ಪೋಷಕಾಂಶಗಳ ಆಗರ ಸಿರಿಧಾನ್ಯಗಳ ಜಾಗೃತಿ ಅವಶ್ಯ: ಚಟ್ಟಿ

ಲೋಕದರ್ಶನ ವರದಿ

ಧಾರವಾಡ 10: ಸಿರಿಧಾನ್ಯಗಳು ಪೋಷಕಾಂಶಗಳ ಆಗರವಾಗಿದ್ದು, ಅವುಗಳ ಉಪಯೋಗದಿಂದ ಸರ್ವರೋಗಗಳನ್ನು ನಿಯಂತ್ರಿಸಲು ಹಾಗೂ ಹೋಗಲಾಡಿಸಲು ಸಾಧ್ಯವಿದೆ. ಸಿರಿಧಾನ್ಯಗಳನ್ನು ಹೆಚ್ಚು ಹೆಚ್ಚಾಗಿ ಬಳಕೆ ಮಾಡಿದರೆ ಉತ್ತಮ ಆರೋಗ್ಯವನ್ನು ಪಡೆಯಲು ಸಾಧ್ಯ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಂ. ಬಿ. ಚಟ್ಟಿ  ಹೇಳಿದರು.

                ಇಲ್ಲಿಯ ಕನರ್ಾಟಕ ವಿದ್ಯಾವರ್ಧಕ ಸಂಘವು ಪ್ರೊ. ಶಿವರಾಜ ಅಮೃತಪ್ಪ ಹೊಸಮನಿ ದತ್ತಿ ಅಂಗವಾಗಿ ಆಯೋಜಿಸಿದ್ದ `ಆರೋಗ್ಯಕ್ಕಾಗಿ ಸಿರಿಧಾನ್ಯ ಬಳಸಿರಿ' ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ  ಅವರು ಮಾತನಾಡುತ್ತಿದ್ದರು.

                ಸಂಶೋಧನೆ ಹಾಗೂ ವಿಸ್ತರಣೆಗಳಲ್ಲಿ ಸಿರಿಧಾನ್ಯಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯ ಮಾಡಲಾಗುತ್ತಿದೆ ಎಂದು ಹೇಳಿ, ಸಿರಿಧಾನ್ಯಗಳ ಬಗ್ಗೆ ಇನ್ನೂ ಹೆಚ್ಚಿನ ಜಾಗೃತಿ ಅವಶ್ಯ ಎಂದರು.

                ಸಿರಿಧಾನ್ಯ ಸಂಸ್ಕರಣ ಕೇಂದ್ರ ಸ್ಥಾಪಿಸಿ, ರೈತರು ತಂದ ಬೆಳೆಗಳ ಮಾರಾಟಕ್ಕೆ ಕೃಷಿ ವಿಶ್ವವಿದ್ಯಾಲಯದಿಂದ ವ್ಯವಸ್ಥೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದ ಅವರು, ಸಾರ್ವಜನಿಕರಿಗೆ ಹಣ್ಣುಹಂಪಲು, ತಾಜಾ ತರಕಾರಿ, ಶುದ್ಧ ಹಾಲುಗಳ ಜೊತೆಗೆ ಸಿರಿಧಾನ್ಯಗಳ ಹಾಗೂ ಸಿರಿಧಾನ್ಯಗಳ ಉತ್ಪನಗಳ ಮಾರಾಟಕ್ಕೆ ಮಳಿಗೆ ಸ್ಥಾಪಿಸುವ ಯೋಜನೆ ಇದೆಯೆಂದು ಹೇಳಿದರು.

                ದಿ. ಪ್ರೊ. ಎಸ್. . ಹೊಸಮನಿ ಅವರ ಸೇವೆಯನ್ನು ಕೊಂಡಾಡಿದ ಡಾ. ಚೆಟ್ಟಿ ಅವರು, ಅವರೊಬ್ಬ ಶ್ರೇಷ್ಠ ಕೃಷಿ ವಿಜ್ಞಾನಿ, ದಕ್ಷ ಆಡಳಿತಗಾರ, ವಸ್ತುನಿಷ್ಠ ಪ್ರಾಯೋಗಿಕ ಪ್ರಯೋಜನಕಾರಿ ಪ್ರಾಧ್ಯಾಪಕರಾಗಿದ್ದರು ಎಂದು ವಣರ್ಿಸಿದರು. ಇದೇ ಸಂದರ್ಭದಲ್ಲಿ  ಕೃಷಿ ವಿಶ್ವವಿದ್ಯಾಲಯದ ನೂತನ ಕುಲಪತಿಗಳಾಗಿ ನೇಮಕಗೊಂಡ ಡಾ. ಎಂ. ಬಿ. ಚಟ್ಟಿ ಅವರನ್ನು ಕನರ್ಾಟಕ ವಿದ್ಯಾವರ್ಧಕ ಸಂಘದ ಪರವಾಗಿ ಸನ್ಮಾನಿಸಲಾಯಿತು.

