ಕೃಷಿ ತಜ್ಞರಿಂದ ವಿವಿಧ ಬೆಳೆಗಳ ಪರಿಶೀಲನೆ: ರೈತರಿಗೆ ಸಲಹೆ

ಬೈಲಹೊಂಗಲ ತಾಲೂಕಿನಲ್ಲಿ ಧಾರವಾಡ, ಕೃಷಿ ವಿಶ್ವವಿದ್ಯಾಲಯದ ಪೀಡೆ ಸವರ್ೇಕ್ಷಣಾ ತಂಡದ ಕೃಷಿ ತಜ್ಞರು ವಿವಿಧ ಬೆಳೆಗಳ ಪರೀಶ


ಬೈಲಹೊಂಗಲ 03: ತಾಲೂಕಿನ ಗ್ರಾಮಗಳಲ್ಲಿ ಧಾರವಾಡ, ಕೃಷಿ ವಿಶ್ವವಿದ್ಯಾಲಯದ ಪೀಡೆ ಸವರ್ೇಕ್ಷಣಾ ತಂಡದ ಕೃಷಿ ತಜ್ಞರು ಸೋಯಾ, ಅವರೆ, ಕಬ್ಬು, ಹತ್ತಿ, ಗೋವಿನ ಜೋಳ ಮುಂತಾದ ಬೆಳೆಗಳ ಪರೀಶಿಲನೆ ನಡೆಸಿ  ಬೆಳೆಗಳಿಗೆ ಬಂದಿರುವ ಕೀಟ ಮತ್ತು ರೋಗಗಳ ಬಗ್ಗೆ ಸವರ್ೇ ನಡೆಸಿ ರೈತರಿಗೆ ಸಲಹೆಗಳನ್ನು ನೀಡಿದರು. 

  ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೀಟ ತಜ್ಞರಾದ ಡಾ||ಪಿ.ಎಸ್.ತಿಪ್ಪಣ್ಣವರ ಮತ್ತು ಡಾ.ಬಸವರಾಜ.ಶಿ.ಏಣಗಿ ನೇತೃತ್ವದ ತಂಡ ಎಂ.ಕೆ.ಹುಬ್ಬಳ್ಳಿ (ಕಬ್ಬು), ಹೊಳಿಹೊಸೂರ (ಹತ್ತಿ), ನಯಾನಗರ (ಕಬ್ಬು, ಹತ್ತಿ) ನಾಗನೂರ (ಕಬ್ಬು), ನೇಗಿನಹಾಳ (ಕಬ್ಬು), ತಿಗಡಿ (ಕಬ್ಬು) ಗ್ರಾಮಗಳಲ್ಲಿ ಬೆಳೆಗಳಿಗೆ ಬಂದಿರುವ ಕೀಟ ಮತ್ತು ರೋಗಗಳ ಹತೋಟಿಗೆ ಕೆಳಗಿನಂತೆ ಕೂಡಲೆ ಕ್ರಮ ತೆಗೆದುಕೊಳ್ಳಬೇಕೆಂದು ತಿಳಿಸಿದರು.

ಸೋಯಾ ಅವರೆಯಲ್ಲಿ ಕಾಂಡ ಕೊರೆಯುವ ಕೀಟದ ಬಾಧೆ ಇದ್ದು ಹತೋಟಿಗೆ 03.ಮಿ.ಲಿ ಇಮಿಡಾಕ್ಲೋಪ್ರಿಡ್, 17.8 ಎಸ್.ಎಲ್. ಅಥವಾ 0.3 ಗ್ರಾಂ ಥಯಾಮಿಥಾಕ್ಸಾಮ್ 25ಘಉ, ಕೀಟನಾಶಕವನ್ನು ಪ್ರತಿ ಲೀ ನೀರಿಗೆ ಬೆರೆಸಿ ಸಿಂಪಡಿಸಬೇಕು. ತುಕ್ಕು ರೋಗದ ನಿರ್ವಹನೆಗೆ 1 ಮಿ.ಲಿ ಹೆಕ್ಜಾಕೋನೊಜೊಲ 5 ಇ.ಸಿ ಪ್ರತಿ ಲೀ ನೀರಿಗೆ ಬೆರಿಸಿ ಸಿಂಪಡಿಸಬೇಕು ಎಂದರು. ಕಬ್ಬಿನಲ್ಲಿ ಗೊಣ್ಣೆ ಹುಳುವಿನ ಬಾಧೆ ಕಂಡುಬಂದಿದ್ದು ಅದರ ನಿರ್ವಹಣೆಗೆ ಬೆಳೆ ಇರುವ ಪ್ರದೇಶದಲ್ಲಿ ಪ್ರತಿ ಲೀ ನೀರಿಗೆ 10 ಮಿ.ಲಿ ಕ್ಲೋರೊಪೈರಿಫಾಸ್ 25 ಇ.ಸಿ ಸೇರಿಸಿ ಪ್ರತಿ ಎಕರೆಗೆ 200 ಲೀ ನಂತೆ ಬಾಧಿತ ಗಿಡದ ಸುತ್ತಲೂ ಮಣ್ಣಿಗೆ ಸೇರಿಸಬೇಕು (ಡ್ರೆಂಚಿಂಗ್). ಹನಿ ನೀರಾವರಿ ವ್ಯವಸ್ಥೆಯ ಮೂಲಕ ಪ್ರತಿ ಎಕರೆಗೆ ಇಮಿಡಾಕ್ಲೋಪ್ರಿಡ್ 40% + ಪಿಪ್ರೋನಿಲ್ 40% (ಲೆಸೆಂಟಾ) ರಂದ್ರದ ಮೂಲಕ ಪ್ರತಿ ಎಕೆರೆಗ 100 ಗ್ರಾಂ. ನಂತೆ ಒದಗಿಸಬೇಕು. 

