ಕಷ್ಟಗಳನ್ನು ಮೆಟ್ಟಿಲಾಗಿಸಿಕೊಂಡು ಇತಿಹಾಸ ನಿಮಿರ್ಸದ ಅಭಿಷೇಕ ನಾವಲೆ

ಸ್ಕೇಟಿಂಗ್ನಲ್ಲಿ ದಾಖಲೆ ಕುಂದಾನಗರಿ ಕುವರ

ಬಸವರಾಜ್ ಮುಕ್ಕಣ್ಣವರ

ಸಾಧನೆಯ ಹಾದಿಯಲ್ಲಿ ನಮ್ಮನ್ನು ಸೋಲಿಸಲು ಸಾವಿರಾರು  ಕಷ್ಟಗಳು ಸಾಲುಗಟ್ಟಿ ಎದುರು ನಿಲ್ಲುತ್ತವೆ. ಅವುಗಳಿಗೆ ಹೆದರಿ ಕೆಲವು ಜನ ಗುರಿ ಮರೆತು ಹಿಂದೆ ಸರಿಯುತ್ತಾರೆ ಆದರೆ ಇನ್ನೂ ಕೆಲವರು ಕಷ್ಟಗಳನ್ನೆ ಮಟ್ಟಿಲುಗಳನ್ನಾಗಿ ಮಾಡಿಕೊಂಡು ಮೇಲೆಳುತ್ತಾರೆ ಸೋಲನ್ನು ನೋಡಿ ಕೈಮಾಡಿ ನಗುವವರಿಗೆ ಮಾದರಿಯಾಗಿ ನಿಲ್ಲುತ್ತಾರೆ. ಅಂಥಹ ಸಾಧಕರು ನಮ್ಮ ಕಣ್ಣು ಮುಂದಯೇ ಇದ್ದರು ಎಲೆಮರೆಯ ಕಾಯಿಯಂತೆ ಮರೆಯಾಗಿರುತ್ತಾರೆ. ಆದರೆ ಅವರ ಸಾಧನೆ ಮಾತ್ರ ಕತ್ತು ಎತ್ತಿ ನೋಡುವಂತೆ ಶಿಕರದೆತ್ತರಕ್ಕೆ ಬೆಳೆದಿರುತ್ತದೆ. ಅಂಥಹ ಸಾಧನೆಗೆ ತಲುಪ ಬೇಕಾದರೆ ಕಷ್ಟಗಳೆಂಬ ಬಿರುಗಾಳಿಯನ್ನು ದಾಟುವುದು ಅನಿವಾರ್ಯ. ನಾನು ಸೋತೆ ಎಂದು ಹಣೆಗೆ ಕೈ ಹೊತ್ತಾಗ ನಾವಿದ್ದೇವೆ ಹೆದರಬೇಡಾ ಎಂದು ಹಸ್ತ ಚಾಚುವ ಪಾಲಕರು ಕೂಡಾ ಬಹು ಮುಖ್ಯ ಪಾತ್ರವನ್ನು ವಹಿಸುತ್ತಾರೆ ಇದು ಕಷ್ಟದಲ್ಲಿ ಬಿದ್ದು ಸೋಲಿನಿಂದ ಎದ್ದು ಗುರಿಯ ಬೇಟೆಯಾಡಿದ ಒಬ್ಬ ಯುವಕನ ಕಥೆ ಹೌದು ಸೋರುವ ಮನೆಗೆ ತಾಡಪತ್ರೆ ಹೊದಿಸಿ ಮನೆಯಲ್ಲಿರುವ ಬಂಗಾರ ಮಾರಿ ಮಳೆ ಬಂದಾಗ ಸೋರುವ ಮಾಳೆಗೆಯತ್ತ ನೋಡುತ್ತ ಮಗನ ಸಾದನೆಗೆ ಅವಕಾಶ ಮಾಡಿಕೊಟ್ಟಿದ್ದರ ಫಲವಾಗಿ ಈಗ  ಗೆದ್ದ ಮೆಡಲ್ಗಳನ್ನು ಇಡಲು ಜಾಗವಿಲ್ಲದಷ್ಟು ಅಂತರಾಷ್ಟ್ರಿಯ ಮಟ್ಟದಲ್ಲಿ ಸಾದನೆ ಮಾಡಿದ ಕುಂದಾನಗರಿಯ ಹೆಮ್ಮೆಯ ಕುವರ ಅಭಿಷೇಕ ನವಲೆಯ ಸಾಧನೆಯ ಕಥೆ ಇದು.

