ಜಗದ್ಗುರು ರೇಣುಕಾಚಾರ್ಯ ಜಯಂತ್ಯೋತ್ಸವ: ಬದುಕಿಗೆ ಬಲ, ಶ್ರೇಯಸ್ಸಿಗೆ ಧರ್ಮವೊಂದೇ ಆಶಾಕಿರಣ: ರಂಭಾಪುರಿಶ್ರೀ

ಬೈಲಹೊಂಗಲ 16: ಬದುಕು ಬಲಗೊಳ್ಳಲು, ಶ್ರೇಯಸ್ಸಿಗೆ ಧರ್ಮವೊಂದೇ ಆಶಾಕಿರಣ. ಧಮರ್ಾಚರಣೆಯಿಂದ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ಪಡೆಯಲು ಸಾಧ್ಯವಾಗುತ್ತದೆ ಎಂದು ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

  ಅವರು ತಾಲೂಕಿನ ಸಂಗೊಳ್ಳಿ ಹಿರೇಮಠದ ಆವರಣದಲ್ಲಿ ಬುಧವಾರ ನಡೆದ  ಜಗದ್ಗುರು ರೇಣುಕಾಚಾರ್ಯ ಜಯಂತ್ಯೋತ್ಸವ, ಗುರುಲಿಂಗ ಶ್ರೀಗಳ ಪಟ್ಟಾಧಿಕಾರದ 9ನೇ ವರ್ಷದ ವರ್ಧಂತಿ ಮಹೋತ್ಸವ, ಶಿವದೀಕ್ಷಾ ಅಯ್ಯಾಚಾರ, ಲಿಂಗದೀಕ್ಷೆ, ಸಾಮೂಹಿಕ ವಿವಾಹ ಸಮಾರಂಭ ಅಂಗವಾಗಿ ಜರುಗಿದ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ, ಉದ್ಘಾಟಿಸಿ, ಮಾತನಾಡಿ, ಮನುಷ್ಯ ಸಂಪತ್ತು ಗಳಿಸದಿದ್ದರೂ ಪರವಾಗಿಲ್ಲ. ಆದರೆ ಸದ್ಗುಣಗಳನ್ನು ಸಂಪಾದಿಸಿಕೊಂಡು ಸನ್ಮಾರ್ಗದತ್ತ ಬಾಳಬೇಕು ಎಂದರು.

    ಜಾತಿ ಮತ ಪಂಥಗಳೆನ್ನದೇ ಸಂಸ್ಕಾರ ಸಂಸ್ಕೃತಿ ಪುನರುತ್ಥಾನಕ್ಕಾಗಿ ಜಗದ್ಗುರು ರೇಣುಕಾಚಾರ್ಯರು ಶ್ರಮಿಸಿದರು. ಗಂಡು ಹೆಣ್ಣು, ಉಚ್ಚ ನೀಚ, ಬಡವ ಶ್ರೀಮಂತ ಎಂಬ ತಾರತಮ್ಯ ಇಲ್ಲದೇ ಸರ್ವರಿಗೂ ಧರ್ಮ ಪರಿಪಾಲನೆ ಅಧಿಕಾರವನ್ನು ಕೊಟ್ಟಿದ್ದನ್ನು ಮರೆಯಲಾಗದು. ಅಹಿಂಸಾದಿ ಧ್ಯಾನ ಪರ್ಯಂತರವಾದ ದಶಧರ್ಮ ಸೂತ್ರಗಳನ್ನು ಬೋಧಿಸಿ ಉದ್ಧರಿಸಿದ್ದಾರೆ. ಅಂಗ ಅವಗುಣ ಕಳೆದು ಲಿಂಗ ಗುಣ ಕರುಣಿಸುವುದು ಶಿವದೀಕ್ಷೆಯ ಧ್ಯೇಯವಾಗಿದೆ. ಮಲತ್ರಯಗಳನ್ನು ಕಳೆದು ಶಿವಜ್ಞಾನ ಉಂಟು ಮಾಡುವುದೇ ಶಿವದೀಕ್ಷೆ ಎಂದು ಕರೆಯುತ್ತೇವೆ ಎಂದರಲ್ಲದೆ, ಪ್ರತಿ ವರುಷ  ಜಗದ್ಗುರು ರೇಣುಕಾಚಾರ್ಯ ಜಯಂತಿ ನಡೆಸಲು ರಂಭಾಪುರಿ ಪೀಠದಿಂದ 1 ಲಕ್ಷ ರೂಪಾಯಿ ಆಶೀರ್ವದಿಸಲಾಗುವುದೆಂದರು. 

