ಎಲ್ಪಿಜಿ ದರ ಕಡಿಮೆ ಮಾಡಬೇಕೆಂದು ವತ್ತಾಯಿಸಿ ಮನವಿ

ಲೋಕದರ್ಶನ ವರದಿ 

ಬೆಳಗಾವಿ : ಆಟೋ ಸಂಚಾರವಿಲ್ಲದ ನಗರ,ಮಹಾನಗರಗಳನ್ನು ಉಹಿಸುವದು ಬಲು ಕಷ್ಟ.  ಪ್ರಸ್ತೂತ  ನಿಯಮಾವಳಿಗಳನ್ನು ಗಮನಿಸಿದರೆ  ಆಟೋ ಚಾಲಕನು ತನ್ನ ಕುಟುಂಬವನ್ನು ನಡೆಸುವದು ಅಸಾಧ್ಯ.  ಬಹುತೇಕ ಆಟೋಗಳು ಎಲ್ಪಿಜಿ  ಬಳಸುತ್ತಿದ್ದರೂ ಅದರ ಬೆಲೆ ಗಗಣಕ್ಕೆರಿದೆ. ಪ್ರತಿ ಲೀಟರ್ಗೆ ರೂ. 29/- ಇದ್ದಾಗ ಪ್ರತಿ  ಯುನಿಟ್ ದರ ರೂ. 25/- ಪಡಿಸಲಾಗಿತ್ತು.ಆದರೆ ಇಗ ಬೆಲೆ ಪ್ರತಿ ಲೀಟರ್ ಗೆ ರೂ.50 ಆದರೂ ಸಹ ಯುನಿಟ್ ಬೆಲೆ ಮಾತ್ರ ಅಷ್ಟೇ ಇದೆ ಎಂದು ಆಟೋ ಚಾಲಕರು  ಕನರ್ಾಟಕ ರಕ್ಷಣಾ ವೇದಿಕೆಯವರ ಜೋತೆಗೂಡಿ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಮಂಗಳವಾರ ನಗರದ ಕನ್ನಡ ಸಾಹಿತ್ಯ ಭವನದಿಂದ ಪ್ರತಿಭಟನೆಯನ್ನು ಮಾಡುತ್ತ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ತಮ್ಮ ಬೇಡಿಕೆಗನ್ನು ಅಂದರೆ ಪ್ರತಿ ಲೀಟರ್ ರೂ.50 ಎದ್ದು ಅದನ್ನು 40ಕ್ಕೆ ಇಳಿಸಬೇಕು, ನಗರದಲ್ಲಿ ಕೇವಲ 2-3  ಕಡೆಗೆ ಎಲ್ಪಿಜಿ ಪಂಪ್ಗಳು ಇದ್ದು ಇನ್ನೂ 3-4 ಕಡೆಗೆ ಲಭ್ಯವಾಗುವಂತೆ ಕ್ರಮ ಕೈಗೋಳ್ಳಬೇಕು, ರೂ. 25 ಪ್ರತಿ ಯೂನಿಟ್ ದರವನ್ನು ಪರಿಶೀಲಿಸಿ, ಪರಿಷ್ಕರಿಸಿ ಹೆಚ್ಚಳ ಮಾಡಿ ಕೊಡಬೇಕು ಎಂದು ಆಗ್ರಹಿಸಿದರು.

ಕಳೆದ ತಿಂಗಳ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆಗೆ  ಕಡಿವಾಣ ಹಾಕಿ ರಾಜ್ಯದ ಜನರ ಪರವಾಗಿ ಮುಖ್ಯಮಂತ್ರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.ಇದೇ ರೀತಿಯಲ್ಲಿ ವಾಹನ ಬಳಕೆಯ ಎಲ್ಪಿಜಿ ದರವನ್ನು ಇಳಿಕೆ ಮಾಡಿ ನಮ್ಮ ಬೇಡಿಕಗಳನ್ನು ಇಡೇರಿಸುವ ಕೂಡಲೇ ಜರುಗಿಸಿ ರಾಜ್ಯದ ಲಕ್ಷಾಂತರ ಆಟೊ ಚಾಲಕ ಮತ್ತು ಕುಟುಂಬಸ್ಥರಿಗೆ ನೆಮ್ಮದಿಯ ಜೀವನ ನಡೆಸಲು ಅನುವು ಮಾಡಿಕೊಡಬೇಕೆಂದು ಕೇಳಿಕೊಂಡರು.