ಗೋವಿನ ಜೋಳದಲ್ಲಿ ಸೈನಿಕ ಹುಳುವಿನ ಬಾಧೆಗೆ ಕಳಿತ ವಿಷ ಪಾಷಾಣ ತಯಾರಿಸಿ ಅಂದರೆ 5 ರಿಂದ 8 ಲೀ ನೀರಿನಲ್ಲಿ 250 ಮಿ.ಲಿ ಮೊನೋಕ್ರೊಟೊಫಾಸ್ 36 ಎಸ್.ಎಲ್. ಕೀಟನಾಶಕವನ್ನು 4 ಕೆ.ಜಿ ಬೆಲ್ಲದೊಂದಿಗೆ ಬೆರೆಸೆ 50 ಕೆ.ಜಿ ಅಕ್ಕಿ ಅಥವಾ ಗೋಧಿ ತೌವಡಿನಲ್ಲಿ ಸರಿಯಾಗಿ ಬೆರೆಸಿ 2 ದಿನಗಳೊಳಗೆ ಪ್ಲಾಸ್ಟಿಕ ಚೀಲ ಅಥವಾ ಪೀಪಾಯಿಯಲ್ಲಿ ಕಳಿಯಲು ಬಿಡಬೇಕು. ಸಾಯಂಕಾಲದ ಸಮಯದಲ್ಲಿ ಎಕರೆಗೆ 20 ಕೆ.ಜಿ ಪ್ರಮಾಣದಲ್ಲಿ ವಿಷ ಪಾಷಾಣವನ್ನು ಸುಳಿ ಮತ್ತು ಎಲೆಗಳ ಮೇಲೆ ಬೀಳುವಂತೆ ಎರಚಬೇಕು. ಹುಳುಗಳು ವಿಷ ಪಾಷಾಣಕ್ಕೆ ಆಕಷರ್ಿತಗೊಂಡು ತಿಂದು ಸಾಯುತ್ತವೆ.  ಹತ್ತಿ ಬೆಳೆಯಲ್ಲಿ ಕಾಂಡ ಕೊರೆಯುವ ಹುಳುವಿನ ನಿರ್ವಹಣೆಗೆ 0.5 ಮಿ.ಲಿ ಡಿ.ಡಿ.ವ್ಹಿ.ಪಿ (ನೋವಾನ್) + ಪ್ರೋಫೆನೊಫಾಸ್ 2 ಮಿ.ಲಿ ಇಲ್ಲವೆ ಪ್ರತಿ ಎಕರೆಗೆ 5 ಕೆ.ಜಿಯಂತೆ ಶೇ.10ರ ಫೋರೆಟ್ ಹರಳು ಸಾಲಿನಗುಂಡ ಎರಚಬೇಕು ಎಂದು ಸಲಹೆ ನೀಡಿದರು. 

ಹತ್ತಿಯಲ್ಲಿ ಗುಲಾಬಿ ಕಾಯಿ ಕೊರೆಯುವ ಹುಳುವಿನ ಬಾಧೆಗೆ ಲ್ಯೂರ ಬಳಕೆ: ಪ್ರತಿ ಎಕರೆಗೆ 12 ರಂತೆ ಲಿಂಗಾಕರ್ಷಕ ಬಲೆಗಳನ್ನು ಅಳವಡಿಸಿಕೊಳ್ಳಬೇಕು. ಪ್ರತಿ 20 ದಿನಗಳಿಗೊಮ್ಮೆ ಲ್ಯೂರಗಳನ್ನು ಬದಲಿಸಬೇಕು. ರಾಸಾಯನಿಕ ಹತೋಟಿಗಾಗಿ 0.5 ಮಿ.ಲಿ ಲ್ಯಾಮ್ಡಾಸೈಲೊತ್ರಿನ್ ಅಥವಾ ಸೈಪರಮಿತ್ರಿನ್ ಅಥವಾ 2 ಮಿ.ಲಿ ಪ್ರೋಫೆನೊಫಾಸ್ ಪ್ರತಿ ಲೀ. ನೀರಿನಲ್ಲಿ ಬೆರೆಸಿ ಅವಶ್ಯಕತೆಗನುಸಾರವಾಗಿ ಸಿಂಪರಣೆ ಕೈಗೊಳ್ಳಬೇಕು ಎಂದು ಹೇಳಿದರು.

ಸಹಾಯಕ ಕೃಷಿ ನಿದರ್ೇಶಕರಾದ ಎಂ.ಬಿ.ಹೊಸಮನಿ, ಸಹಾಯಕ ಕೃಷಿ ಅಧಿಕಾರಿಗಳು, ಮತ್ತು ಸುತ್ತಮುತ್ತಲಿನ ರೈತರು ಇದ್ದರು.