ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮ: ಡಾ.ಸತೀಶ್ ತಿವಾರಿ

ಮುದ್ದೇಬಿಹಾಳ 26: ಜಿಲ್ಲಾ ಪಂಚಾಯತ ವಿಜಯಪುರ ಜಲ ಜೀವನ ಮಿಷನ್ (ಜೆಜೆಎಂ) ಮತ್ತು ಸ್ವಚ್ಛ ಭಾರತ್ ಮಿಷನ್ (ಎಸ್‌ಬಿಎಂ) ಯೋಜನೆ ಅಡಿಯಲ್ಲಿ ತಾಲೂಕಿನ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.  

ಕಾರ್ಯಾಗಾರದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಆರ್ ಎಸ್ ಹಿರೇಗೌಡರ ಕಾರ್ಯಾಗಾರಕ್ಕೆ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.  

ತಾಲೂಕ ಆರೋಗ್ಯ ಅಧಿಕಾರಿ ಡಾ.ಸತೀಶ್ ತಿವಾರಿ ಮಾತನಾಡಿ ಮಳೆಗಾಲ ಪ್ರಾರಂಭವಾಗಿದ್ದು ಕಾರಣ ನೀರಿನಿಂದ ಹರಡುವ ಸಾಂಕ್ರಾಮಿಕ ರೋಗಗಳಾದ ಕರುಳು ಬೇನೆ ಕಾಲರ, ಕಾಮಾಲೆ, ವಿಸಮಶೀತ ಜ್ವರ ಇತ್ಯಾದಿ ಹಾಗೂ ಬಹು ದಿನಗಳವರೆಗೆ ನೀರಿನಲಿ, ಈಡೀಸ್ ಸೊಳ್ಳೆ ಸಂತಾನೋತ್ಪತ್ತಿ ಮಾಡುವುದರಿಂದ ಹಾಗೂ ಸೊಳ್ಳೆಗಳಿಂದ ಹರಡುಬಹುದಾದ ಡೆಂಗ್ಯೂ ಚಿಕುನಗುನ್ಯ ಇನ್ನಿತರ ರೋಗಗಳು ಹೆಚ್ಚಿನ ಪ್ರಮಾಣದಲಿ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಈಗಾಗಲೇ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರಿಂದ ನಿಯಮಿತವಾಗಿ ಈಡಿಸ್ ಲಾರ್ವ ಸಮೀಕ್ಷೆ ಹಾಗೂ ಕುಡಿಯುವ ನೀರಿನ ಮೂಲಗಳಿಂದ ನೀರಿನ ಮಾದರಿಗಳು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.  

ಮುನ್ನೆಚ್ಚರಿಕೆಯಾಗಿ ರೋಗಗಳು ಹರಡದಂತೆ ಗ್ರಾಮ ಪಂಚಾಯತಿಯಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು. ಎಲ್ಲ ಕುಡಿಯುವ ನೀರಿನ ಟ್ಯಾಂಕರ್‌ಗಳನ್ನು ಕೋರಿನೆಷನ್ ಮಾಡಿಸಿ (ಬೀಚಿಂಗ್ ಪೌಡರ್ ಹಾಕಿಸಿ) ಶುದ್ಧ ಕುಡಿಯುವ ನೀರನ್ನು ಒದಗಿಸುವುದು. ಕೈ ಪಂಪುಗಳು, ಮಿನಿ ವಾಟರ್ ಟ್ಯಾಂಕ್ ಸುತ್ತಮುತ್ತ, ನೀರು ನಿಲ್ಲದಂತೆ ನೋಡಿಕೊಳ್ಳುವುದು, ಗ್ರಾಮಗಳಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ತಗ್ಗು ಗುಂಡಿಗಳನ್ನು ಮುಚ್ಚಿಸಿ ನೀರು ನಿಲ್ಲದಂತೆ ನೋಡಿಕೊಳ್ಳುವುದು, ನೀರಿನ ಸರಬರಾಜು ಪೈಪಿನಲ್ಲಿ ಸೋರಿಕೆ ಇದ್ದಲ್ಲಿ, ತಕ್ಷಣವೇ ದುರಸ್ತಿ, ಅಥವಾ ಬದಲಾಯಿಸುವುದು. ಕುಡಿಯುವ ನೀರಿನ ಸರಬರಾಜುಗಳ ಕನಿಷ್ಠ 100 ಅಡಿ ಸುತ್ತಮುತ್ತಲು ತಿಪ್ಪೆಗುಂಡಿ ಕಸ ಕಡ್ಡಿ, ಹಾಗೂ ವಿಸರ್ಜನೆ ಮಾಡದಂತೆ ಕಡ್ಡಾಯವಾಗಿ ನಿಷೇಧಿಸುವುದು. 