ಕೇವಲ ನಾಲ್ಕು ವರ್ಷದವನಿದ್ದಾಗಲೇ ಗುರಿ ಬೆನ್ನಟ್ಟಿ ಸ್ಕೆಟಿಂಗ್ನಲ್ಲಿ  ತನ್ನದೇ ಆದ ಹೆಸರು ಬರಿಯಯಬೇಕೆಂಬ ಹಂಬಲದಿಂದ ಪ್ರಯತ್ನಕ್ಕಿಳಿದ ಅಭಿಷೇಕನಿಗೆ ಹನ್ನೆರಡನೆಯ ವರ್ಷದಲ್ಲಿಯೇ ಪೋಚರ್ುಗಲ್ನಲ್ಲಿ ನಡೆಯುತ್ತಿದ್ದ ಅಂತರಾಷ್ಟ್ರೀಯ ಮಟ್ಟದ ಸ್ಪಧರ್ೆಗೆ ಆಯ್ಕೆಯಾದ. ಸಂದರ್ಭದಲ್ಲಿ ಆತನನ್ನು ವಿದೇಶಕ್ಕೆ ಕಳಿಸಲು ಮನೆಯಲ್ಲಿ ಬಿಡಿಗಾಸು ಹಣ ವಿರಲಿಲ್ಲ ಆಗ ಇತನ ಪಾಲಕರು ಮನೆಯಲ್ಲಿ ಇರುವಂತ ಬಂಗಾರವನನ್ನು ಮಾರಾಟ ಮಾಡಿ ಹಣವನ್ನು ಕೂಡಿಸಿದರು ಅಷ್ಟಾದರೂ ಹಣ ಕೊರತೆ ಹೆಗಲೇರಿತು ಸಂದರ್ಭದಲ್ಲಿ ಕೆವಿಜಿ ಬ್ಯಾಂಕ್ನಲ್ಲಿ  ಲೋನ ಮಾಡಿ ಇತನನ್ನು ಪೊಚರ್ುಗಲ್ನಲ್ಲಿ ನಡೆಯುತ್ತಿದ್ದ ಅಂತರಾಷ್ಟ್ರಿಯ ಸ್ಕೆಟಿಂಗ್ ಸ್ಪದರ್ೆಯಲ್ಲಿ ಬಾಗವಹಿಸಲು ಪಾಲಕರು ಕಳಿಸಿದರು. ಅದನ್ನೆ ಸಧಾವಕಾಶ ಮಾಡಿಕೊಂಡು ಪ್ರಥಮ ಬಹುಮಾನ ಪಡೆದು ತಮ್ಮ ಸಾಧನೆಯ ದಾರಿಯತ್ತ ಹೆಜ್ಜೆ ಇಟ್ಟರು.

