ರೈಲು ಮಾರ್ಗ ನಿರ್ಮಾಣಕ್ಕೆ ವೇಗ ನೀಡಲು ಒತ್ತಾಯಿಸಿ ಮನವಿ

ಚಿಕ್ಕೋಡಿ 18: ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ ರೈಲು ಮಾರ್ಗ ನಿರ್ಮಾಣಕ್ಕೆ ವೇಗ ಕೊಡಬೇಕೆಂದು ಒತ್ತಾಯಿಸಿ  ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯು ಸಂಸದೆ ಪ್ರಿಯಾಂಕ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು. 

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕರಾಡ-ನಿಪ್ಪಾಣಿ-ಬೆಳಗಾವಿ ಮತ್ತು ಶೇಡಬಾಳ-ಅಥಣಿ-ವಿಜಯಪೂರ ಹೀಗೆ ರೈಲು ಯೋಜನೆಗಳು 2010-2011 ರಲ್ಲಿ ಸಮೀಕ್ಷೆಯಾಗಿ ಅನುಮೋದನೆ ಸಹ ಯುಪಿಎ ಸರಕಾರದಲ್ಲಿ ದೊರಕಿದೆ, ಆದರೆ ದಶಕಗಳು ಕರೆದರೂ, ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಇನ್ನೂ ಕಾಮಗಾರಿ ಆರಂಭವಾಗಿಲ್ಲ ಮತ್ತು ಕುಡಚಿ-ಬಾಗಲಕೋಟ ರೈಲು ಮಾರ್ಗದ ಕಾಮಗಾರಿ ದಶಕಗಳಿಂದ ಆಮೆ ಗತಿಯಲ್ಲಿ ಸಾಗುತ್ತಲಿದೆ, ಈ ಕುರಿತು ಸಾಕಷ್ಟು ಸಲ ಈ ಭಾಗದ ಜನರು ಸರಕಾರಕ್ಕೆ ಒತ್ತಾಯಿಸಿದ್ದಾರೆ,  

ರಾಜಕಾರಣಿಗಳ ಆಸಕ್ತಿಯ ಕೊರತೆಯಿಂದ ಈ ಭಾಗದ ಬಹು ದಿನಗಳ ಬೇಡಿಕೆಯಾದ ಈ ರೈಲು ಯೋಜನೆಗಳು ಕರಾಡ-ನಿಪ್ಪಾಣಿ-ಬೆಳಗಾವಿ ಮತ್ತು ಶೇಡಬಾಳ-ಅಥಣಿ-ವಿಜಯಪೂರ ಕಾಮಗಾರಿ ಆರಂಭವಾಗಿಲ್ಲ, ಹಾಗಾಗಿ ತಮ್ಮ ಅಧಿಕಾರ ಅವಧಿಯಲ್ಲಿ ಈ ಭಾಗದ ರೈಲ ಯೋಜನೆಗಳನ್ನು ಆರಂಭಿಸಿ ಪೂರ್ಣಗೊಳಿಸಬೇಕು ಹಾಗೂ ಕುಡಚಿ-ಬಾಗಲಕೋಟ ಕಾಮಗಾರಿ ಸಹ ಪೂರ್ಣವಾಗಬೇಕು ಎಂದು ಒತ್ತಾಯಿಸಿದರು. 

 ಸಮಾಜ ಸೇವಕರಾದ ಚಂದ್ರಕಾಂತ ಹುಕ್ಕೇರಿ ಮಾತನಾಡಿ ತಾವುಗಳು ದಯಮಾಡಿ ಸಂಸತ್ತಿನಲ್ಲಿ ಈ ರೈಲು ಯೋಜನೆಯ ಬಗ್ಗೆ ಮಾತನಾಡಬೇಕು ಮತ್ತು ಈ ಕಾಮಗಾರಿಗಳನ್ನು ಕೂಡಲೇ ಆರಂಭಿಸಬೇಕು ಎಂದರು. 

ಈ ಕುರಿತು ಮಾತನಾಡಿದ ಸಂಸದೆ ಪ್ರಿಯಾಂಕ ಅವರು ತಮ್ಮ ಮನವಿಯ ಪ್ರಕಾರ ಸಂಸತ್ತಿನಲ್ಲಿ ಚರ್ಚೆ ಮಾಡಿ ಕಾಮಗಾರಿಗಳನ್ನು ಆರಂಭಿಸಲು, ಶತ ಪ್ರಯತ್ನ ಮಾಡುತ್ತೇನೆ ಮತ್ತು ತಮ್ಮ ಬೇಡಿಕೆಗಳನ್ನು ಪೂರೈಸುತ್ತೇನೆ ಎಂದರು. 

ಸಂಜು ಬಡಿಗೇರ, ಸಂಜಯ ಪಾಟೀಲ, ಮಾಳಪ್ಪಾ ಕರೆಣ್ಣವರ, ಖಾನಪ್ಪಾ ಬಾಡ, ಅಮೂಲ ನಾವಿ, ರಮೇಶ ಡಂಗೇರ, ದುಂಡಪ್ಪಾ ಗುರವ, ವಿಶಾಲ ಮೇತ್ರೆ, ವಿಠ್ಠಲ ಢವಳೆ, ಜೀವನ ಮಾಂಜರೇಕರ, ಉದಯ ವಾಘಮಾರೆ, ಫಿರೋಜ ಕಲಾವಂತ, ಕುಮಾರ ನಂದಿ, ರಾಜು ಸೊಲ್ಲಾಪುರೆ, ಅಶ್ವತ ಮಾಳಕರಿ, ಮಹೇಂದ್ರ ಕರ್ನೂರೆ, ರಾಜು ಕೋಟಗಿ ಹಾಗೂ ಅನೇಕ ಜನ ಹೋರಾಟಗಾರರು ಉಪಸ್ಥಿತರಿದ್ದರು.