ನೇತೃತ್ವ ವಹಿಸಿದ ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, 9 ವರುಷಗಳ ಅವಧಿಯಲ್ಲಿ ದಾನಿಗಳ ಸಹಕಾರದಿಂದ ಅನೇಕ ಧಾಮರ್ಿಕ ನಿರಂತರವಾಗಿ ನಡೆದಿರುವುದು ಸಂತಸ ತಂದಿದೆ. ರಂಭಾಪುರಿ ಜಗದ್ಗುರುಗಳವರ ಆಶೀವರ್ಾದದಿಂದ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಾಗಿ ಹೇಳಿದರು. 

ವೇದಿಕೆಯ ಮೇಲೆ ಅಮ್ಮಿನಬಾವಿ ಶಾಂತಲಿಂಗ ಶಿವಾಚಾರ್ಯ, ಹೂಲಿಯ ಉಮೇಶ್ವರ ಶಿವಾಚಾರ್ಯ, ಕಾದರವಳ್ಳಿಯ ಡಾ. ಪಾಲಾಕ್ಷ ಶಿವಯೋಗಿಗಳು, ಸುಳ್ಳದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ, ದೊಡವಾಡ ಜಡಿಸಿದ್ಧೇಶ್ವರ ಶಿವಾಚಾರ್ಯ, ಅಬ್ಬಿಗೇರಿ ಸೋಮಶೇಖರ ಶಿವಾಚಾರ್ಯ, ಮುತ್ನಾಳದ ಶಿವಾನಂದ ಶಿವಾಚಾರ್ಯ, ರಾಣೆಬೆನ್ನೂರಿನ ಶಿವಯೋಗಿ ಶಿವಾಚಾರ್ಯರು, ಮಾಜಿ ಶಾಸಕ  ಡಾ. ವಿಶ್ವನಾಥ ಪಾಟೀಲ, ಯುವ ಮುಖಂಡ ಬಸವರಾಜ ಕೌಜಲಗಿ, ಜಿಪಂ ಸದಸ್ಯರಾದ ಈರಣ್ಣ ಕರೀಕಟ್ಟಿ, ಅನೀಲ ಮೇಕಲಮಡರ್ಿ, ತಾಪಂ ಸದಸ್ಯ ಗೌಸಸಾಬ ಬುಡ್ಡೆಮುಲ್ಲಾ, ಗ್ರಾಪಂ ಉಪಾಧ್ಯಕ್ಷ ಬಸವರಾಜ ಕೊಡ್ಲಿ, ವೀರರಾಣಿ ಮಲ್ಲಮ್ಮ ಸೋಸೈಟಿ ಅಧ್ಯಕ್ಷ ಡಾ. ಆರ್.ಬಿ.ಪಾಟೀಲ, ಪ್ರಮೋದಕುಮಾರ ವಕ್ಕುಂದಮಠ, ರುದ್ರಯ್ಯ ರೊಟ್ಟಯ್ಯನವರ, ಡಾ.ಸಿ.ಬಿ. ಗಣಾಚಾರಿ, ಚಂದ್ರಶೇಖರ ಅಷ್ಟಗಿಮಠ, ಮಹಾಂತೇಶ ಪೂಜೇರ, ವೀರಯ್ಯ ಹಿರೇಮಠ ಇದ್ದರು.

      ಆರಾದ್ರಿಮಠದ ಮಹಾಂತೇಶ ಶಾಸ್ತ್ರಿಗಳು ಸ್ವಾಗತಿಸಿದರು. ಬಾಳೆಹೊನ್ನೂರು ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ ಜರುಗಿತು.  

     ದೊಡ್ಡಪ್ಪ ಮಾದರ ಮತ್ತು ಗಂಗಾಧರ ಸ್ವಾಮಿ ಅವರಿಂದ ಭಕ್ತಿಗೀತೆ ಜರುಗಿತು. ಸವಣೂರಿನ ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. 

  ಸುಮಾರು 30 ವೀರಮಾಹೇಶ್ವರ ಜಂಗಮ ವಟುಗಳು ಕ್ರಮಬದ್ಧವಾಗಿ ಶಿವದೀಕ್ಷೆ ಪಡೆದು ಗುರುಕೃಪೆಗೆ ಪಾತ್ರರಾದರು. ಸಾಮೂಹಿಕ ವಿವಾಹ ಜರುಗಿತು. ಸಮಾರಂಭಕ್ಕೂ ಮುನ್ನ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ರಂಭಾಪುರಿ ಜಗದ್ಗುರುಗಳು ಪುಷ್ಪಾರ್ಚನೆ ಮಾಡಿದರು. ಗುರುಲಿಂಗ ಶಿವಾಚಾರ್ಯ ಶ್ರೀಗಳಿಗೆ ವರ್ಧಂತಿ ಮಹೋತ್ಸವ ನಿಮಿತ್ಯ ರೇಷ್ಮೆ ಮಡಿ ಹೊದಿಸಿ ಫಲ ಪುಷ್ಟವಿತ್ತು ಶುಭ ಹಾರೈಸಿದರು.