ನಿವೃತ್ತಿ ಹೊಂದಿದ ಲೈನಮನ್ಗಳು ಮಾದರಿಯಾಗಿ ಕೆಲಸ ನಿರ್ವಹಿಸಿದ್ದಾರೆ

ಲೋಕದರ್ಶನ ವರದಿ

ಮೂಡಲಗಿ 12: ಸರಕಾರಿ ನೌಕರರು ಟಿ.ಎ.ಡಿ.ಎ.ಇನ್ನಿತರ ಬತ್ತೆಗಳ ಬಿಲ್ ಹಣ ಪಡೆಯಲು ತಾಮುಂದು, ನಾಮುಂದು ಎಂದು ಬಡಿದಾಡುತ್ತಿರುವ ಇಂದಿನ ದಿನಗಳಲ್ಲಿ ಕಳೆದ 10-15ವರ್ಷಗಳಿಂದ ಟಿ.ಎ.ಮೆಂಟೆನನ್ಸ ಬಿಲ್ ತೆಗೆದುಕೊಳ್ಳದೆ ದಕ್ಷತೆಯಿಂದ ಕಾರ್ಯನಿರ್ವಹಿಸಿ ಸ್ವಯಂ ನಿವೃತ್ತಿ ಹೊಂದಿದ ನಾಲ್ಕು ಜನ ಸಿಬ್ಬಂದಿಗಳು ಇತರ ನೌಕರರಿಗೆ ಮಾದರಿಯಾಗಿದ್ದಾರೆ ಎಂದು ಕಾಯರ್ಾಲಯದ ಹಿರಿಯ ಸಹಾಯಕ ಬಸವರಾಜ ಕಬ್ಬೂರ ಹೇಳಿದರು.

ಮಂಗಳವಾರದಂದು ಸ್ಥಳೀಯ ಬಿ.ಎಸ್.ಎನ್.ಎಲ್ ಉಪ ಮಂಡಳ ಕಾಯರ್ಾಲಯದಲ್ಲಿ ಸ್ವಯಂ ನಿವೃತ್ತಿ ಹೊಂದಿದ ಲೈನಮನ್ಗಳಾದ ದುಂಡಪ್ಪ ಬಡಲಕ್ಕನವರ, ರಾಮಪ್ಪ ಗೌರಿ,ಶಿವಪುತ್ರಪ್ಪ ಬಾಗೇವಾಡಿ, ರಾಘವೇಂದ್ರ ದೇಶಪಾಂಡೆ ಇವರಿಗೆ ಹಮ್ಮಿಕೊಂಡ ಸತ್ಕಾರ ಸಮಾರಂಭದಲ್ಲಿ  ಸ್ವಾಗತಿಸಿ ಮಾತನಾಡಿ, ಮೂಡಲಗಿ ಉಪಮಂಡಳದಲ್ಲಿ ಲೈನ್ಮನ್ ಆಗಿ ಕೆಲಸ ಮಾಡುತ್ತಿದ್ದ 13ಜನರು ತಮ್ಮ ಸ್ವಂತ ಖಚರ್ು ಹಾಕಿ ಗ್ರಾಹಕರಿಗೆ ಸೇವೆ ಸಲ್ಲಿಸಿದ್ದಕ್ಕೆ ತುಂಬಾ ಮಾನವಿಯ ಕಾರ್ಯವಾಗಿದೆ.ಕೆಲವೊಂದು ಅಧಿಕಾರಿಗಳ ತಪ್ಪು ನಿರ್ಣಯಗಳಿಂದ ಇಲಾಖೆ ಸಿಬ್ಬಂದಿಗಳನ್ನು ಕಡಿಮೆ ಮಾಡುತ್ತ ಬಂದಿದೆ ಅಲ್ಲದೆ ಸರಿಯಾಗಿ ಸಂಬಳ ದೊರೆಯದೆ ಇರುವ ಸಿಬ್ಬಂದಿಗಳ ಮೇಲೆ ಕೆಲಸದ ಒತ್ತಡ ಹಾಕುವುದರಿಂದ ಸಿಬ್ಬಂದಿಗಳು ಸ್ವಯಂ ನಿವೃತ್ತಿ ಹೊಂದಲು ಕಾರಣವಾಗಿದೆ. ಮೊದಲು ಇಲಾಖೆಯು 3600ಕೋಟಿ ಲಾಭದಲ್ಲಿತ್ತು ನಿಗಮ ಆದ ನಂತರ ಹಾನಿ ಅನುಭವಿಸುತ್ತ ಸ್ವಯಂ ನಿವೃತ್ತಿ ಯೋಜನೆ ಜಾರಿಗೆ ಬಂದಿದೆ.ಜಿಲ್ಲೆಯಲ್ಲಿ 330 ಜನ ಸ್ವಯಂ ನಿವೃತ್ತರಾಗಿದ್ದಾರೆ.ಇವರ ಬಾವಿ ಜೀವನಕ್ಕೆ ಸರಕಾರ ಭದ್ರತೆ ಕಲ್ಪಿಸಿದ್ದಕ್ಕೆ ಧನ್ಯವಾದ ಸಲ್ಲಿಸಿ ಇಲಾಖೆಯೊಂದಿಗೆ ಸಂಪರ್ಕದಲ್ಲಿರಲು ಮನವಿ ಮಾಡಿ ನಿವೃತ್ತಿ ಜೀವನ ಸುಖಕರವಾಗಲೆಂದು ಶುಭ ಹಾರೈಸಿದರು.

