ಲೋಕದರ್ಶನ ವರದಿ
ಬೆಳಗಾವಿ,8: 7 ದಿನಗಳ ಒಳಗಾಗಿ ಮಹಾದಾಯಿ ಬಗ್ಗೆ ನ್ಯಾಯಾಲಯ ನೀಡಿರುವ ತೀಪರ್ಿನ ಅಧಿಸೂಚನೆ ಹೊರಡಿಸಬೇಕು ಮತ್ತು ಮಹಾದಾಯಿ ಕಳಸಾ ಬಂಡೂರಿಗೆ ಕಟ್ಟಲಾಗಿರುವ ತಡೆಗೋಡೆಯನ್ನು ತೆರವುಗೊಳಿಸಬೇಕು ಎಂದು ರೈತ ಸಂಘಟನೆಗಳು ಆಗ್ರಹಿಸಿವೆ.
ಈ ಕುರಿತು ಶುಕ್ರವಾರದಂದು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳಲು ಅನುಕೂಲವಾಗಲು ತಡೆಗೋಡೆ ತೆರವುಗಳಿಸುವದು ಅನಿವಾರ್ಯವಾಗಿದೆ. 7 ದಿನಗಳೊಳಗಾಗಿ ಗೋಡೆ ತೆರವುಗಳಿಸಬೇಕು. ತೆರವುಗೊಳಿಸಲು ಸಾಧ್ಯವಾಗದಿದ್ದರೆ ಸೂಕ್ತ ಕಾರಣ ನೀಡಬೇಕು. ಈ ದಿಸೆಯಲ್ಲಿ ತಮ್ಮಿಂದ ಯಾವುದೆ ಪ್ರತಿಕ್ರಿಯೆ ಬಾರದಿದ್ದರೆ, ಅದು ಗೋಡೆ ತೆರವುಗೊಳಿಸಲು ತಮ್ಮ ಸಮ್ಮತಿ ಇದೆ ಎಂದು ಭಾವಿಸಿ ನಾವೇ ಗೋಡೆಯನ್ನು ತೆರವುಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನೊಂದು ಮನವಿಯಲ್ಲಿ, ಇತ್ತೀಚೆಗೆ ನಡೆದ ವಿಧಾನ ಸಭೆಯ ಅಧಿವೇಶನದಲ್ಲಿ ರಾಜ್ಯ ಸರಕಾರವು ಸದನದಲ್ಲಿ ಯಾವ ಚಚರ್ೆಯನ್ನು ನಡೆಸದೇ ಅಂಗೀಕರಿಸಿ, ರಾಜ್ಯಪಾಲರ ಅನುಮೋದನೆಗೆ ಕಳುಹಿಸಿರುವ ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ ವ್ಯವಸ್ಥೆಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕ ಹಕ್ಕು ತಿದ್ದುಪಡಿ ಮಸೂದೆಯು ಸಂಪೂರ್ಣವಾಗಿ ರೈತ ವಿರೋಧಿಯಾಗಿರುವದರಿಂದ ಆ ಮಸೂದೆಯನ್ನು ತಕ್ಷಣ ವಾಪಸ್ ಪಡೆಯಬೇಕು ಎಂದು ಆಗ್ರಹಿಸಲಾಗಿದೆ.
ವಿವಿಧ ಕಾಮಗಾರಿಗಳಿಗಾಗಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಸ್ವಾಧೀನ ಪಡಿಸಿಕೊಳ್ಳುವ ರೈತರ ಜಮೀನುಗಳಿಗೆ ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟು ದರ ನೀಡಬೇಕು ಎಂದು ಕೇಂದ್ರ ಸರಕಾರ 2014 ರಲ್ಲಿ ಜಾರಿಗೆ ತಂದಿದ್ದ ಕಾಯ್ದೆಯಿಂದಾಗಿ ರೈತರಿಗೆ ಅನುಕೂಲಕರ ಪರಿಹಾರ ದೊರೆಯುತ್ತಿತ್ತು. ಭೂಮಿ ಕಳೆದುಕೊಳ್ಳುವ ರೈತರು ಆದಾಯದ ಮೂಲವೆ ಇಲ್ಲದಂತಾಗುವದರಿಂದ ದೊಡ್ಡ ಮೊತ್ತದ ಪರಿಹಾರ ದೊರೆಯುವದರಿಂದ ಭೂಮಿ ಕಳೆದುಕೊಂಡಿರುವ ರೈತರಿಗೆ ಬದುಕಿಗೆ ಆಸರೆಯಾಗುತ್ತಿತ್ತು.