                ಕೃ.ವಿ.ವಿ. ಕೃಷಿ ವಿಸ್ತರಣಾ ನಿದರ್ೇಶಕ ಡಾ. ಆರ್. ಆರ್. ಪಾಟೀಲ ಉಪನ್ಯಾಸ ನೀಡುತ್ತಾ ದೇಶದಲ್ಲಿ ಆದ ಹಸಿರು ಕ್ರಾಂತಿಯಿಂದ ಹಣ ತರುವ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಪ್ರಾರಂಭಿಸಿದ್ದರಿಂದ ಶಕ್ತಿ ನೀಡುವ  ಸಿರಿಧಾನ್ಯ ಬೆಳೆಯುವುದನ್ನು ಕಡೆಗಣಿಸಲಾಯಿತು. ಬದಲಾದ ಕೃಷಿ ನೀತಿ, ಹೊಸ ಹೊಸ ಆಹಾರ ಪದ್ಧತಿಗಳಿಂದ ಸಿರಿಧಾನ್ಯಗಳ ಉಪಯೋಗ ಕಡಿಮೆಯಾಗುತ್ತಿದೆ. ಊಟದಲ್ಲಿ ಸಿರಿಧಾನ್ಯಗಳ ಬಳಕೆ ಕಡಿಮೆಯಾಗುತ್ತಿರುವುದರಿಂದ ಹಾಗೂ ಯುವ ಪೀಳಿಗೆ  ಜಂಕ್ ಫುಡ್, ಫಾಸ್ಟ್ ಫುಡ್ಗಳಿಗೆ ಮಾರುಹೋಗುತ್ತಿರುವುದರಿಂದ ಸಣ್ಣ ವಯಸ್ಸಿನಲ್ಲಿಯೇ ಅನಾರೋಗ್ಯಕ್ಕೆ ಬಲಿಯಾಗುತ್ತಿರುವುದು ವಿಷಾದನೀಯ ಎಂದರು.

                ಹಸಿರು ಕ್ರಾಂತಿಯಲ್ಲಿ ಹೆಚ್ಚಿನ ಕ್ರಿಮಿನಾಶಕ ಹಾಗೂ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಿರುವುದರಿಂದ ಮನುಷ್ಯನ ಆರೋಗ್ಯ ಹಾಗೂ ಪರಿಸರದ ಮೇಲೆ ಬಹಳಷ್ಟು ದುಷ್ಟರಿಣಾಮವಾಗುತ್ತಿದೆ. ಸಿರಿಧಾನ್ಯ ಸರ್ವರೋಗ ನಿವಾರಕವಾಗಿದ್ದರಿಂದ ಸಿರಿಧಾನ್ಯಗಳನ್ನು ಬೆಳೆಸಬೇಕು, ಬಳಸಬೇಕು ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರು.           

                ದತ್ತಿದಾನಿ ಕೃಷಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯ ಹಾಗೂ ಪ್ರಗತಿಪರ ಕೃಷಿಕ ಈಶ್ವರಚಂದ್ರ ಹೊಸಮನಿ ಮಾತನಾಡಿ, ತಮ್ಮ ತಂದೆಯವರು ಕೃಷಿ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಮೆಲುಕು ಹಾಕಿ, ಅವರ ಕಾರ್ಯವನ್ನು ಮುಂದುವರೆಸುವ ಭರವಸೆ ನೀಡಿದರು.

                ದಿ. ಪ್ರೊ. ಎಸ್. . ಹೊಸಮನಿ ಅವರ ಭಾವಚಿತ್ರಕ್ಕೆ ಪುಷ್ಪನಮನದೊಂದಿಗೆ ಗೌರವ ಸಲ್ಲಿಸಲಾಯಿತು. ವೇದಿಕೆಯಲ್ಲಿ ಸಂಘದ ಕಾಯರ್ಾಧ್ಯಕ್ಷ ಶಿವಣ್ಣ ಬೆಲ್ಲದ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿ ಸ್ವಾಗತಿಸಿದರು. ಕೋಶಾಧ್ಯಕ್ಷ ಕೃಷ್ಣ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಕಾರ್ಯದಶರ್ಿ ಸದಾನಂದ ಶಿವಳ್ಳಿ ನಿರೂಪಿಸಿದರು. ಕಾ.ಕಾ. ಸಮಿತಿ ಸದಸ್ಯ ಶಾಂತೇಶ ಗಾಮನಗಟ್ಟಿ ವಂದಿಸಿದರು.

                ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಸಂಘದ ಗೌರವ ಉಪಾಧ್ಯಕ್ಷ ಸೇತುರಾಮ ಹುನಗುಂದ ಪ್ರೊ. ವಿಜಯಕುಮಾರ ಗಿಡ್ನವರ ಶಿವಪುತ್ರ ಹೊನ್ನಳ್ಳಿ, ಡಾ. ನಲವಡಿ, ಡಾ ಮಹಾಂತೇಶ ನಾಯಕ, ಡಾ. ಆರ್. ಎಚ್. ಪಾಟೀಲ, ಡಾ. ಹಿಳ್ಳಿ, ಡಾ. ರಾಮನಗೌಡರ, ಡಾ. . ಶಿರಗುಪ್ಪಿ, ಬಿ. ಡಿ. ಪಾಟೀಲ, ಡಾ. ಬಸನಗೌಡ ಪಾಟೀಲ, ಡಾ. ಸಿ. ಜೆ. ಇಟ್ನಾಳ, ಡಾಬಿ. ಎಲ್. ಪಾಟೀಲ, ಡಾ. ಕಮತರ, ಡಾ. ಬಿ. ವಿ. ಪಾಟೀಲ, ಪಾರ್ವತಿ ಹಾಲಭಾವಿ, ಸಿ. ಯು. ಬೆಳ್ಳಕ್ಕಿ, ಅಶೋಕ ನಿಡವಣಿ ಹಾಗೂ ಹೊಸಮನಿ ಪರಿವಾರದವರು, ಅಭಿಮಾನಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.