ಅತಿಥಿ ಯ.ಯ.ಸುಲ್ತಾನಪೂರ ನಿವೃತ್ತರಿಗೆ ಶುಭಕೋರಿ 1998ರಿಂದ ನಾನು ಮೂಡಲಗಿ ಉಪ ಮಂಡಲದಲ್ಲಿ ಏಕೈಕ ಎಸ್.ಟಿ.ಡಿ.ಬೂತ ನಡೆಸಿಕೊಂಡು ಬರಲು ಲೈನಮನ್ಗಳ ಮತ್ತು ಸಿಬ್ಬಂದಿ ಸಹಕಾರ ಮುಖ್ಯವಾಗಿದೆ ಎಂದು ಹೇಳಿ ಯಾವುದೇ ಫಲಾಪೇಕ್ಷೆ ಇಲ್ಲದ ದಕ್ಷತೆ,ಉತ್ಸಾಹ,ಹೆಮ್ಮೆ ಮತ್ತು ಹಠದಿಂದ ಆಧಾರ ಕಾರ್ಡದ ಕಾರ್ಯನಿರ್ವಹಿಸುತ್ತಿರುವ ಬಸವರಾಜ ಕಬ್ಬೂರ ಅವರ ಕಾರ್ಯ ಶ್ಲಾಘನಿಯವಾಗಿದೆ ಎಂದರು.

ಮುಖ್ಯ ಅತಿಥಿ ನಿವೃತ್ತ ಗೋಕಾಕ ಉಪಮಂಡಳ ಅಧಿಕಾರಿ ಬಿ.ಎಸ್.ಮಾಳಗಿ,ನಿವೃತ್ತ ಸಿಬ್ಬಂದಿ ಗೌರನ್ನವರ ಸಮಾರಮಂಭದ ಅದ್ಯಕ್ಷ ಮೂಡಲಗಿ ಉಪ ಮಂಡಳ ಅಧಿಕಾರಿ ಅರಣೋದಾಸ ಸಿಬ್ಬಂದಿಗಳ ಸೇವಾಮನೋಭಾವಕ್ಕೆ ಮೆಚ್ಚುಕೊಂಡು ಕೃತಜ್ಞತೆ ಸಲ್ಲಿಸಿ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿ ನೂತನವಾಗಿ ಆಗಮಿಸಿದ ಲೈನಮನ ಶಿಂಧೆ ಅವರನ್ನು ಸ್ವಾಗತಿಸಿದರು. ಸಿಬ್ಬಂದಿ ರಾಘವೇಂದ್ರ ಜೋಶಿ ವಂದಿಸಿದರು.

ಸದಾಶಿವ ಮುರಗೋಡ,ಮಹಾಂತೇಶ ಅಂಗಡಿ,ದರೆಪ್ಪ ಬಡಿಗೇರ,ಕುಮಾರ ಉಡುಪಿ.ಮಲೀಕ ಬಾಗವಾನ,ಭಗವಂತ ಪತ್ತಾರ,ಮಾರುತಿ ಬಡಿಗೇರ,ಕೃಷ್ಣ ಗಿರೆನ್ನವರ,ಪರಮಾನಂದ ಮದಲಮಟ್ಟಿ,ಜಿ.ಎನ್ ಕಾಶಿಕರ, ಗಿರಿಮಲ್ಲ ಸೌದಿ,ಪ್ರಕಾಶ ಉಪಾಸಿ,ಯಲ್ಲಪ್ಪ ಭಜಂತ್ರಿ,ಗುರುಸಿದ್ದ ಮುಗಳಿಹಾಳ,ಮಲ್ಲಪ್ಪ ಕಟ್ಟಿ ಇನ್ನಿತರರು ಇದ್ದರು.