ಲೋಕದರ್ಶನ ವರದಿ
ಬೈಲಹೊಂಗಲ 12: ಪಟ್ಟಣದ ಬಸವೇಶ್ವರ ಆಶ್ರಯ ಕಾಲೂನಿಯಲ್ಲಿರುವ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ ನಂ.8ರ ಮುಖ್ಯಶಿಕ್ಷಕರು ಶಾಲೆಗೆ ಚಕ್ಕರ ಹಾಕಿ ರಾಜಕೀಯ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಅವರನ್ನು ತಕ್ಷಣವೇ ವಗರ್ಾವಣೆ ಮಾಡಿ ಬೇರೆ ಮುಖ್ಯಶಿಕ್ಷಕರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿ ಶಾಲೆಯ ಸಲಹಾ ಸಮಿತಿ ಸದಸ್ಯರುಗಳು, ಪಾಲಕರು ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ದಿ.10ರಂದು ಮನವಿ ಸಲ್ಲಿಸಿದರು.
ಮುಖ್ಯ ಶಿಕ್ಷಕರಾಗಿರುವ ಬಿ.ಬಿ.ಬಸಕ್ರಿ ಅವರು ತಮ್ಮ ಕರ್ತವ್ಯದ ಜವಾಬ್ದಾರಿ ಮರೆತು ವರ್ತನೆ ಮಾಡುತ್ತಿದ್ದಾರೆ. ಶಿಕ್ಷಕ ವೃತ್ತಿಗೆ ಅಪಮಾನ ಮಾಡುವ ರೀತಿಯಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅವರನ್ನು ತಕ್ಷಣ ವಗರ್ಾವಣೆಗೊಳಿಸಿ ಬೇರೆ ಮುಖ್ಯಶಿಕ್ಷಕರನ್ನು ನೇಮಕಗೊಳಿಸಬೇಕು.
ಮಕ್ಕಳ ಉಜ್ವಲ ಭವಿಷ್ಯತ್ತಿನ ಬಗ್ಗೆ ಹೆಚ್ಚಿನ ಚಿಂತನೆ ಮಾಡಿ ಶಾಲೆಯ ಶಿಕ್ಷಣದ ಗುಣಮಟ್ಟ, ಶಾಲೆ ಸುಧಾರಣೆ ಬಗ್ಗೆ ಹೆಚ್ಚಿನ ರೀತಿಯಲ್ಲಿ ಕಾಳಜಿವಹಿಸುವ ಮುಖ್ಯಶಿಕ್ಷಕರನ್ನು ನೇಮಕಗೊಳಿಸಬೇಕು. ಇಲ್ಲವಾದರೆ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಎಸ್ಡಿಎಂಸಿ ಅಧ್ಯಕ್ಷ ಪುಂಡಲೀಕ ತಿಮ್ಮಾಪೂರ, ದುಗರ್ಾ ಯರಜವರ್ಿ, ಕಿರಣ ಬೆಳಗಾವಿಮಠ, ರಾಜು ತಳವಾರ, ಆನಂದ ಹೊಂಗಲ, ದಶರಥ ಮ್ಯಾಗೇರಿ, ನಿಖಿಲ ಅಡಕಿ ಇದ್ದರು.