ನಕಲಿ ವೈದ್ಯರ ವಿರುದ್ದ ಸಮರ : ಬೆಳಗಾವಿಯ ಎರಡು ಕ್ಲಿನಿಕ್ ಗಳ ಮೇಲೆ ಆರೋಗ್ಯ ಅಧಿಕಾರಿಗಳ ದಾಳಿ

ಬೆಳಗಾವಿ : ದಿನ ದಿನಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿರುವದನ್ನು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಮರ ಸಾರಿದ್ದು, ಬೆಳಗಾವಿಯ ಎರಡು ನಕಲಿ ವೈದ್ಯರ ಕ್ಲಿನಿಕ್ ಗಳ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ಇಂದು ದಾಳಿ ಮಾಡಿದ್ದಾರೆ. 

    ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಬಡ್ಕಲ ಗಲ್ಲಿಯ ಎರಡೂ ಕ್ಲಿನಿಕ್ ಮೇಲೆ ಮಂಗಳವಾರ ದಾಳಿ‌ ನಡೆಸಿದ ಘಟ‌ನೆ‌‌‌ ನಡೆದಿದೆ. ಕಿತ್ತೂರಿನ ನಕಲಿ ವೈದ್ಯ ಪ್ರಕರಣ ಬೆನ್ನಲ್ಲೆ ಎಚ್ಚೆತ್ತುಕ್ಕೊಂಡಿರುವ ಆರೋಗ್ಯ ಇಲಾಖೆ  ಸಾರ್ವಜನಿಕರಿಂದ ದೂರು ಬಂದ ಕ್ಲಿನಿಕ್ ಮೇಲೆ ದಾಳಿ ನಡೆಸಿ ನಕಲಿ ವೈದ್ಯರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಿದ್ದಾರೆ. 

ಜಿಲ್ಲೆಯ ನಕಲಿ ವೈದ್ಯರ ಮೇಲೆ ಹದ್ದಿನ ಕಣ್ಣು ಇಟ್ಟಿರುವ ಆರೋಗ್ಯ ಇಲಾಖೆ ನಗರದ ಬಡ್ಕಲ್ ಗಲ್ಲಿಯ ಎರಡು ಆಸ್ಪತ್ರೆಗಳ ಮೇಲೆ ದಾಳಿ ನಡೆಸಿ ಆಸ್ಪತ್ರೆಯ ‌ಸಿಬ್ಬಂದಿಯಿಂದ‌‌ ಮಾಹಿತಿ ಪಡೆದರು. 

ಅಲ್ಲದೆ ಶಿವ್ ಕ್ಲಿನಿಕ್ ಗೆ ನೋಟಿಸ್ ನೀಡಲಾಗಿದೆ. ಇಂದಿನ ದಾಳಿಯು ಡಿಎಚ್ ಓ ಮಹೇಶ ಕೋಣಿ, ಟಿಎಚ್ ಓ ಸಂಜಯ್ ಡುಮ್ಮಗೋಳ, ಬೆಳಗಾವಿ ತಹಶಿಲ್ದಾರರ ನೇತೃತ್ವದಲ್ಲಿ ದಾಳಿ ನಡೆಯಿತು.

     ಈ ಕುರಿತು ಡಿಎಚ್ಓ ಮಹೇಶ ಕೋಣಿ ಮಾಹಿತಿ ನೀಡಿ, ಬಡಕಲಗಲ್ಲಿ ಶಿವಾ ಕ್ಲಿನಿಕ್ ಎಂದು ನಾಮಫಲಕ ಹಾಕಿ ಅದರಲ್ಲಿ  ಔಷಧಿಗಳನ್ನು ಬೇರೆ ನೀಡುತ್ತಿದ್ದರು. ಇವರು ಪಡೆದಿರುವ ದಾಖಲಾತಿ ನಕಲಿ ಇರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಶಿವಾ ಕ್ಲಿನಿಕ್ ಎಂದು ನಾಮಫಲಕ ಹಾಕಿ ಬೇಕಾಬಿಟ್ಟಿ ಔಷಧಿಗಳನ್ನು ನೀಡುತ್ತಿದ್ದಾರೆ ಎಂದು ದೂರುಗಳು ಬಂದ ಹಿನ್ನೆಲೆಯಲ್ಲಿ ಈ ದಾಳಿ ಮಾಡಲಾಗಿದೆ ಎಂದು ಡಿಎಚ್ ಓ ಮಹೇಶ ಕೋಣಿ ತಿಳಿಸಿದರು.