಗಳಿಗೆ ಕಬ್ಬು ಸಾಗಾಣಿಕೆಯಾಗುತ್ತಿದೆ. ಕಾರಖಾನೆಗಳು ಕಬ್ಬು ಉತ್ಪಾದಕರಿಗೆ ಆಗುತ್ತಿರುವ ನೋವನ್ನು ಅರಿತುಕೊಂಡು ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 