ಆದರೆ, ಈಗ ರಾಜ್ಯ ಸರಕಾರ ವಜಾರಿಗೆ ತಂದಿರುವ ತಿದ್ದುಪಡಿಯಲ್ಲಿ ರೈತರಿಗೆ ಮಾರುಕಟ್ಟೆ ದರದಷ್ಟೆ ಪರಿಹಾರ ನೀಡಬೇಕು ಎಂಬುವದು ಮತ್ತು ಒಂದೆ ಪ್ರದೇಶದ ಜಮೀನಿಗೆ ಬೇರೆ ಬೇರೆ ಮೊತ್ತದ ಪರಿಹಾರ ನೀಡಬಹುದು ಎಂದು ಉಲ್ಲೇಖಿಸಿರುವದು ರೈತ ವಿರೋಧಿಯಾಗಿದೆ.
ತಕ್ಷಣ ಈ ತಿದ್ದುಪಡಿ ಮಸೂದೆಯನ್ನು ತಕ್ಷಣ ಹಿಂಪಡೆಯಬೇಕು. ರೈತರಿಗೆ ಸಾಧ್ಯವಾದಷ್ಟು ಹೆಚ್ಚಿನ ಪರಿಹಾರ ದೊರೆಯುವಂತಹ ಮತ್ತು ಜಮೀನು ಸ್ವಾಧೀನ ಪಡಿಸಿಕೊಳ್ಳುವಾಗ ರೈತರ ಅನುಮತಿ ಪಡೆಯಬೇಕು ಎಂಬ ಕಾನೂನು ಜಾರಿಗೆ ತರಬೇಕು. ಈ ದಿಸೆಯಲ್ಲಿ ತಕ್ಷಣ ಕ್ರಮ ಜರುಗಿಸದಿದ್ದರೆ, ರೈತರಿಂದ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಕೃಷಿಕ ಸಮಾಜ (ಸಂಯುಕ್ತ)ದ ಅಧ್ಯಕ್ಷ ಸಿದಗೌಡ ಮೋದಗಿ, ಬಸವ ಭೀಮ ಸೇನೆಯ ಆರ್.ಎಸ್.ದಗರ್ೆ, ರೈತ ಮುಖಂಡರಾದ ಗುರುಗೌಡ ಪಾಟೀಲ, ಗುರುರಾಜ ಹುಳೇರ, ಧಾರವಾಡದ ಶಂಕರ ಅಂಬಲಿ, ಹುಬ್ಬಳ್ಳಿಯ ವಿಕಾಸ ಸೊಪ್ಪಿನ, ಬದಾಮಿಯ ಮಧುಸೂಧನ ತಿವಾರಿ, ಗದಗನ ಬಸವರಾಜ ಸಾಬಳೆ, ಹಾವೇರಿಯ ಶೇಖರಗೌಡ ಪಾಟೀಲ, ಶಿವಾನಂದ ಕರಿಗಾರ, ಬಾಗಲಕೋಟೆಯ ಗಂಗಾಧರ ಮೇಟಿ, ವಿಜಯಪುರದ ಲಕ್ಷ್ಮಣ ಭಕ್ಕಯ್ಯ, ನಿಪ್ಪಾಣಿಯ ಶೇತ್ಕರಿ ಸಂಘಟನೆಯ ರಮೇಶ ಪಾಟೀಲ, ಶಕುಂತಲಾ ತೇಲಿ, ಅಜರ್ುನ ಗಾವಡಾ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.