ಲೋಕದರ್ಶನ ವರದಿ
ಮೂಡಲಗಿ 24: ಪ್ರತಿ ದಿನ ಮುಂಜಾನೆ 4ಗಂಟೆಗೆ ಔರಾದದಿಂದ (ಬೀದರ) ಮೂಡಲಗಿ ಮಾರ್ಗವಾಗಿ ಬೆಳಗಾವಿಗೆ ಹೋಗುವ ಬಸ್ ಬರದೆ ಇದ್ದ ಕಾರಣ ಪ್ರಯಾಣಿಕರಿಗೆ ತೊಂದರೆಯಾಗಿದೆ ಇದನು ಸರಿಪಡಿಸಬೇಕೆಂದು ಶುಭೋದಯ ಸ್ವಾಬಿಮಾನಿ ಕನ್ನಡ ಸಂರಕ್ಷಣಾ ವೇದಿಕೆಯ ಸದಸ್ಯರು ಇಂದು ಮೂಡಲಗಿ ಸಾರಿಗೆ ನಿಯಂತ್ರಣಾಧಿಕಾರಿ ಎಸ್,ಎಸ್ ಯಲಿಗಾರ ಅವರಿಗೆ ಮನವಿ ನೀಡಿದರು,
ವೇದಿಕೆಯ ಅಧ್ಯಕ್ಷ ಸುಭಾಸ ಕಡಾಡಿ ಮಾತನಾಡಿ, ಪ್ರತಿದಿನ ಹಲವಾರು ಪ್ರಯಾಣಿಕರು ಈ ಬಸನ್ನು ಅವಲಂಬಿಸಿದ್ದಾರೆ ಆದರೆ ಅಕ್ಟೋಬರ 23 ಮತ್ತು 24 ರಂದು ಎರಡು ದಿನಗಳಿಂದ ಈ ಬಸ್ ಬಾರದೆ ಜನರಿಗೆ ತೊಂದರೆಯಾದರೆ ಅದನು ಸರಿ ಪಡಿಸಲು ಮೇಲಾಧಿಕಾರಿಗೆ ಮನವಿ ನೀಡುವದು ಅವಶ್ಯವಾಗಿದೆ ಎಂದರು.
ಮೂಡಲಗಿ ತಾಲೂಕಾ ಕೇಂದ್ರವಾಗಿದರಿಂದ ಪ್ರಯಾಣಿಕರ ಸಂಖ್ಯೆ ದಿನೆ ದಿನೆ ಹೆಚ್ಚಾಗುತ್ತಿದೆ ಮತ್ತು ಕೇಲವು ಬಸಗಳು ಗುರ್ಲಾಪೂರದಿಂದ ಹೊರಮಾರ್ಗವಾಗಿ ಹೋಗುತ್ತವೆ ಇದರಿಂದ ಪರೀಕ್ಷೆಗೆ ಅಥವಾ ಸಂದರ್ಶನಕ್ಕೆ ಹಾಜರಾಗುವ ವಿಧ್ಯಾರ್ಥಿಗಳಿಗೂ ಇದರಿಂದ ತೊಂದರೆಯಾಗಿದೆ ಕೊಡಲೆ ಇದನ್ನು ಸರಿ ಪಡಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ,
ಈ ಸಮಯದಲ್ಲಿ ವೇಧಿಕೆಯ ಸದಸ್ಯರಾದ ಶಿವಬಸು ಗಾಡವಿ,ಶಿವು ಪಿರೋಜಿ,ಕೇಶವ ಎಮ್ ದೇಸಾಯಿ,ಬಾಳಯ್ಯಾ ಹಿರೇಮಠ, ರವಿ ನೇಸೂರ, ಶ್ರೀನಿವಾಸ ಗೀರೆನ್ನವರ, ಸ್ವಾಮಿ ವೀವೆಕಾನಂದ ಸಂಸ್ಥೆಯ ಅಧ್ಯಕ್ಷ ಸಂತ್ರಾಮ ನಾಶಿ ಕಾರ್ಯದರ್ಶಿ ಶಿವಾನಂದ ಮುಧೋಳ ಉಪಸ್ಥಿತರಿದ್ದರು.