ಲೋಕದರ್ಶನ ವರದಿ
ಬೈಲಹೊಂಗಲ 20: ಬೆಳಗಾವಿ ಜಿಲ್ಲೆ ವಿಭಜನೆ ಮಾಡಬಾರದು, ಒಂದು ವೇಳೆ ಅನಿವಾರ್ಯವಾದಲ್ಲಿ ಉಪವಿಭಾಗಕೇಂದ್ರವಾದ ಬೈಲಹೊಂಗಲವನ್ನು ನೂತನ ಜಿಲ್ಲಾ ಕೇಂದ್ರ ಮಾಡುವಂತೆ ಒತ್ತಾಯಿಸಿ ಬೆಳಗಾವಿ ಜಿಲ್ಲಾ ವಿರೋಧಿ ಹೋರಾಟ ಸಮಿತಿ ಸದಸ್ಯರು ಸಹಕಾರ ಸಚಿವ ಬಂಡೆಪ್ಪಕಾಶಂಪುರಅವರಿಗೆ ಮನವಿ ಅಪರ್ಿಸಿದರು.
ಬೆಳಗಾವಿ ಜಿಲ್ಲೆ ವಿಭಜಿಸಿದರೆ ಮರಾಠಿಗರ ಪ್ರಾಬಲ್ಯ ಹೆಚ್ಚಾಗುವುದರ ಜತೆಗೆ ಗಡಿ ಕನ್ನಡಿಗರ ಮೇಲೆ ಹಲ್ಲೆ ನಡೆಯಬಹುದು, ಆದ್ದರಿಂದಯಾವುದೇಕಾರಣಕ್ಕೂ ಬೆಳಗಾವಿ ಜಿಲ್ಲೆ ವಿಭಜನೆ ಮಾಡದೆ, ಬೆಳಗಾವಿ ಜಿಲ್ಲೆ ಅಖಂಡವಾಗಿರುವಂತೆ ಕಾಳಜಿವಹಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಸಕ ಮಹಾಂತೇಶ ಕೌಜಲಗಿ, ಜಿ.ಪಂ.ಸದಸ್ಯ ಶಂಕರ ಮಾಡಲಗಿ, ಮುಖಂಡರಾದ ಶಿವರಂಜನ ಬೋಳಣ್ಣವರ, ಮಹಾಂತೇಶ ತುರಮರಿ, ಸಿ.ಕೆ.ಮೆಕ್ಕೇದ, ಮಡಿವಾಳಪ್ಪಾ ಹೋಟಿ, ರಾಜಶೇಖರ ಮೂಗಿ, ರಾಜುಜನ್ಮಟ್ಟಿ, ಮಹೇಶ ಬೆಲ್ಲದ, ಮಹೇಶ ಹರಕುಣಿ, ಬಾಬು ಕುಡಸೋಮಣ್ಣವರ, ಕುಮಾರ ದೇಶನೂರ, ಮಹಾಂತೇಶ ಮತ್ತಿಕೊಪ್ಪ, ಎಫ್.ಎಸ್.ಸಿದ್ಧನಗೌಡರ, ಈರಣ್ಣಾ ಬೆಟಗೇರಿ, ಮಾರುತಿ ತಿಗಡಿ, ವಿರೂಪಾಕ್ಷ ಕೋರಿಮಠ, ಇದ್ದರು.