ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ: ತಾಪಂ ಉಪಾಧ್ಯಕ್ಷ ವಿಶ್ವನಾಥ

ಲೋಕದರ್ಶನ ವರದಿ  

ಯಲಬುರ್ಗಾ  27: ತಾಲೂಕಿನಲ್ಲಿ ಹಲವಾರು ಗ್ರಾಮಗಳಲ್ಲಿ ಸಮಸ್ಯೆಗಳಿದ್ದು ಅವುಗಳನ್ನು ಶೀಘ್ರವಾಗಿ ಬಗೆಹರಿಸಬೇಕು ಎಂದು ತಾಪಂ ಉಪಾಧ್ಯಕ್ಷ ವೀಶ್ವನಾಥ ಮರಿಬಸಪ್ಪನವರ ಹೇಳಿದರು.

ಪಟ್ಟಣದ ತಾಪಂ ಸಭಾ ಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜನಪ್ರತಿನಿಧಿಯಾದವರು ಜನರ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲಾ ಇದರಿಂದ ನಾವು ಜನತೆಗೆ ಉತ್ತರ ಕೊಡಲು ಆಗುತ್ತಿಲ್ಲಾ ಅಧಿಕಾರಿಗಳ ಈ ಬೇಜವಾಬ್ದಾರಿ ವರ್ತನೆಗೆ ಬೆಸತ್ತು ಹೊಗಿದ್ದೇವೆ ಎಂದರು. ತಾಪಂ ಸದಸ್ಯ ಶರಣಪ್ಪ ಈಳಗೇರ ಮಾತನಾಡಿ ನಮ್ಮ ತಾಲೂಕಿನ ಗ್ರಾಪಂಗಳಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲಾ ಪಿಡಿಓಗಳು ಜನರ ಕೈಗೆ ಸಿಗುತ್ತಿಲ್ಲಾ ಪ್ರತಿ ದಿನ ಕಚೇರಿಗೆ ಅಲೆಯುವಂತಹ ಪರಸ್ಥಿತಿ ಇದೆ ಆಶ್ರಯ ಮನೆಗಳ ನಿಮರ್ಾಣದಲ್ಲಿ ಅತ್ಯಂತ ಇಂದುಳಿದಿದ್ದೇವೆ ಹಾಗೂ ಉದ್ಯೋಗ ಖಾತ್ರಿಯಲ್ಲಿಯೂ ಸಹಿತ ಯಾವುದೇ ಗುರಿ ಮುಟ್ಟಲು ಸಾಧ್ಯವಾಗುತ್ತಿಲ್ಲಾ ಎಂದರು.

ತಾಪಂ ಇಓ ಡಾ. ಡಿ ಮೋಹನ್ ಮಾತನಾಡಿ ನಮ್ಮ ತಾಲೂಕಿನಲ್ಲಿ ಪ್ರಾರಂಭವಾಗಿರುವ ಜಲಶಕ್ತಿ ಯೋಜನೆ ಯಶಸ್ವಿಗೆ ಜನಪ್ರತಿನಿಧಿಗಳು ಸಹಕಾರ ನೀಡಬೇಕು ನಿಮಗೆ ಸಂಬಂದಿಸಿದ ಗ್ರಾಮಗಳಲ್ಲಿ ಹೆಚ್ಚು ಹೆಚ್ಚು ಕೃಷಿ ಹೊಂಡಗಳ ನಿಮರ್ಾಣವಾಗಬೇಕು ಮತ್ತು ಇಗಾಗಲೇ ನಿಮರ್ಿಸಿದ ಕೃಷಿ ಹೊಂಡಗಳಲ್ಲಿ ನೀರು ಸಂಗ್ರಹವಾಗುವಂತೆ ನೋಡಿಕೊಳ್ಳಬೇಕು ಮತ್ತು ಜಲಶಕ್ತಿ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಕೆಲಸವಾಗಬೇಕು ಎಂದರು.

ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷೆ ಲಕ್ಷ್ಮೀ ದ್ಯಾಮನಗೌಡ್ರ, ಸ್ಥಾಯಿ ಸಮಿತಿ ಅಧ್ಯಕ್ಷ ರುದ್ರಪ್ಪ ಮರಕಟ್ ಸದಸ್ಯರಾದ ರಾಮಣ್ಣ ಹೊಸಮನಿ, ಗವಿಸಿದ್ದಪ್ಪ ಜಂತ್ಲಿ, ಶಿವಕುಮಾರ ಆದಾಪೂರ, ಸುಭಾಸ್ ಮಾದಿನೂರು, ದೇವಮ್ಮ ಕಾಮದೊಡ್ಡಿ, ಗೌರಮ್ಮ ನಾಗನೂರು, ಕವಿತಾ ಉಳ್ಳಾಗಡ್ಡಿ, ಸೇರಿದಂತೆ ಎಲ್ಲಾ ಸದಸ್ಯರು ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.