ಲಂಡನ್ 24: ಬಹುಬೇಗ ಟೀಂ ಇಂಡಿಯಾದಲ್ಲಿ ಆಡಲು ಅವಕಾಶ ಪಡೆದಿರುವ ಖುಷಿಯಲ್ಲಿ ಉದಯೋನ್ಮುಖ ಆಟಗಾರ ರಿಷಬ್ ಪಂತ್ ಅವರು ತಮ್ಮ ಬೆಳವಣಿಗೆಗೆ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಕಾರಣ ಎಂದು ಹೇಳಿದ್ದಾರೆ.
ಎಂಎಸ್ ಧೋನಿ ನೀಡಿದ ಸರಳ ಸಲಹೆಗಳು ನಾನು ಆದಷ್ಟು ಬೇಗ ಗ್ರಹಿಸಿದೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ಟೀಂ ಇಂಡಿಯಾ ತಂಡದಲ್ಲಿ ಸ್ಥಾನ ದೊರೆತಿದೆ. ಅನುಭವಿ ಆಟಗಾರ ಎಂಎಸ್ ಧೋನಿ ಅವರು ತಾನು ಬೆಳೆಯಲು, ಕ್ರಿಕೆಟ್ ನಲ್ಲಿ ಗುರುತಿಸಿಕೊಳ್ಳಲು ತುಂಬಾ ನೆರವು ನೀಡಿದ್ದಾರೆ. ಯಾವುದೇ ರೀತಿಯಲ್ಲಿ ನನಗೆ ಬೆಂಬಲ ಬೇಕಿದ್ದಾಗ ನಾನು ಮಾಹಿ ಭಾಯ್ ಪ್ರಶ್ನಿಸಿ ಸಲಹೆ ಪಡೆದುಕೊಳ್ಳುತ್ತಿದೆ ಎಂದರು.