ಸೊಳ್ಳೆಗಳಿಂದ ಹರಡುವ ರೋಗಗಳಾದ ಮಲೇರಿಯ, ಆನೆಕಾಲು ರೋಗ ಡೆಂಗೂ ಜ್ವರ, ಚಿಕೂನ್ ಗುನ್ಯಾ ಹರಡದಂತೆ ಗ್ರಾಮದಲ್ಲಿ ಆರೋಗ್ಯ ಇಲಾಖೆ ಸಹಯೋಗದಲ್ಲಿ ಪಾಗಿಂಗ್ ವ್ಯವಸ್ಥೆ ಮಾಡುವುದು. ಶುದ್ಧ ನೀರಿನ ಘಟಕಗಳು ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳುವುದು. ಒಟ್ಟಾರೆ ಗ್ರಾಮಗಳಲ್ಲಿ ನೈರ್ಮಲ್ಯವನ್ನು ತೃಪ್ತಿಕರವಾಗಿ ನಿರ್ವಹಿಸಲು ಸಭೆಯಲ್ಲಿ ಪಾಲ್ಗೊಂಡ ಎಲ್ಲ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದರು. 

ನಂತರ  ವ್ಹಿ.ಬಿ.ಡಿ ಮೇಲ್ವಿಚಾರಕ ಎಸ್ ಸಿ ರುದ್ರವಾಡಿ ಇವರು ಪಿಪಿಟಿ ಮೂಲಕ  ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ಸ್ಲಾಯಿಡ್ ಹಾಕಿ ತೋರಿಸಿ ಮಾಹಿತಿ ನೀಡಿದರು ಹಾಗೂ ಕೆಎಚ್‌ಪಿಟಿ ಸ್ಫೂರ್ತಿ ಯೋಜನೆಯಲ್ಲಿ ಕಾರ್ಯನಿರ್ವಸುತ್ತಿರುವ ಕೋರ್ಡಿನೇಟರ್ ರ​‍್ಪದಮಾವತಿ ರಡ್ಡೆರ್ ಅವರು ಮಾತನಾಡಿ ಕಾವಲು ಸಮಿತಿಯ ಉದ್ದೇಶಗಳನ್ನು ತಿಳಿಸಿ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ಕಾವಲು ಸಮಿತಿಯನ್ನು ರಚನೆ ಮಾಡಿ ಪ್ರತಿ ತಿಂಗಳು ಸಭೆಯನ್ನು ಮಾಡಬೇಕಾಗುತ್ತದೆ ಇದಕ್ಕೆ ಗ್ರಾಮ ಪಂಚಾಯತಿಯಿಂದ ಸಹಕಾರ ನೀಡಬೇಕೆಂದು ತಿಳಿಸಿದರು. 

ಕಾರ್ಯಗಾರದಲ್ಲಿ ಜಿಲ್ಲಾ ಪಂಚಾಯತ್ ಕಾರ್ಯಾಲಯದ ಪುನೀತ್ ತಲ್ಲೂರ ಜಿಲ್ಲಾ ಸ್ವಚ್ಛ ಭಾರತ್ ಸಂಯೋಜಕರು ಐಇಸಿ ಎಕ್ಸ್ಪರ್ಟ್ರರ್ ಭೀಮಪ್ಪ ಲೋಕಪೂರ್ ಶಿವಾನಂದ ಬಡಿಗೇರ್ ಬಸಮ್ಮ ಹಾಗೂ ತಾಲೂಕ ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅನುಸೂಯೆ ತೆರೆದಾಳ ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ ಯಲ್ಲಪ್ಪ ಚಲವಾದಿ ಎಂ ಎಸ್ ಗೌಡರ ಹಾಜರಿದ್ದರು.