ಅಲ್ಲಿಂದಲೇ ಕ್ರೀಡಾ ಜಗತ್ತಿನಲ್ಲಿ ತಮ್ಮ ಪಯಣನ್ನು ಪ್ರಾರಂಭಿಸಿ ಅನೇಕ ಬಾರಿ ರಾಷ್ಟ್ರಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ತನ್ನದಾಗಿಸಿಕೊಂಡಿದ್ದಾನೆ. ಇತನ ಮನೆಯಲ್ಲಿ ಪ್ರಶಸ್ತಿಗಳ ಸೂರಿಮಳೆಯೇ ಸುರಿದಿದೆ. ಮೂರು ಬಾರಿ ವಡರ್್ ರಿಕಾಡರ್್ ಅಕಾಡೆಮಿ, ಮೂರು ಬಾರಿ ಲಿಮ್ಕಾ ಬುಕ್, ಮೂರು ಬಾರಿ ಇಂಡಿಯಾ ಬುಕ್ ರಿಕಾರ್ಡ್ ಹೊಂದಿದ ಅಭಿಷೇಕ ನಾವಲೆ ಕಳೆದ ಹತ್ತು ವರ್ಷಗಳಿಂದ ಪರಿಶ್ರಮಿಸಿದ ಪರಿಣಾಮವಾಗಿ  100 ಮೀಟರ್ ಇನ್ಲೈನ್ ಸ್ಕೆಟಿಂಗ್ನಲ್ಲಿ ವಡರ್್ ಗಿನ್ನಿಸ್ ದಾಖಲೆ ಮಾಡಿ ಕ್ರೀಡಾಲೋಕದಲ್ಲಿ ಇತಿಹಾಸ ರಚಿಸಿದ್ದಾರೆ. ಇತನ ಸಾಧನೆಯನ್ನು ಮೆಚ್ಚಿ ಸಾಧಕನಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಎಸ್ಬಿ ಬೊಮ್ಮನಳ್ಳಿ  ಸನ್ಮಾನ ಮಾಡಿ ಗೌರವಿಸಿದ್ದಾರೆ.

ಇತನ ಸಾದನೆಯ ಹಿಂದೆ ತಂದೆ ತಾಯಿಗಳ ಶ್ರಮ ಬಹಳಷ್ಟಿದೆ. ತಂದೆ ಕೆಎಸ್ಆರ್ಟಿಸಿ ಕಂಡಕ್ಟರ ಇವರೊಬ್ಬರಿಂದಲೇ ಮನೆಗೆ ಆದಾಯ. ಆದರೂ ಎದೆಗೊಂದದೆ ಇವನ ಸಾಧನೆಗೆ ತಮ್ಮ ಬಡತನ ತೋರಿಸದೆ ಉತ್ತಮ ಕ್ರಿಡಾಪಟುವಾಗಲು ಸಹಾಯ ಮಾಡಿದ್ದಾರೆ ಇದರ ಬಗ್ಗೆ ಪ್ರತಿಕ್ರಿಯಿಸಿದ ಅಭಿಷೇಕ ನನ್ನ ಪಾಲಕರ ಬಗ್ಗೆ ನನಗೆ ಹೆಮ್ಮೆ ಇದೆ. ನನ್ನ ಸಾಧನೆಗೆ ಹೆಗಲು ಕೊಟ್ಟು ಬಡತನವನ್ನು ತಾವು ಅನುಭವಿಸಿ ಗುರಿಯತ್ತ ಸಾಗಲು ಸಹಾಯ ಮಾಡಿದ ಅವರ ಋಣವವನ್ನು ನನ್ನಿಂದ ತೀರಿಸಲು ಸಾಧ್ಯವಿಲ್ಲ ಎನ್ನುತ್ತಾರೆ

ಅಂತರಾಷ್ಟ್ರಿಯ ಮಟ್ಟದವರೆಗೂ ಸ್ಕೇಟಿಂಗ್ ಕ್ರೀಡೆಯಲ್ಲಿ ತನ್ನದೆ ಛಾಪು ಮೂಡಿಸಿ ಬಂದ ಕ್ರೀಡಾಪಟುವಿಗೆ ವಾಸಿಸಲು ಒಂದು ಸುಸಜ್ಜಿತ ಮನೆ ಇಲ್ಲದಿರುವುದು ವಿಷಾಧನಿಯ ಸಂಗತಿ. ಸಾಲದ ಶೂಲದಿಂದ ನರಳುತ್ತಿರುವ ಇತನ ಕುಟುಂಬಕ್ಕೆ ಯಾವುದೇ ಧನಸಹಾಯವು ಇಲ್ಲ. ಸಾಧಕನಿಗೆ ಪ್ರೊತ್ಸಾಹ ಇಲ್ಲದಿದ್ದರೆ ಸಾದನೆ ಕಷ್ಟಸಾಧ್ಯ. ಸರಕಾರ ಇಂತಹ ಸಾಧಕರನ್ನು ಗುರುತಿಸಿ ಅವರ ಗುರಿಯತ್ತ ಸಾಗಲು ಸಹಾಯ ಮಾಡುವುದು ಅವಶ್ಯಕ.